ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು ಕಂಡಿದ್ದಾಳೆ. ಪೊಲೀಸ್ ಎಂದು ಕಂಠಪೂರ್ತಿ ಕುಡಿದಿದ್ದಾನೆ. ಆದರೆ ಈತನ ಆಟಾಟೋಪಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.

ಕೆಲ ಮುಗಿಸಿ ಮನೆಗೆ ಮರಳುತ್ತಿದ್ದ 24ರ ಹರೆಯದ ಯುವತಿ ನಿಕಿತಾ ರಸ್ತೆಯಲ್ಲೇ ದುರಂತ ಸಾವು ಕಂಡಿದ್ದಾಳೆ. ಈ ಸಾವು ಅಚಾನಕ್ಕಾಗಿ, ಆಕಸ್ಮಿಕವಾಗಿ ಸಂಭವಿಸಿದ್ದಲ್ಲ, ಪೊಲೀಸಪ್ಪನ ಅವಾಂತರಕ್ಕೆ ಅಮಾಯಕ ಯುವತಿ ಬಲಿಯಾದ ಘಟನೆ ಹರ್ಯಾಣದಲ್ಲಿ ನಡೆದಿದೆ. ದೆಹಲಿಯಿಂದ ಹರ್ಯಾಣಕ್ಕೆ ಮರಳುತ್ತಿದ್ದ ಯುವತಿ ಪೊಲೀಸ್ ಉದ್ಧಟತನಕ್ಕೆ ಬಲಿಯಾಗಿದ್ದಾಳೆ.

ಗುರುಗಾಂವನಲ್ಲಿ ಕೆಲಸ ಮಾಡುತ್ತಿರುವ ನಿಕಿತ ಕೆಲಸ ಮುಗಿಸಿ ಅಂಬಾಲಾಗೆ ಮರಳಿದ್ದಾಳೆ. ಅಂಬಾಲದಿಂದ ಮನೆಗೆ ತೆರಳಲು ಇ ರಿಕ್ಷಾ ಮೂಲಕ ತೆರಳಿದ್ದಾಳೆ. ಇ ರಿಕ್ಷಾ ಮೂಲಕ ತೆರಳುತ್ತಿದ್ದ ವೇಳೆ ಕಂಠಪೂರ್ತಿ ಕುಡಿದ ಪೊಲೀಸ್ ಅಧಿಕಾರಿ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬಂದು ಇ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಇ ರಿಕ್ಷಾದಲ್ಲಿದ್ದ ನಿಕಿತಾ ನೆಲಕ್ಕೆ ಬಿದ್ದಿದ್ದಾಳೆ. ಈಕೆಯ ಮೇಲಿಂದ ಪೊಲೀಸಪ್ಪನ ಕಾರು ಹರಿದಿದೆ. ಪರಿಣಾಮ ಸ್ಥಳದಲ್ಲೇ ನಿಕಿತಾ ಮೃತಪಟ್ಟಿದ್ದಾಳೆ.

ಅಂಬಾಲಾ ಸೇತುವೆ ಬಳಿ ಘಟನೆ ನಡೆದಿದೆ. ಸ್ಥಳದಿಂದ ಎಸ್ಕೇಪ್ ಆಗಲು ಪೊಲೀಸಪ್ಪ ಯತ್ನಿಸಿದ್ದಾನೆ. ಆದರೆ ಪೊಲೀಸರು ಪೊಲೀಸ್ ಹಿಡಿದಿದ್ದಾರೆ. ಇತ್ತ ನಿಖಿತಾಳನ್ನು ಸ್ಥಳೀಯರು ಸಿಟಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಘಟನೆ ಸಂಬಂಧ ಇ ರಿಕ್ಷಾ ಚಾಲಕನ ಹೇಳಿಕೆ ದಾಖಲಿಸಲಾಗಿದೆ. ನಾಲ್ವರು ಪ್ರಯಾಣಿಕರು ಇ ರಿಕ್ಷಾದಲ್ಲಿದ್ದರು. ಈ ಪೈಕಿ ಮೃತಪಟ್ಟ ಯುವತಿ ಬದಿಯಲ್ಲಿ ಕುಳಿತಿದ್ದರು. ವೇಗವಾಗಿ ಬಂದ ಕಾರು ಇ ರಿಕ್ಷಾಗೆ ಡಿಕ್ಕಿಯಾಗಿದೆ. ಪರಿಣಾಮ ಯುವತಿ ಕೆಳಕ್ಕೆ ಬಿದ್ದಿದ್ದಾಳೆ. ತಕ್ಷಣವೇ ಕಾರು ನಿಲ್ಲಿಸಿದರೂ ಅಪಾಯದ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ ಪೊಲೀಸ್ ಡಿಕ್ಕಿಯಾದ ಬಳಿಕ ವೇಗ ಹೆಚ್ಚಿಸಿದ್ದಾರೆ. ಪರಿಣಾಮ ಕಾರು ಯುವತಿ ಮೇಲಿಂದ ಹರಿದಿದೆ ಎಂದು ಇ ರಿಕ್ಷಾ ಚಾಲಕ ಹೇಳಿದ್ದಾರೆ.

ಆಸ್ಪತ್ರೆಗೆ ದೌಡಾಯಿಸಿದ ಪೋಷಕರು ಮಗಳ ಕಳೆದುಕೊಂಡ ನೋವಿನಲ್ಲಿ ಕಣ್ಣೀರಿಟ್ಟಿದ್ದಾರೆ. ಇತ್ತ ಕುಟುಂಬಸ್ಥರು ಆಪ್ತರು ಆಗಮಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆ ಮುಂಭಾಗ ಭಾರಿ ಹೈಡ್ರಾಮವೇ ನಡೆದಿದೆ. ಇತ್ತ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಭದ್ರತೆ ಒದಗಿಸಿದ್ದಾರೆ.

Source link
ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು