Headlines

‘ಬ್ಯಾಂಕ್​ ಸ್ಟೇಟ್​​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’; ‘ಟಾಕ್ಸಿಕ್’ 120 ಕೋಟಿ ಡೀಲ್ ಬಗ್ಗೆ ದಿಲ್ ರಾಜು ಉತ್ತರ

‘ಬ್ಯಾಂಕ್​ ಸ್ಟೇಟ್​​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’; ‘ಟಾಕ್ಸಿಕ್’ 120 ಕೋಟಿ ಡೀಲ್ ಬಗ್ಗೆ ದಿಲ್ ರಾಜು ಉತ್ತರ


‘ಟಾಕ್ಸಿಕ್’ ಸಿನಿಮಾ (ವಿಷಕಾರಿ ಚಲನಚಿತ್ರ) ರಿಲೀಸ್ ಗೆ ಇರೋದು ಇನ್ನು ಒಂದು ತಿಂಗಳು ಮಾತ್ರ. ಯಾವ ಸಿನಿಮಾದ ಡೀಲ್‌ಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದಲ್ಲಿ ಈ ಚಿತ್ರವನ್ನು ಹಂಚಿಕೆ ಮಾಡೋ ಜವಾಬ್ದಾರಿಯನ್ನು ದಿಲ್ ರಾಜು ವಹಿಸಿದ್ದಾರೆ. ಅದೂ ಬರೋಬ್ಬರಿ 120 ಕೋಟಿ ರೂಪಾಯಿಗೆ. ಇಷ್ಟು ದೊಡ್ಡ ಮಟ್ಟದಲ್ಲಿ ಡೀಲ್ ನಿಜವಾಗಿಯೂ ಆಗಿದೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

‘ಟಾಕ್ಸಿಕ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾನ ನೋಡೋಕೆ ಫ್ಯಾನ್ಸ್ ಕಾದಿದ್ದಾರೆ. ಈಗಲೇ ದೊಡ್ಡ ದೊಡ್ಡ ಹಂಚಿಕೆದಾರರು ಸಿನಿಮಾಗೆ ಬೇಡಿಕೆ ಇಡುತ್ತಿದ್ದಾರೆ. ದಿಲ್ ರಾಜು ಅವರು ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಸಿನಿಮಾ ಹಂಚಿಕೆ ಮಾಡಲು ಬರೋಬ್ಬರಿ 120 ಕೋಟಿ ರೂಪಾಯಿ ಕೊಟ್ಟಿದ್ದಾರೆ.

ಎರಡು ರಾಜ್ಯಗಳಲ್ಲಿ ಹಂಚಿಕೆ ಮಾಡಲು ಇಷ್ಟು ದೊಡ್ಡ ಮಟ್ಟದಲ್ಲಿ ಹಣ ನೀಡಿದ್ದು ನಿಜವೇ ಎಂಬ ಪ್ರಶ್ನೆ ಉದ್ಭವವಾಗಿತ್ತು. ಈ ವಿಷಯದಲ್ಲಿ ದಿಲ್ ರಾಜು ಅವರೇ ಉತ್ತರ ನೀಡಿದ್ದಾರೆ. ‘ಮಾರ್ಕಂಡೆ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿದೆ. ‘ಇದು ಪಬ್ಲಿಸಿಟಿ ಸ್ಟಂಟ್ ಅಥವಾ ನಿಜವಾಗಿಯೂ ಈ ಡೀಲ್ ನಡೆದಿದೆಯೇ’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ದಿಲ್ ರಾಜು ಅವರು, ‘ಯಾರ್ಯಾರು ಈ ಬಗ್ಗೆ ಅನುಮಾನ ಪಡ್ತಾ ಇದೀರೋ ಅವರಿಗೆ ಈ ಉತ್ತರ. ನಾನು ಬ್ಯಾಂಕ್‌ಗೆ ತೆರಳಿ ಹಣ ವರ್ಗಾವಣೆ ಮಾಡಿದ ಬಳಿಕ ಅವರಿಗೆ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಮಲಯಾಳನ್ನ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *