Headlines

ಇದು, ಅಂತಿಂಥ ಅಣಬೆಯಲ್ಲ, ಇದು ವಿಶ್ವದ ದುಬಾರಿ ಅಣಬೆ, ಕೆಜಿಗೆ ಬರೋಬ್ಬರಿ ₹ 15 ಲಕ್ಷ! | Worlds Costliest Mushroom Rs 15 Lakh Per Kg

ಇದು, ಅಂತಿಂಥ ಅಣಬೆಯಲ್ಲ, ಇದು ವಿಶ್ವದ ದುಬಾರಿ ಅಣಬೆ, ಕೆಜಿಗೆ ಬರೋಬ್ಬರಿ ₹ 15 ಲಕ್ಷ! | Worlds Costliest Mushroom Rs 15 Lakh Per Kg



ಇದು, ಅಂತಿಂಥ ಅಣಬೆಯಲ್ಲ, ಇದು ವಿಶ್ವದ ದುಬಾರಿ ಅಣಬೆ, ಕೆಜಿಗೆ ಬರೋಬ್ಬರಿ ₹ 15 ಲಕ್ಷ! | Worlds Costliest Mushroom Rs 15 Lakh Per Kg

ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ! ಕೊಪ್ಪಳ ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ : ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ!

ಇಂಥ ಅಣಬೆ ಕೊಪ್ಪಳ ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.

ಏನಿದು ವಿಶೇಷ?: ಹಿಮಾಲಯ ಪರ್ವತ ಹಾಗೂ ನೇಪಾಳ ದೇಶದಲ್ಲಿ ಮಾತ್ರ ಬೆಳೆಯುವ ಅಣಬೆ ಇದು. ಇದು ದೇಹದ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಗಡ್ಡೆಯ ಬೆಳವಣಿಗೆ ತಡೆಯುತ್ತದೆ. ಔಷಧಿಯ ಗುಣ ಹೊಂದಿರುವುದು ಅಲ್ಲದೆ ಹಿಮಾಲಯದ ವಯಾಗ್ರ ಎಂದೇ ಇದನ್ನು ಕರೆಯಲಾಗುತ್ತದೆ. ಈ ಅಪರೂಪದ ಅಣಬೆ ಪ್ರತಿ ಕೆಜಿ ಅಣಬೆಯ ಬೆಲೆ ₹15 ಲಕ್ಷ.

ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷತೆಯ ಮೂಲಕ ಗಮನ ಸೆಳೆಯುತ್ತಿರುವ ಕೊಪ್ಪಳ ತೋಟಗಾರಿಕಾ ಇಲಾಖೆ ಹಮ್ಮಿಕೊಳ್ಳುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಈ ವರ್ಷ ಯರ್ಸಗುಂಬಾ ಎನ್ನುವ ಅಣಬೆಯನ್ನಿರಿಸಲಾಗಿದೆ. ಬಂಗಾರದ ಆಭರಣಗಳನ್ನು ಪ್ಯಾಕ್ ಮಾಡಿದಂತೆಯೇ ಇದನ್ನು ಪ್ಯಾಕ್ ಮಾಡಿ ಇಡಲಾಗಿದೆ.

ಕಳೆದ ವರ್ಷ ₹2.5 ಲಕ್ಷ ಕೆಜಿಯ ಮಾವು ಮಿಯಾಜಾಕಿ ಪ್ರದರ್ಶನ

ಕಳೆದ ವರ್ಷ ₹2.5 ಲಕ್ಷ ಕೆಜಿಯ ಮಾವು ಮಿಯಾಜಾಕಿ ಪ್ರದರ್ಶನಕ್ಕೆ ಇಡುವ ಮೂಲಕ ಸ್ಥಳೀಯವಾಗಿ ಬೆಳೆಯುವಂತೆ ಜಾಗೃತಿ ಮೂಡಿಸಲಾಯಿತು. ಈ ಅಣಬೆ ಬೆಳೆಯಲು ಸಾಧ್ಯವೇ ಇಲ್ಲ ಎಂದು ಬೆಳೆಯುವ ದಿಸೆಯಲ್ಲಿ ಪ್ರಾಯೋಗಿಕವಾಗಿ ಪ್ರಯತ್ನ ಮಾಡುವ ಉದ್ಧೇಶದಿಂದಲೇ ಇದನ್ನು ಪ್ರದರ್ಶನಕ್ಕೆ ಇರಿಸಲಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಜೆಡಿ ಕೃಷ್ಣ ಉಕ್ಕುಂದ.

ಮಿಯಾಜಾಕಿ ಬೆಳೆಯುವ ಪ್ರಯತ್ನ ಮಾಡಿ ಯಶಸ್ವಿ

ಈ ಹಿಂದೆ ಮಿಯಾಜಾಕಿ ಮಾವು ಪ್ರದರ್ಶನ ಮಾಡಿದ್ದರಿಂದ ಪ್ರೇರಣೆಗೊಂಡಿರುವ ರೈತರು ಮಿಯಾಜಾಕಿ ಬೆಳೆಯುವ ಪ್ರಯತ್ನ ಮಾಡಿದ್ದು, ಯಶಸ್ವಿಯಾಗುತ್ತಿದ್ದಾರೆ. ಈ ಬಾರಿ ಈ ಅಣಬೆ ಪ್ರದರ್ಶನಕ್ಕೆ ಇಟ್ಟಿದ್ದು, ಅದನ್ನು ಸಹ ಸ್ಥಳೀಯವಾಗಿ ಬೆಳೆಯುವ ಪ್ರಯತ್ನ ಮಾಡಲು ಕೊಪ್ಪಳ ತೋಟಗಾರಿಕಾ ಇಲಾಖೆ ಮುಂದಾಗಿದೆ.

ರೈತರ ಉತ್ಪನ್ನಗಳನ್ನು ನೇರವಾಗಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುತ್ತದೆ. ಅದರಲ್ಲಿ ಬೇರೆ ಬೇರೆ ಹಣ್ಣಿನ, ತರಕಾರಿಯ ತಳಿ ಪರಿಚಯಿಸಲಾಗುತ್ತದೆ. ಮಿಯಾಜಾಕಿ ಮಾವು ಪ್ರದರ್ಶನದ ಬಳಿಗ ಈಗ ಹದಿನೈದು ಲಕ್ಷಗೆ ಕೆಜಿ ಮಾರಾಟವಾಗುವ ಯರ್ಸಗುಂಬಾ ಅಣಬೆ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಕೊಪ್ಪಳ ತೋಟಗಾರಿಕಾ ಇಲಾಖೆ ಜೆಡಿ ಕೃಷ್ಣಾ ಉಕ್ಕುಂದ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *