Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

Bigg Boss ಗಿಲ್ಲಿ ನಟನ ಜತೆ ಹನಿಮೂನ್​: ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!
ಕಲರ್ಸ್ ಕನ್ನಡದ ‘ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ 12ರ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರೊಮೋವೊಂದರಲ್ಲಿ, ಗಿಲ್ಲಿ ನಟನ ಜೊತೆ ಹನಿಮೂನ್‌ಗೆ ಹೋಗುವ ಬಗ್ಗೆ ಕಾವ್ಯಾ ಶೈವ ಬಾಯ್ತಪ್ಪಿ ಹೇಳಿದ್ದು ವೈರಲ್ ಆಗಿದೆ.
ಬಿಗ್​ಬಾಸ್​ 12 (Bigg Boss 12)ರ ಸ್ಪರ್ಧಿಗಳನ್ನು ಒಟ್ಟಿಗೇ ನೋಡುವ ಅವಕಾಶವನ್ನು ಕಲರ್ಸ್ ಕನ್ನಡ ವಾಹಿನಿ ದೊಡ್ಮನೆ ಹಬ್ಬದ ಮೂಲಕ ನೀಡಲಿದೆ. ಇದೇ 14ರಂದು ಇದು ಟಿವಿಯಲ್ಲಿ ಪ್ರಸಾರ ಆಗಲಿದೆ.

ಅದಕ್ಕೆ ಮುಂಚೆ ಸೋಷಿಯಲ್​ ಮೀಡಿಯಾದಲ್ಲಿ ಕೆಲವೊಂದು ಪ್ರೊಮೋಗಳನ್ನು ವಾಹಿನಿ ಶೇರ್ ಮಾಡಿಕೊಂಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದದ್ದು, ಕಾವ್ಯಾ ಶೈವ ಅವರು ಬಾಯ್ತಪ್ಪಿ ಗಿಲ್ಲಿ ನಟನ ಜೊತೆ ಹನಿಮೂನ್​ಗೆ ಹೋಗುವ ಬಗ್ಗೆ ಹೇಳಿದ್ದು!

ಅಷ್ಟಕ್ಕೂ, ನೀವು ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ ಎನ್ನೋದನ್ನು ನೋಡುವುದಾಗಿ ನಿರೂಪಕಿ ಸುಷ್ಮಾ ಕೆ. ರಾವ್​ ಹೇಳಿದ್ದಾರೆ. ಮೊದಲಿಗೆ ಬಂದವರು ಬಿಗ್​ಬಾಸ್​ನ ಇನ್ನೊಂದು ಜೋಡಿ ರಾಶಿಕಾ ಮತ್ತು ಸೂರಜ್​ ಸಿಂಗ್​.

ರಾಶಿಕಾಗೆ ಇಷ್ಟದ ಊಟ ಯಾವುದು ಎಂದು ಪ್ರಶ್ನಿಸಿದಾಗ, ಚಿಕನ್​ ಬಿರಿಯಾನಿ ಎಂದು ಸೂರಜ್​ ಸಿಂಗ್​ ಸರಿಯಾದ ಉತ್ತರ ಕೊಟ್ಟಿದ್ದು, ಅದಕ್ಕೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಬಳಿಕ, ಗಿಲ್ಲಿ ನಟ, ಕರಿಬಸಪ್ಪ ಅವರಿಗೆ ರಕ್ಷಿತಾ ಶೆಟ್ಟಿ ಏನೆಂದು ಕರೆಯುತ್ತಾಳೆ ಎಂದಾಗ ಕಾವ್ಯಾ ಶೈವ ಕರಿಬಸೊಪ್ಪು ಎಂದಾಗ ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಕರಿಬಸಪ್ಪ ಅವರು ಅಯ್ಯೋ ಎಂದು ತಲೆ ಮೇಲೆ ಕೈಹೊತ್ತು ಕುಳಿತರು.

ಬಳಿಕ ಗಿಲ್ಲಿ ನಟ, ನಾನು ನಿನ್ನನ್ನು ಏನು ಮಾಡುತ್ತಿದ್ದೀನಿ ಎಂದು ಪ್ರಶ್ನಿಸಿದಾಗ, ಕಾವ್ಯಾ ಶೈವ ಲವ್​ ಮಾಡ್ತಾ ಇದ್ದಿಯಾ ಎಂದಿದ್ದಾರೆ (Gilli Nata Loves Kavya Shaiva). ಬಳಿಕ ಗಿಲ್ಲಿ ನಟ ನಾನು, ನೀನು ಹೋಗೋಣ ಎಂದುಕೊಂಡಿದ್ವಲ್ಲ ಎಲ್ಲಿಗೆ ಎಂದು ಪ್ರಶ್ನಿಸಿದಾಗ ಕಾವ್ಯಾ ಶೈವ ಹನಿಮೂನ್​ ಎಂದುಬಿಟ್ಟಿದ್ದಾರೆ! ಆದ ಸುಷ್ಮಾ ಅವರು ಅಬ್ಬಬ್ಬಾ ಹನಿಮೂನಾ ಎಂದಾಗ ಎಲ್ಲರೂ ನಗೆಗಡಲಿನಲ್ಲಿ ತೇಲಿ ಹೋಗಿದ್ದಾರೆ. ಬಳಿಕ ಕಾವ್ಯಾ ಅವರು ನಾಚಿ ನೀರಾಗಿದ್ದಾರೆ.

Source link

Leave a Reply

Your email address will not be published. Required fields are marked *