ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​

ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​

ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದ್ದು, ಚಿರು ದೀಪಾಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಇಬ್ಬರೂ ಒಂದಾಗಿದ್ದಾರೆ. ಆದರೆ, ಸೌಂದರ್ಯಳ ಕುತಂತ್ರ ಇನ್ನೂ ಬಯಲಾಗಬೇಕಿದ್ದು, ಹೊಸ ಸೀರಿಯಲ್‌ಗಳ ಪ್ರೊಮೋದಿಂದಾಗಿ ಬ್ರಹ್ಮಗಂಟು ಅಂತ್ಯವಾಗುವ ಸೂಚನೆ ಸಿಕ್ಕಿದೆ.
ಬ್ರಹ್ಮಗಂಟು ಸೀರಿಯಲ್​ (Brahmagantu) ಚಿರು ಮತ್ತು ದೀಪಾ ಅಭಿಮಾನಿಗಳನ್ನು ಫುಲ್​ ಖುಷ್​ ಮಾಡಿದ್ದಾರೆ. ಇನ್ನೇನು ಪ್ರೇಮಿಗಳ ದಿನಕ್ಕೆ ಎರಡೇ ದಿನ ಬಾಕಿ ಇರುವಾಗಲೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ.

ಇದೀಗ ನರಸಿಂಹನಿಗೆ ಸತ್ಯದ ಅರಿವಾಗಿದೆ. ಅದೇ ರೀತಿ, ಚಿರು, ದೀಪಾಗೆ ಬಾಗಿನ ತಂದು ಕಾಲಿಗೆ ಉಂಗುರ ತೊಡಿಸುವ ಮೂಲಕ, ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಈ ಮೂಲಕ ಚಿರು ಮತ್ತು ದೀಪಾ ಒಂದಾಗಿದ್ದಾರೆ.

ಚಿರು ಮೇಲಿದ್ದ ಕೋಪ ದೀಪಾಗೆ ಕಡಿಮೆಯಾಗಿದ್ದರೂ, ಚಿರು ನೇರವಾಗಿ ಇಷ್ಟಪಡುತ್ತೇನೆ ಎಂದು ಹೇಳುವವರೆಗೂ ಆತನ ಜೊತೆ ಹೋಗಲ್ಲ ಎಂದು ಹಟ ಹಿಡಿದಿದ್ದಳು. ಅದೇ ಇನ್ನೊಂದೆಡೆ ದೀಪಾಳ ಅಣ್ಣ ನರಸಿಂಹ ಕೂಡ ಚಿರು ಬಗ್ಗೆ ತಪ್ಪು ತಿಳಿದುಕೊಂಡಿದ್ದ.

ಇನ್ನೇನಿದ್ದರೂ ಚಿರುಗೆ ದೀಪಾನೇ ದಿಶಾ ಎನ್ನುವ ಸತ್ಯ ಗೊತ್ತಾಗಬೇಕಿದೆ. ಸತ್ಯ ಗೊತ್ತಾದರೆ ಏನಾಗುತ್ತದೋ ತಿಳಿದಿಲ್ಲ. ಅದೇ ಇನ್ನೊಂದೆಡೆ, ಸೌಂದರ್ಯಳ ಕುತಂತ್ರವೂ ಬಯಲಾಗಬೇಕಿದೆ.

ಅರ್ಚನಾ ಮತ್ತು ರಾಹುಲ್​ ಕೂಡ ಒಂದಾಗುವುದು ಬಾಕಿ ಇದೆ. ಇಷ್ಟಾದರೆ ಸೀರಿಯಲ್​ ಒಂದು ಅಂತ್ಯಕ್ಕೆ ಬರಲಿದೆ. ಆದರೆ ಸದ್ಯ ಅದು ಮುಗಿಯುವ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಇದಾಗಲೇ ಎರಡು ಹೊಸ ಸೀರಿಯಲ್​ಗಳ ಪ್ರೊಮೋ ಬಿಡುಗಡೆಯಾಗಿರುವ ಕಾರಣದಿಂದ ಪುಟ್ಟಕ್ಕನ ಮಕ್ಕಳ ಜೊತೆ ಇನ್ಯಾವ ಸೀರಿಯಲ್​ ಮುಗಿಯಲಿದೆ ಎನ್ನುವ ಕುತೂಹಲವಿದೆ. ಅದು ಬ್ರಹ್ಮಗಂಟೇ ಇರಬೇಕು ಎನ್ನುವುದು ಹಲವರ ಅಭಿಮತ.

Source link

Leave a Reply

Your email address will not be published. Required fields are marked *