Nipah ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ,ಅಲರ್ಟ್ ಘೋಷಣೆ | Nipah Virus Infected West Bengal Nurse Dies Of Cardiac Arrest Confirms Health Ministry

Nipah ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ,ಅಲರ್ಟ್ ಘೋಷಣೆ | Nipah Virus Infected West Bengal Nurse Dies Of Cardiac Arrest Confirms Health Ministry



Nipah ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ,ಅಲರ್ಟ್ ಘೋಷಣೆ | Nipah Virus Infected West Bengal Nurse Dies Of Cardiac Arrest Confirms Health Ministry

ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಭೀತಿ ಆವರಿಸಿದೆ. ನರ್ಸ್ ಸಾವಿನ ಬೆನ್ನಲ್ಲೇ ಎಲ್ಲೆಡೆ ಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೋಲ್ಕತಾ (ಫೆ.12) ಭಾರತದಲ್ಲಿ ನಿಫಾ ವೈರಸ್ ಪ್ರಕರಣ ನಿಧಾನವಾಗಿ ಆತಂಕ ಸೃಷ್ಟಿಸುತ್ತಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನಿಫಾ ವೈರಸ್‌ಗೆ ಆತಂಕ ಹೆಚ್ಚಿಸುತ್ತಿದೆ. ಇತ್ತ ನರ್ಸ್ ಒಬ್ಬರು ನಿಫಾ ವೈರಸ್ ಸೋಂಕಿಂತ ಆಸ್ಪತ್ರೆ ದಾಖಲಾಗಿತ್ತು. ನರ್ಸ್ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಾ ಸಾಗಿದೆ. ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸ್ ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವೆಂಟಿಲೇಟರ್ ಸಪೂರ್ಟ್‌ನಲ್ಲಿದ್ದ ನರ್ಸ್

ಜನವರಿ 11 ರಂದು ಪಶ್ಚಿಮ ಬಂಗಾಳದ ಎರಡು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಬರಸಾತ್ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರದ ನರ್ಸ್ ನಿಫಾ ವೈರಸ್‌ ಸೋಂಕಿನಿಂದ ಬಳಲಿದ್ದರು. ಜನವರಿ ಮೂರನೇ ವಾರದಲ್ಲಿ ನಿಫಾ ವೈರಸ್ ಸೋಂಕಿನಿಂದ ನರ್ಸ್ ಆರೋಗ್ಯ ತೀವ್ರ ಹದಗೆಟ್ಟಿತ್ತು. ಜನವರಿ ಅಂತ್ಯಕ್ಕೆ ನರ್ಸ್ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಇಂದು (ಫೆ.12) ಹೃದಯಾಘಾತಕ್ಕೆ ನರ್ಸ್ ಬಲಿಯಾಗಿದ್ದಾರೆ.

ಆಸ್ಪತ್ರೆ ಮೂಲಗಳು ಹೇಳುವುದೇನು?

ನಿಫಾ ವೈರಸ್‌ನಿಂದ ನರ್ಸ್ ಆರೋಗ್ಯ ಕ್ಷೀಣಿಸಿತ್ತು. ಇದೇ ವೇಳೆ ನರ್ಸ್ ಇತರ ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದರು.ಸತತ ಚಿಕಿತ್ಸೆ ಮೂಲಕ ನಿಫಾ ವೈರಸ್‌ನಿಂದ ಚೇತರಿಸಿಕೊಂಡಿದ್ದರು. ಆದರೆ ಇತರ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು. ಹೀಗಾಗಿ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಇಂದು ಹೃದಯಾಘಾತಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಕೋಮಾಗೆ ಜಾರಿದ್ದ ನರ್ಸ್

ನಿಫಾ ವೈರಸ್‌ನಿಂದ ನರ್ಸ್ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ನರ್ಸ್ ರೋಗ ನಿರೋಧಕ ಶಕ್ತಿ ಕುಂದಿತ್ತು. ಹೀಗಾಗಿ ನರ್ಸ್ ಕೋಮಾಗೆ ಜಾರಿದ್ದರು. ಪರಿಣಾಮ ನರ್ಸ್ ಲಂಗ್ ಇನ್‌ಫೆಕ್ಷನ್ ಇಂಜೆಕ್ಷನ್ ನೀಡಲಾಗಿತ್ತು. ಹಲವು ಆರೋಗ್ಯ ಸಮಸ್ಯೆ ನರ್ಸ್ ಆರೋಗ್ಯಕ್ಕೆ ಕುತ್ತು ತಂದಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಡಿಸೆಂಬರ್ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಈ ಪೈಕಿ ಒಬ್ಬ ಪುರುಷ ನರ್ಸ್ ಚೇತರಿಸಿಕೊಂಡು ಆಸ್ಪತ್ರೆಯಿದಂ ಬಿಡುಗಡೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಪ್ರಕರಣದ ಸಂಪರ್ಕಿತರ ಪರೀಕ್ಷೆ ಮಾಡಲಾಗಿದೆ. ಇದು ನೆಗಟೀವ್ ಆಗಿದೆ. ಹೀಗಾಗಿ ಜನರು ನಿರಾಳರಾಗಿದ್ದಾರೆ. ಇತ್ತ ನರ್ಸ್ ಬಲಿಯಾಗುತ್ತಿದ್ದಂತೆ ತೀವ್ರ ಮುನ್ನಚ್ಚೆರಿಕೆ ವಹಿಸಲಾಗುತ್ತಿದೆ.



Source link

Leave a Reply

Your email address will not be published. Required fields are marked *