Bigg Boss ನನಗೊಂದು ಅಮೂಲ್ಯ ರತ್ನ ಕೊಟ್ಟಿದೆ: ಮೊದಲ ಬಾರಿಗೆ ಬಹಿರಂಗಗೊಳಿಸಿದ ಅಶ್ವಿನಿ ಗೌಡ

Bigg Boss ನನಗೊಂದು ಅಮೂಲ್ಯ ರತ್ನ ಕೊಟ್ಟಿದೆ:  ಮೊದಲ ಬಾರಿಗೆ ಬಹಿರಂಗಗೊಳಿಸಿದ ಅಶ್ವಿನಿ ಗೌಡ

Bigg Boss ನನಗೊಂದು ಅಮೂಲ್ಯ ರತ್ನ ಕೊಟ್ಟಿದೆ:  ಮೊದಲ ಬಾರಿಗೆ ಬಹಿರಂಗಗೊಳಿಸಿದ ಅಶ್ವಿನಿ ಗೌಡ

ಬಿಗ್​ಬಾಸ್​ 12ರ 2ನೇ ರನ್ನರ್​ ಅಪ್​ ಆದ ಅಶ್ವಿನಿ ಗೌಡ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ನೋವಿನ ನಡುವೆಯೂ ಬಿಗ್​ಬಾಸ್​​ ತಮಗೊಂದು ಅಮೂಲ್ಯ ರತ್ನ ನೀಡಿದೆ ಎಂದು ಹೇಳಿದ್ದಾರೆ. ಏನದು ರತ್ನ?

Bigg Boss ಮುಗಿದ ಮೇಲೆ, ಬಿಗ್​ಬಾಸ್​ ಸ್ಪರ್ಧಿಗಳು ಇನ್ನೂ ಅದರ ಮೆಲುಕು ಹಾಕುತ್ತಲೇ ಇದ್ದಾರೆ. ಹಲವರು ಬಿಗ್​ಬಾಸ್​ ಜರ್ನಿಯ ಬಗ್ಗೆ ಖುಷಿಯಿಂದ ನುಡಿಯುತ್ತಿದ್ದರೆ, ಮತ್ತೆ ಕೆಲವರು ಇನ್ನೂ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

ಜಗಳದ ಮೂಲಕವೇ ಫಿನಾಲೆವರೆಗೂ ತಲುಪಿದ ಅಶ್ವಿನಿ ಗೌಡ (Ashwini Gowda) ಅವರ ಆಟವನ್ನು ನೋಡಿದ ಹಲವರು ಇವರೇ ವಿನ್​ ಆಗುತ್ತಾರೆ ಎಂದು ಹೇಳಿದ್ದರು. ಇಲ್ಲದೇ ಹೋದರೆ ಮೊದಲ ರನ್ನರ್​ ಅಪ್​ ಆದರೂ ಆಗಬಹುದು ಎಂದಿದ್ದರು. ಆದರೆ ಅವರು 2ನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಈ ಬಗ್ಗೆ ಅಶ್ವಿನಿ ಗೌಡ ಬಿಗ್​ಬಾಸ್​ನಿಂದ ಹೊರ ಬಂದ ಮೇಲೆ ಮಾಧ್ಯಮದವರ ಎದುರು ತುಂಬಾ ಅಸಮಾಧಾನ ಹೊರಹಾಕಿದ್ದು ಇದೆ. ಇದು ಕಾಮಿಡಿ ಷೋ ಅಲ್ಲ, ವ್ಯಕ್ತಿತ್ವದ ಆಟ ಎನ್ನುವ ಮೂಲಕ ಗಿಲ್ಲಿ ನಟನ ಗೆಲುವಿಗೆ ಅಸಮಾಧಾನ ಪಟ್ಟುಕೊಂಡಿದ್ದರು.

ಜೊತೆಗೆ, ತಮ್ಮಂಥ ಟಫ್​ ಸ್ಪರ್ಧಿ ಹಿಂದೆಂದೂ ಇರಲಿಲ್ಲ. ಮುಂದೆ ಏನಾದ್ರೂ ಬಂದರೆ ನನ್ನನ್ನು ಮೀರಿರಬೇಕು ಎನ್ನುವ ಮೂಲಕ, ಬಿಗ್​ಬಾಸ್​ ಫಲಿತಾಂಶದ ಬಗ್ಗೆ ನೋವಿನಿಂದ ನುಡಿಯುತ್ತಲೇ ಬಂದವರು ಅಶ್ವಿನಿ ಗೌಡ (Bigg Boss Ashwini Gowda).

ಇದೀಗ ಅವರು ಬಿಗ್​ಬಾಸ್​​ನ ಅನುಭವವನ್ನು ಹಂಚಿಕೊಳ್ಳುತ್ತಾ, ನನಗೆ ಬಿಗ್​ಬಾಸ್​​ ಅಮೂಲ್ಯ ರತ್ನ ನೀಡಿದೆ. ಅದು ಎಂದರೆ, ಜಾಹ್ನವಿ ಎಂದಿದ್ದಾರೆ. ಜಾಹ್ನವಿಯಂಥ ಸ್ನೇಹಿತೆ ನನಗೆ ಸಿಕ್ಕಿದ್ದಾರೆ ಎಂದು ಖುಷಿಯಿಂದ ನುಡಿದಿದ್ದಾರೆ.

ನಾನು ಅವರನ್ನು ಜಾನು ಎಂದೇ ಕರೆಯುವುದು. ಈ ಸ್ನೇಹ, ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದುಕೊಳ್ಳುತ್ತೇನೆ. ಸ್ನೇಹ ಎಂದರೆ ಸುಖದಲ್ಲಿ ಭಾಗಿಯಾಗುವುದು ಮಾತ್ರವಲ್ಲ. ಬಿಗ್​ಬಾಸ್​ನ ನೂರಾರು ದಿನಗಳ ಪಯಣದಲ್ಲಿ ನಿಜವಾದ ಸ್ನೇಹ ಎನ್ನುವುದು ಸಿಗುವುದಿಲ್ಲ. ಅದನ್ನು ನಾನು ಜಾಹ್ನವಿ ಅವರಲ್ಲಿ ಪಡೆದುಕೊಂಡೆ ಎಂದಿದ್ದಾರೆ.

Source link

Leave a Reply

Your email address will not be published. Required fields are marked *