ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ

ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ


ರಾಮ್ ಚರಣ್ (ರಾಮ್ ಚರಣ್) ಹಾಗೂ ಉಪಾಸನಾ ದಂಪತಿ ಇತ್ತೀಚೆಗೆ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಈ ಮೊದಲು ಹುಟ್ಟಿದ ಮಕ್ಕಳಿಗೆ ಕ್ಲಿನ್ಕಾರ ಎಂದು ಹೆಸರು ಇಟ್ಟಿದ್ದರು. ಈ ಬಾರಿ ಅವಳಿ ಮಕ್ಕಳಿಗೂ ಇವರು ಭಿನ್ನ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅವರು ಮಕ್ಕಳ ದೇವರ ಹೆಸರನ್ನೇ ಇಟ್ಟಿದ್ದಾರೆ ಎಂಬುದು ವಿಶೇಷ.

ರಾಮ್ ಚರಣ್ ಅವರು ಅವಳಿ ಮಕ್ಕಳ ಹೆಸರನ್ನು ಇಡಲು ಖ್ಯಾತ ಜ್ಯೋತಿಷಿ ಬಳಿ ತೆರಳಿದ್ದರು. ಮಕ್ಕಳಿಗೆ ಯಾವ ರೀತಿಯ ಹೆಸರು ಇಡಬೇಕು ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ. ಅವರು ಸೂಚಿಸಿದ ಹೆಸರನ್ನೇ ಮಕ್ಕಳಿಗೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಮಗನಿಗೆ ಶಿವರಾಮ್ ಮತ್ತು ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆ.

ಶಿವರಾಮ್ ಎಂಬುದು ಹಿಂದೂ ದೇವರುಗಳಾದ ಶಿವ ಹಾಗೂ ರಾಮನ ಸಮ್ಮಿಲನವಾಗಿದೆ. ಕೊನಿಡೆಲಾ ಶಿವರಾಮ್ ಎಂದು ಮಗನಿಗೆ ಹೆಸರಾಗಿದೆ. ಮಗನಿಗೆ ದೇವರ ಹೆಸರನ್ನು ಇಟ್ಟಿರುವುದಕ್ಕೆ ಅನೇಕರಿಗೆ ಖುಷಿಯಾಗಿದೆ. ಇನ್ನು, ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ. ಇದು ಪ್ರಾಚೀನ ಪರಿಭಾಷೆಯಲ್ಲಿ ಧೈರ್ಯ ಮತ್ತು ಕೃಪೆಯ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ

ಸದ್ಯ ರಾಮ್ ಚರಣ್ ತಮ್ಮ ಮಕ್ಕಳಿಗೆ ಇಟ್ಟ ಹೆಸರು ಚರ್ಚೆ ಆಗುತ್ತಿದೆ. ಮಕ್ಕಳಿಗೆ ಅವರು ಕ್ಲಿನ್ಕಾರ, ಶಿವರಾಮ್ ಹಾಗೂ ಅನ್ವೀರಾ ದೇವಿ ಎಂದು ಇಟ್ಟಂತೆ ಆಗಿದೆ. ರಾಮ್ ಚರಣ್ ಅವರಿಗೆ ಈ ವರ್ಷ ವಿಶೇಷ ಎನಿಸಿಕೊಂಡಿದೆ. ಅವರು ಅವಳಿ ಮಕ್ಕಳ ತಂದೆ ಆಗಿದ್ದಾರೆ. ಇನ್ನು, ಈ ವರ್ಷದ ಅವರ ನಟನೆಯ ‘ಪೆದ್ದಿ’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಏಪ್ರಿಲ್ 30 ರಂದು ಸಿನಿಮಾ ತೆರೆಗೆ ಬರಲಿದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *