Headlines

ಫೂಟ್‌ಬಾತ್‌ನಲ್ಲಿ ಬಂದ ವ್ಯಕ್ತಿಗೆ ಸೆಟೆದು ನಿಂತು ಗ್ರಹಚಾರ ಬಿಡಿಸಿದ ಅಜ್ಜಿ; ಭೇಷ್‌ ಎಂದ ನಟಿ ಸುಹಾಸಿನಿ! | Grandma Stops Man From Riding A Scooter In Footpath Kerala Video Viral

ಫೂಟ್‌ಬಾತ್‌ನಲ್ಲಿ ಬಂದ ವ್ಯಕ್ತಿಗೆ ಸೆಟೆದು ನಿಂತು ಗ್ರಹಚಾರ ಬಿಡಿಸಿದ ಅಜ್ಜಿ; ಭೇಷ್‌ ಎಂದ ನಟಿ ಸುಹಾಸಿನಿ! | Grandma Stops Man From Riding A Scooter In Footpath Kerala Video Viral



ಫೂಟ್‌ಬಾತ್‌ನಲ್ಲಿ ಬಂದ ವ್ಯಕ್ತಿಗೆ ಸೆಟೆದು ನಿಂತು ಗ್ರಹಚಾರ ಬಿಡಿಸಿದ ಅಜ್ಜಿ; ಭೇಷ್‌ ಎಂದ ನಟಿ ಸುಹಾಸಿನಿ! | Grandma Stops Man From Riding A Scooter In Footpath Kerala Video Viral

Grandma Video: ಪುರುಷನೋರ್ವ ಫೂಟ್‌ಬಾತ್‌ನಲ್ಲಿ ಸ್ಕೂಟಿಯಲ್ಲಿ ಬಂದಿದ್ದನು. ಇದನ್ನು ವೃದ್ಧೆಯೋರ್ವರು ತಡೆದಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಪುರುಷನಿಗೆ ವೃದ್ಧೆ ಬುದ್ಧಿ ಕಲಿಸಿದ್ದಾರೆ.

ಫೂಟ್‌ಬಾತ್‌ನಲ್ಲಿ ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದ ಪುರುಷನನ್ನು ಅಜ್ಜಿಯೋರ್ವರು ತಡೆದ ಘಟನೆ ಕೇರಳದಲ್ಲಿ ನಡೆದಿದೆ. ಹೌದು, ಈ ವಿಡಿಯೋ ಈಗ ವೈರಲ್‌ ಆಗ್ತಿದ್ದು, ನಟಿ ಸುಹಾಸಿನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಮೆಂಟ್‌ ಮಾಡಿದ್ದಾರೆ.

ಏನಿದು ಘಟನೆ?

ಫೂಟ್‌ಬಾತ್‌ನಲ್ಲಿ ವೃದ್ಧೆಯೋರ್ವರು ನಡೆದುಕೊಂಡು ಬರುತ್ತಿದ್ದರು. ಟ್ರಾಫಿಕ್‌ ಜಾಸ್ತಿ ಇದೆ ಎಂದು ಕೆಲವರು ಫೂಟ್‌ಬಾತ್‌ನಲ್ಲಿ ಗಾಡಿ ಓಡಿಸಿಕೊಂಡು ಬಂದಿದ್ದಾರೆ. ಆಗ ಆ ಅಜ್ಜಿ ಅದನ್ನು ತಡೆದಿದ್ದಾರೆ. ಪುರುಷ ಎಷ್ಟೇ ಧಮ್ಕಿ ಹಾಕಿದರೂ ಕೂಡ ಆ ಲೇಡಿ ಮಾತ್ರ ಫೂಟ್‌ಬಾತ್‌ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಲು ಬಿಟ್ಟಿಲ್ಲ, ಆ ಪುರುಷನ ಮುಂದೆ ಅವರು ಸೆಟೆದು ನಿಂತಿದ್ದಾರೆ. ಈ ವಿಡಿಯೋದಲ್ಲಿ ಆಡಿಯೋ ಇದೆ. ಆದರೆ ಅಜ್ಜಿ ಏನು ಮಾಡಲು ಹೊರಟಿದ್ದಾರೆ? ಅವರ ಉದ್ದೇಶ ಏನು ಎನ್ನೋದು ಗೊತ್ತಾಗುವುದು. ಅಷ್ಟೇ ಅಲ್ಲದೆ ಆ ಲೇಡಿ ತನ್ನ ಮೊಬೈಲ್‌ ಫೋನ್‌ ತಗೊಂಡು ರೆಕಾರ್ಡ್‌ ಮಾಡಲು ರೆಡಿಯಾಗುತ್ತಾರೆ. ಆಗ ಆ ಪುರುಷ ಫೂಟ್‌ಬಾತ್‌ನಿಂದ ಹೊರಗಡೆ ಹೋಗುತ್ತಾರೆ.

ಬುದ್ಧಿ ಕಲಿಸಲು ಹಿಂದೇಟು ಹಾಕಿಲ್ಲ!

ಇನ್ನು ಇದನ್ನು ಯುವಕನೋರ್ವ ಒಂದು ಕಟ್ಟಡದ ಮೇಲೆ ನಿಂತು ವಿಡಿಯೋ ಮಾಡಿದ್ದಾನೆ. ಅದನ್ನು ಕೊನೆಯಲ್ಲಿ ಅಜ್ಜಿ ನೋಡಿ ಒಂದು ಮುಗುಳ್ನಕ್ಕು ಥಂಬ್ಸ್‌ಅಪ್‌ ಮಾಡುತ್ತಾರೆ. ಈ ವಿಡಿಯೋ ನೋಡಿ ಅನೇಕರು ಖುಷಿಪಟ್ಟಿದ್ದಾರೆ. ವಯಸ್ಸಾದರೂ ಕೂಡ ಅಜ್ಜಿಯೇ ಆ ಪುರುಷನಿಗೆ ನಿಯಮ ಏನು ಎಂದು ಹೇಳಬೇಕಾಯ್ತು, ಬುದ್ಧಿ ಕಲಿಸಲು ಹಿಂದೇಟು ಹಾಕಲಿಲ್ಲ ಎಂದು ಖುಷಿಪಟ್ಟಿದ್ದಾರೆ. ನಟಿ ಸುಹಾಸಿನಿ ಸೇರಿ ಅನೇಕರು ಈ ವಿಡಿಯೋವನ್ನು ನೋಡಿ ಕಾಮೆಂಟ್‌ ಮಾಡಿದ್ದಾರೆ.

ಜನರು ಹೇಳಿದ್ದೇನು?

ಕೇರಳದ ಸಾಕ್ಷರತೆ ಬಗ್ಗೆ ಟೀಕೆ ಮಾಡುವವರು ಯಾಕೆ ಶಿಕ್ಷಣ ಬೇಕು ಎಂದು ಎಚ್ಚೆತ್ತುಕೊಳ್ಳಬೇಕು. ಶಿಕ್ಷಣ ಅಂದರೆ ಕೇವಲ ಮಾರ್ಕ್ಸ್‌ ಅಲ್ಲ, ಬದಲಾಗಿ ನಾಗರಿಕ ಪ್ರಜ್ಞೆ, ಜವಾಬ್ದಾರಿ, ತಪ್ಪಿದ್ದಾಗ ಪ್ರಶ್ನೆ ಮಾಡುವ ಧೈರ್ಯವೂ ಕೂಡ ಆಗಿದೆ. ಆ ಮಹಿಳೆಗೆ ಫೂಟ್‌ಬಾತ್‌ ಇರೋದು ವಾಹನಗಳು ಓಡಾಡೋಕೆ ಆಗಲ್ಲ, ಬದಲಾಗಿ ಪಾದಚಾರಿಗಳಿಗೆ ಎಂದು ಗೊತ್ತಿದೆ, ಆದರೆ ಆ ಪುರುಷನಿಗೆ ಗೊತ್ತಿಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ನಟಿ ಸುಹಾಸಿನಿ ಕೂಡ ಇವರು ರಿಯಲ್‌ ಹೀರೋ ಎಂದಿದ್ದಾರೆ. ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.



Source link

Leave a Reply

Your email address will not be published. Required fields are marked *