ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು

ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು


ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು

ಚಿಕ್ಕಮಗಳೂರು, ಫೆಬ್ರವರಿ 13: ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ಕಾರಣ ಕೋರ್ಟ್ ಸಿಬ್ಬಂದಿ ನಡು ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. 2023ರಲ್ಲಿ ನಡೆದ ಅಪಘಾತದಲ್ಲಿ ಬಸ್ ಡಿಕ್ಕಿಯಾಗಿ ರೇಣುಕಪ್ಪ ಹಾಗೂ ರವಿಕಿರಣ್ ಆಸ್ಪತ್ರೆಯಲ್ಲಿದ್ದರು. ಈ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 32 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ವಿಧಿಸಿತ್ತು. ಆದರೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕೆಎಸ್‌ಆರ್‌ಟಿಸಿಗೆ ಸೇರಿದ, ಚಿಕ್ಕಮಗಳೂರು ಡಿಪೋ ವ್ಯಾಪ್ತಿಯ ಬಸ್‌, ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ಬೆಂಗಳೂರು ಕಡೆಗೆ ತೆರಳುತ್ತಿದ್ದ KA 18 F1040 ಸಂಖ್ಯೆಯ ಬಸ್ ಅನ್ನು ಕೋರ್ಟ್ ಸಿಬ್ಬಂದಿ ಮಧ್ಯರಸ್ತೆಯಲ್ಲೇ ಜಪ್ತಿ ಮಾಡಲಾಗಿದೆ. ಇದಕ್ಕೂ ಮುನ್ನ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ನಡು ರಸ್ತೆಯಲ್ಲಿ ಬಸ್ ಜಪ್ತಿ ಮಾಡಿದ ಕ್ರಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *