ಯೋಗಿ ಅವರ ವೃತ್ತಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಇಷ್ಟು ದಿನ ಒಂದು ಲೆಕ್ಕವಾದರೆ, ಇನ್ಮುಂದೆ ಬೇರೆಯದೇ ಲೆಕ್ಕ ಶುರು ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅವರ ಐವತ್ತನೇ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘ಕಿಂಗ್’ ಟೈಟಲ್ ಇಡಲಾಗಿದೆ. ಈ ಸಿನಿಮಾ ಟೈಟಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಭಾರಿ ಬಜೆಟ್ ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ವೃತ್ತಿ ಜೀವನದಲ್ಲಿ ಯೋಗಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಲವು ರೀತಿಯ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈಗ ಅವರು ‘ಕಿಂಗ್’ ಸಿನಿಮಾದಲ್ಲಿ ಸಖತ್ ರಗಡ್ ಅವತಾರ ತಾಳಲು ರೆಡಿ ಆಗಿದ್ದಾರೆ. ಈ ಟೀಸರ್ ರಾ ಆಗಿದೆ. ಶಿವರಾಜ್ ಕುಮಾರ್ ಅವರು ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.
‘ಯೋಗಿ ನಂಗೆ ತುಂಬಾನೇ ಆಪ್ತ. ಅವರು ನನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪುನೀತ್ ಜೊತೆ ತುಂಬಾನೇ ಆಪ್ತವಾಗಿದ್ದರು. ಹೀಗಾಗಿ, ಯೋಗಿನ ನೋಡಿದಾಗೆಲ್ಲ ಅಪ್ಪುನ ನೆನಪಾಗುತ್ತದೆ. ಈ ಸಿನಿಮಾ ಗೆಲ್ಲಲೇಬೇಕು. ಈ ಸಕ್ಸಸ್ ಪಾರ್ಟಿಯಲ್ಲಿ ನಾನು ಭಾಗಿ ಆಗುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.
‘ಕಿಂಗ್’ ಚಿತ್ರದ ಬಜೆಟ್ ದೊಡ್ಡದು. ಈ ಬಗ್ಗೆ ಯೋಗಿ ಆತಂಕ. ಆದರೆ, ನಿರ್ಮಾಪಕರು ಧೈರ್ಯ ತುಂಬಿದರಂತೆ. ಹೀಗಾಗಿ, ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾಗಳನ್ನು ಮಾಡುವ ಆಲೋಚನೆ ಅವರಿಗೆ ಇದೆ.
ಇದನ್ನೂ ಓದಿ: ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ ಕುಮಾರ್
ಜಾಕ್ ಅವರು ‘ಕಿಂಗ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಈ ಚಿತ್ರವನ್ನು ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್ ಮೊದಲಾದವರು ನಿರ್ದೇಶಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಈ ಚಿತ್ರವನ್ನು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಾಗರ್ ಎಂಬ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಟೈಟಲ್ ಅಲ್ಲಿ ಬಾಲಿವುಡ್ ನಲ್ಲೂ ಸಿನಿಮಾ ಬರುತ್ತಿದೆ. ‘ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ನಾವು ಮೂರು ವರ್ಷಗಳ ಹಿಂದೆಯೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಜಾಕ್. ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.