
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 13, ಶುಕ್ರವಾರದ ದ್ವಾದಶ ರಾಶಿಗಳ ಫಲಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಏಕಾದಶಿ, ಮೂಲ ನಕ್ಷತ್ರ, ವಜ್ರ ಯೋಗ, ಬಾಲಕ ವರ್ಣ ಇರುತ್ತದೆ. ರಾಹುಕಾಲವು ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 12:33 ರವರೆಗೆ ಇರುತ್ತದೆ. ಸಂಕಲ್ಪ ಕಾಲವು ಮಧ್ಯಾಹ್ನ 12:34 ರಿಂದ ಮಧ್ಯಾಹ್ನ 2:01 ರವರೆಗೆ ಇರುತ್ತದೆ.
ಇಂದು ಕುಂಭ ಸಂಕ್ರಮಣದ ವಿಶೇಷ ದಿನವಾಗಿದ್ದು, ಸೂರ್ಯ ಭಗವಾನ್ ಬೆಳಗಿನ ಜಾವ 4:14 ಕ್ಕೆ ಕುಂಭ ರಾಶಿಗೆ ಪ್ರವೇಶ ಮಾಡುತ್ತಾರೆ. ಇದು ಶನಿಯ ಮನೆ ಆದರೂ ಮೂಲ ತ್ರಿಕೋನದ ಮನೆಯಾಗಿದೆ. ಜೊತೆಗೆ, ಇಂದಿನ ದಿನ ಸರ್ವತ್ರ ವಿಜಯದ ಏಕಾದಶಿ, ಸೌಕೂರು ದುರ್ಗಾ ಪರಮೇಶ್ವರಿ ರಥೋತ್ಸವವೂ ನಡೆಯುತ್ತಿದೆ. ಸೂರ್ಯ ಸಂಕ್ರಮಣದ ದಿನ ಸೂರ್ಯ ಭಗವಾನರ ದರ್ಶನ, ಅಷ್ಟೋತ್ತರ, ಸ್ತೋತ್ರ, ಮಂತ್ರ, ಆದಿತ್ಯ ಹೃದಯ ಪಠಿಸುವುದು ಶ್ರೇಷ್ಠವೆಂದು ಗುರೂಜಿ ಆರಂಭ.