Headlines

Accident ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಭೀಕರ ಅಫಘಾತದಲ್ಲಿ ಪುಟ್ಟ ಬಾಲಕ ಸಾವು, ಐವರು ಗಂಭೀರ | Puc Student Speeding Car Hits Pedestrians In Lucknow Minor Killed 5 Injured

Accident ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಭೀಕರ ಅಫಘಾತದಲ್ಲಿ ಪುಟ್ಟ ಬಾಲಕ ಸಾವು, ಐವರು ಗಂಭೀರ | Puc Student Speeding Car Hits Pedestrians In Lucknow Minor Killed 5 Injured



Accident ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಭೀಕರ ಅಫಘಾತದಲ್ಲಿ ಪುಟ್ಟ ಬಾಲಕ ಸಾವು, ಐವರು ಗಂಭೀರ | Puc Student Speeding Car Hits Pedestrians In Lucknow Minor Killed 5 Injured

ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಒಂದೆಡೆ ಪಾರ್ಟಿ ಮತ್ತು, ಮತ್ತೊಂದೆಡೆ ಗೆಳತಿಯ ಸಾಥ್, ಸ್ವರ್ಗಕ್ಕೆ ಮೂರೇ ಗೇಣು ಎಂದು ವೇಗವಾಗಿ ಕಾರು ಚಲಾಯಿಸಿದವ ಪಾದಾಚಾರಿಗಳ ಮೇಲೆ ಕಾರು ಹರಿಸಿ 6 ವರ್ಷದ ಬಾಲಕನ ಬಲಿತೆಗೆದುಕೊಂಡಿದ್ದಾನೆ. ಐವರು ಗಂಭೀರ. 

ಲಖನೌ(ಫೆ.13) ಅತೀ ವೇಗ, ಮದ್ಯಪಾನ, ನಿದ್ದೆ ಮಂಪರು, ರಸ್ತೆ ಗುಂಡಿ, ಅಸಮರ್ಪಕ ಕಾಮಗಾರಿ ಸೇರಿದಂತೆ ಹಲವು ಕಾರಣಗಳಿಂದ ಅಪಘಾತಗಳ ಪ್ರಮಾಣಗಳು ಹೆಚ್ಚಾಗುತ್ತಿದೆ. ಬೆಂಗಳೂರಿನ ಹೊರವಲಯದ ಹೊಸಕೋಟೆ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ಗೆಳೆತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಅತೀವೇಗವಾಗಿ ಡ್ರೈವ ಮಾಡಿ ಭೀಕರ ಅಪಘಾತ ಮಾಡಿದ್ದಾರೆ. ಮಾರುಕಟ್ಟೆ ಬಳಿ ಪಾದಾಚಾರಿಗಳ ಮೇಲೆ ಕಾರು ಹರಿದಿದೆ. ಈ ಪೈಕಿ ಇದೇ ಮೊದಲ ಬಾರಿಗೆ ಅಜ್ಜಿ ಜೊತೆಗೆ ಮಾರುಕಟ್ಟೆಗೆ ಬಂದ 6 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಲಖನೌ ಬಳಿ ನಡೆದಿದೆ.

ಅಪಘಾತದ ನಡೆದಿದ್ದು ಹೇಗೆ?

ಪಿಯಿಸು ವಿದ್ಯಾರ್ಥಿ ತನ್ನ ಗರ್ಲ್‌ಫ್ರೆಂಡ್ ಜೊತೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದಾನೆ. ಪಾರ್ಟಿ ಮುಗಸಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಗೆಳತಿಯನ್ನು ಕೂರಿಸಿಕೊಂಡು ಮರಳಿದ್ದಾನೆ. ಆದರೆ ಪಾರ್ಟಿ ಗಮ್ಮತ್ತು, ಗೆಳತಿಯ ಸಾಂಗತ್ಯ ಪಿಯುಸಿ ವಿದ್ಯಾರ್ಥಿಯ ಕಿಕ್ ಹೆಚ್ಚಿಸಿದೆ. ಹೀಗಾಗಿ ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದಾನೆ. ಕಾನ್ಪುರ ರಸ್ತೆಯ ಹನುಮಾನ್ ದೇವಸ್ಥಾನ ಬಳಿಕ ಗೆಳತಿ ಕಾರಿನಿಂದ ಇಳಿದಿದ್ದಾಳೆ. ಬಳಿಕ ಮೆಲ್ಲನೆ ತೆರಳಿದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಆದರೆ ಗೆಳತಿ ಕಾರಿನಿಂದ ಇಳಿದ ಬಳಿಕ ಕಾರಿನ ವೇಗ ಹೆಚ್ಚಾಗಿದೆ.

ಲಖನೌದಿಂದ ಕಾನ್ಪುರ ರಸ್ತೆಯಲ್ಲಿ ಅತೀ ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿದೆ. ಇದೇ ವೇಳೆ ಮಾರುಕಟ್ಟೆ ಬಳಿ ಶಾಹಿಜಾನ್‌ಪುರದ ನಿವಾಸಿ ಪ್ರಮೋದ್ ಕುಮಾರ್ ತಮ್ಮಬೈಕ್ ರಸ್ತೆ ಬದಿ ನಿಲ್ಲಿಸಿ ಸಾಮಾಗ್ರಿ ಖರೀದಿಸಲು ಅಂಗಡಿಗೆ ತೆರಳಿದ್ದಾರೆ. ಕಾರು ನಿಯಂತ್ರಣ ಕಳೆದುಕೊಂಡಿದ್ದ ಕಾರಣ ಬೈಕ್‌ಗೆ ಡಿಕ್ಕಿಯಾಗಿದೆ. ಆದರೆ ಕಾರು ನಿಲ್ಲಿಸಲಿಲ್ಲ. ತಕ್ಷಣವೇ ಮಾರುಕಟ್ಟೆಯಲ್ಲಿದ್ದ ವ್ಯಾಪಾರಿಗಳು ಸ್ಥಳೀಯರು ಕಾರು ನಿಲ್ಲಿಸುವ ಪ್ರಯತ್ನ ಮಾಡಿದ್ದರೆ. ಈ ವೇಳೆ ವಿದ್ಯಾರ್ಥಿ ಕಾರಿನ ವೇಗ ಮತ್ತಷ್ಟು ಹೆಚ್ಚಿಸಿದ್ದಾನೆ. ಈ ವೇಳೆ ರಸ್ತೆಯಿಂದ ಮಾರುದ್ದ ದೂರದಲ್ಲಿದ್ದ 12 ವರ್ಷದ ಬಾಲಕ ಅರ್ಮಾನ್‌ಗೆ ಕಾರು ಡಿಕ್ಕಿಯಾಗಿದೆ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳದಿಂದ ಪರಾರಿಯಾಗಲು ಮತ್ತಷ್ಟು ವೇಗ ಹೆಚ್ಚಿಸಿ ಅಡ್ಡದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಕಾರು 35 ವರ್ಷದ ಸಾಧನಾ ಪಟೇಲ್, 6 ವರ್ಷದ ಬಾಲಕ ದೀಕ್ಷಂತ್ ಹಾಗೂ 60 ವರ್ಷದ ಅಜ್ಜಿ ಮೀನಾ ದೇವಿಗೆ ಕಾರು ಡಿಕ್ಕಿಯಾಗಿದೆ. ಬಾಲಕ ದೀಕ್ಷಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ 42 ವರ್ಷದ ಇ ರಿಕ್ಷಾ ಚಾಲಕ ಅವಧ್ ಚೌಧರಿ ಮೇಲೂ ಕಾರು ಹತ್ತಿಸಿದ್ದಾನೆ.

ಇಷ್ಟಾದರೂ ಕಾರು ನಿಲ್ಲಿಸಿಲ್ಲ. ಮತ್ತೆ ವೇಗವಾಗಿ ಕಾರನ್ನು ಚಲಾಯಿಸಲು ಯತ್ನಿಸಿದ್ದಾನೆ. ಅಷ್ಟೊತ್ತಿಗೆ ಸ್ಥಳೀಯರು ಸಿಕ್ಕ ಸಿಕ್ಕ ವಸ್ತುಗಳನ್ನು ಕಾರಿಗೆ ಎಸೆದಿದ್ದಾರೆ. ಕಾರು ಶಾಪ್‌ಗೆ ಡಿಕ್ಕಿಯಾಗಿ ನಿಂತಿದೆ. ತಕ್ಷಣವೇ ಡೂರ್ ತೆಗೆದು ಪಿಯುಸಿ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆಗಲೇ ಸ್ಥಳೀಯರು ಸುತ್ತುವರಿದಿದ್ದರು. ಹೀಗಾಗಿ ಸ್ಥಳೀಯರು ಓಡುತ್ತಿದ್ದ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಗೆಳೆಯರ ಕಾರು ಪಡೆದು ಗೆಳತಿ ಮುಂದೆ ಶೋಆಫ್ ಮಾಡಿದ್ದಾನೆ. ಆರೋಪಿಯ ತಂದೆ ಸಿಮೆಂಟ್ ಹಾಗೂ ಕಬ್ಬಿಣ ಉದ್ಯಮಿಯಾಗಿದ್ದಾರೆ. ಶ್ರೀಮಂತ ಕುಟುಂದ ವಿದ್ಯಾರ್ಥಿ ಶೋ ಆಫ್‌ಗೆ ಅಮಾಯಕ ಜೀವ ಒಂದು ಬಲಿಯಾಗಿದೆ. ಇನ್ನು ಐವರು ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಮತ ಬಾಲಕನ ತಾಯಿ ಸಾಧಾನ ಲಿಖಿತ ದೂರು ನೀಡಿದ್ದಾರೆ.



Source link

Leave a Reply

Your email address will not be published. Required fields are marked *