ಕೇರಳ, ಫೆಬ್ರವರಿ 13: ಅಷ್ಟು ರಸ್ತೆಗಳಿದ್ದರೂ ಜನರು ಫುಟ್ಪಾತ್ನಲ್ಲಿ ಬೈಕ್ ಓಡಿಸುವ ಚಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾಟ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳು ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್ ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕೋಡ್ ನಲ್ಲಿ ಈ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ