ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಮ್ರಾನ್ ಖಾನ್ ಸದ್ಯ ಜೈಲಿನಲ್ಲಿ ಬಂಧಿಯಾಗಿದ್ದು, ಅಮಾನವೀಯ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಅಡಿಯಾಲ ಜೈಲಿನಲ್ಲಿ ದೀರ್ಘಕಾಲ ಏಕಾಂಕದ ಬಂಧನ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿದ್ದು, ಬಲಗಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ ಎಂದಿ ವರದಿಯಾಗಿದೆ.

ಜೈಲುಶಿಕ್ಷೆ ಅನುಭವಿಸುತ್ತಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕಣ್ಣುಗಳು ಶೇ.85ರಷ್ಟು ದೃಷ್ಟಿಹೀನವಾಗಿದ್ದು, ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ತಿಳಿಸಿದ್ದಾರೆ. ಜೈಲಿನಲ್ಲಿ ಇಮ್ರಾನ್ ಅವರನ್ನು ಅತ್ಯಂತ ಹೀನಾಯವಾಗಿ ನೋಡಿಕೊಳ್ಳಲಾಗುತ್ತಿದೆ. ಅಗತ್ಯ ವೈದ್ಯಕೀಯ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಕುಟುಂಬಸ್ಥರ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಇದೀಗ ಸುಪ್ರೀಂ ವಕೀಲ ಸಲ್ಮಾನ್ ಸಫ್ದಾರ್ ವರದಿ ಇದನ್ನು ಬಹಿರಂಗಪಡಿಸಿದೆ.

3-4 ತಿಂಗಳ ಹಿಂದೆ ಅವರ ಎರಡೂ ಕಣ್ಣುಗಳಲ್ಲಿ ಸಾಮಾನ್ಯ 6 x 6 ದೃಷ್ಟಿ ಇತ್ತು. ನಂತರ ದೃಷ್ಟಿ ಮಸುಕಾಗತೊಡಗಿತು. ಇದನ್ನು ತಿಳಿಸಿದರೂ ಜೈಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತರುವಾಯ ಇಮ್ರಾನ್ ಖಾನ್ ತಮ್ಮ ಬಲಗಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡರು. ಈಗ ಶೇ.85ರಷ್ಟು ದೃಷ್ಟಿ ಹೋಗಿದೆ’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಪ್ರಬಲ ಮಿಲಿಟರಿ ಕಣ್ಗಾವಲಿನಲ್ಲಿರುವ ಇಮ್ರಾನ್ ಖಾನ್ ಅವರ ಮೇಲೆ ಉದ್ದೇಶಪೂರ್ವಕವಾಗಿಯೇ ಅಮಾನವೀಯ ಹಾಗೂ ಕಾನೂನುಬಾಹಿರ ವರ್ತನೆ ನಡೆಸಲಾಗುತ್ತಿದೆ ಎಂದು ನ್ಯಾಯಾಲಯದಿಂದ ನೇಮಿಸಲ್ಪಟ್ಟ ವಕೀಲ ಸಲ್ಮಾನ್ ಸಫ್ದಾರ್ ವರದಿ ಬಹಿರಂಗ ಪಡಿಸಿದೆ.

2023 ರ ಅಕ್ಟೋಬರ್‌ನಲ್ಲಿ ಅಡಿಯಾಲ ಜೈಲಿಗೆ ವರ್ಗಾವಣೆಯಾದಾಗಿನಿಂದ, ಇಮ್ರಾನ್ ಖಾನ್ ಅವರನ್ನು ಸುಮಾರು ಎರಡು ವರ್ಷ ನಾಲ್ಕು ತಿಂಗಳುಗಳ ಕಾಲ ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಇದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

1992ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡವು, ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಇದಾದ ಬಳಿಕ ಪಾಕ್ ಪ್ರಧಾನಿಯಾಗಿಯೂ ಗಮನ ಸೆಳೆದಿದ್ದ ಇಮ್ರಾನ್ ಖಾನ್‌ಗೆ ತಮ್ಮ 73ನೇ ವಯಸ್ಸಿನಲ್ಲಿ ಈ ರೀತಿಯ ಚಿತ್ರ ಹಿಂಸೆ ಅನುಭವಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ.

Source link
ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!