ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ

ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ


‘ಜನ ನಾಯಕನ್’ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದೇ ಇರುವುದೇ ಸಿನಿಮಾ ರಿಲೀಸ್ ವಿಳಂಬ ಆಗಲು ಕಾರಣ. ಹೀಗಾಗಿ, ಈವರೆಗೆ ಸಿನಿಮಾ ರಿಲೀಸ್ ಆಗಿಲ್ಲ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ರಿಲೀಸ್ ಬ್ರೇಕ್ ಬೀಳುವ ಲಕ್ಷಣ ಇತ್ತು. ಆದರೆ, ತಕ್ಷಣ ತೆಗೆದುಕೊಂಡ ನಿರ್ಧಾರದಿಂದ ಸಿನಿಮಾ ರಿಲೀಸ್ ಗೆ ನೀಡಲಾಗುತ್ತಿದೆ. ಅದು ಬಾಲಿವುಡ್ ನ ‘ಘುಸ್ಕೋರ್ ಪಂಡತ್’.

ಮನೋಜ್ ಬಾಜ್ಪಾಯಿ ನಟನೆಯ ‘ಘುಸ್ಕೋರ್ ಪಂಡತ್’ ಸುತ್ತ ವಿವಾದದ ಹುಟ್ಟು ಬೆಳೆದಿದೆ. ಈ ಸಿನಿಮಾದ ಟೈಟಲ್ ವಿವಾದಕ್ಕೆ ಕಾರಣ. ಈ ಸಿನಿಮಾದ ಟೈಟಲ್ ನ ಕನ್ನಡಕ್ಕೆ ತರ್ಜಮ್ಯ ಮಾಡಿದರೆ, ‘ಭ್ರಷ್ಟ ಅರ್ಚಕರು’ ಎಂಬ ಅರ್ಥ ಕೊಡುತ್ತದೆ. ಹೀಗಾಗಿ, ಇದಕ್ಕೆ ಅರ್ಚಕರ ವರ್ಗ ಧ್ವನಿ ಎತ್ತಿತ್ತು.

ಜೈಪುರದಲ್ಲಿರುವ ಸರ್ವ ಬ್ರಾಹ್ಮಿಣ್ ಮಹಾಸಭಾ ಅವರು ಈ ಟೈಟಲ್ ವಿರುದ್ಧ ಧ್ವನಿ ಎತ್ತಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಹತ್ತಿತು. ಟೈಟಲ್ ಬದಲಾವಣೆ ಮಾಡೋವರೆಗೆ ಸಿನಿಮಾ ರಿಲೀಸ್ ಗೆ ಅವಕಾಶ ನೀಡುವುದಿಲ್ಲ ಎನ್ನುವ ಮಾತು ಕೇಳಿ ಬಂದವು. ಈಗ ಪ್ರಕರಣದಲ್ಲಿ ನೆಟ್ಫ್ಲಿಕ್ಸ್ ಕೋರ್ಟ್ಗೆ ತನ್ನ ನಿರ್ಧಾರವನ್ನು ಹೊಂದಿದೆ.

‘ಘುಸ್ಕೋರ್ ಪಂಡತ್ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ತಂಡ ನಿರ್ಧರಿಸಿದೆ. ಸಧ್ಯ ಉದ್ಭವಿಸಿರುವ ಕಳವಳದ ನಿರ್ಮಾಪಕರು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ’ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ನ ‘ಘೂಸ್‌ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ

ಸದ್ಯ ನೆಟ್‌ಫ್ಲಿಕ್ಸ್‌ಗೆ ಸಿನಿಮಾ ರಿಲೀಸ್ ಮಾಡಲು ಒಪ್ಪಿಗೆ ಸೂಚಿಸಿದೆ. ಒಂದೊಮ್ಮೆ ಸಿನಿಮಾ ರಿಲೀಸ್ ನಂತರ ಮತ್ತಷ್ಟು ವಿವಾದಗಳು ಎದ್ದರೆ ಆಗ ಸಿನಿಮಾಗೆ ಬ್ಯಾನ್ ಬೀತಿ ಎದುರಾಗಬಹುದು ಎಂದು ಹೇಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:00 pm, ಗುರುವಾರ, 12 ಫೆಬ್ರವರಿ 26



Source link

Leave a Reply

Your email address will not be published. Required fields are marked *