Headlines

H -1B ದುಬಾರಿ ವೀಸಾ ಹಣ ಉಳಿಸಲು ಅಮೆರಿಕ ಕಂಪನಿಗಳ ಹೊಸ ರೂಲ್ಸ್, ವಿದೇಶಿ ವಿದ್ಯಾರ್ಥಿಗಳಿಗೆ ಲಾಟರಿ | H 1b Visa Policy American Tech Companies Have Made A New Plan For Hiring Employees

H -1B ದುಬಾರಿ ವೀಸಾ ಹಣ ಉಳಿಸಲು ಅಮೆರಿಕ ಕಂಪನಿಗಳ ಹೊಸ ರೂಲ್ಸ್, ವಿದೇಶಿ ವಿದ್ಯಾರ್ಥಿಗಳಿಗೆ ಲಾಟರಿ | H 1b Visa Policy American Tech Companies Have Made A New Plan For Hiring Employees



H -1B ದುಬಾರಿ ವೀಸಾ ಹಣ ಉಳಿಸಲು ಅಮೆರಿಕ ಕಂಪನಿಗಳ ಹೊಸ ರೂಲ್ಸ್, ವಿದೇಶಿ ವಿದ್ಯಾರ್ಥಿಗಳಿಗೆ ಲಾಟರಿ | H 1b Visa Policy American Tech Companies Have Made A New Plan For Hiring Employees

ಅಮೆರಿಕದ H-1B ವೀಸಾ ದುಬಾರಿ. ಇದು ಟೆಕ್ ಕಂಪನಿಗಳ ತಲೆನೋವು ಹೆಚ್ಚಿಸಿದೆ. ಇದ್ರಿಂದ ಹೊರಗೆ ಬರಲು ಟೆಕ್ ಕಂಪನಿಗಳು ಹೊಸ ಉಪಾಯ ಕಂಡುಕೊಂಡಿವೆ. ಟೆಕ್ ಕಂಪನಿ ಹೊಸ ನೀತಿ ವಿದೇಶಿ ವಿದ್ಯಾರ್ಥಿಗಳ ಲಕ್ ಬದಲಿಸಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ವೀಸಾ ನೀತಿ ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಪರಿಣಾಮ ಬೀರಿದೆ. ಡೊನಾಲ್ಡ್ ಟ್ರಂಪ್, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ H-1B ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ ಗೆ ಏರಿಕೆ ಮಾಡಿದ್ದಾರೆ. ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅಮೆರಿಕಾ ಕಂಪನಿಗಳಿಗೆ ಟ್ರಂಪ್ ಈ ನಿರ್ಧಾರ ದುಬಾರಿಯಾಗಿದೆ. H-1B ವೀಸಾಗಳಿಗೆ ಸಂಬಂಧಿಸಿದ ಹೆಚ್ಚಿದ ಶುಲ್ಕಗಳು ಮತ್ತು ಹೊಸ ಆದ್ಯತೆಯ ನೀತಿ, ವಿಭಿನ್ನ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಿವೆ. ಸಣ್ಣ ಸ್ಟಾರ್ಟ್ಅಪ್ಗಳು ಒತ್ತಡದಲ್ಲಿದ್ರೆ, ದೊಡ್ಡ ಟೆಕ್ ಕಂಪನಿಗಳು ಉದ್ಯೋಗಿಗಳ ನೇಮಕದಲ್ಲಿ ಹೊಸ ಪ್ಲಾನ್ ಮಾಡ್ತಿವೆ.

ದೊಡ್ಡ ಟೆಕ್ ಕಂಪನಿಗಳ ಹೊಸ ತಂತ್ರ

H-1B ವೀಸಾಗಾಗಿ ಹಣ ಖರ್ಚು ಮಾಡೋದು ಸಣ್ಣ ಸ್ಟಾರ್ಟ್ ಅಪ್ (startup) ಕಂಪನಿಗಳಿಗೆ ಕಷ್ಟ. ಆದ್ರೆ ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ನಂತಹ ಪ್ರಮುಖ ಟೆಕ್ ಕಂಪನಿಗಳಿಗೆ ಹಣದ ಸಮಸ್ಯೆ ಇಲ್ಲ. ಆದ್ರೆ ಈ ಕಂಪನಿಗಳು H-1B ವೀಸಾಗೆ ದುಬಾರಿ ಶುಲ್ಕ ಪಾವತಿಸುವ ಬದಲು ಹೊಸ ನೇಮಕಾತಿ ವಿಧಾನ ಫಾಲೋ ಮಾಡಲು ಪ್ರಾರಂಭಿಸಿವೆ. ಅಮೆರಿಕದಲ್ಲಿರುವ ಅಥವಾ ಪರ್ಯಾಯ ಕೆಲಸದ ಪರವಾನಗಿಗಳ ಅಡಿಯಲ್ಲಿ ಕೆಲಸ ಮಾಡಬಹುದಾದ ಉದ್ಯೋಗಿಗಳಿಗೆ ಆದ್ಯತೆ ನೀಡ್ತಿದ್ದಾರೆ.

Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ

H-1B ವೀಸಾಗಳಿಗೆ ಹೊಸ ಬದಲಾವಣೆಗಳು

ಪ್ರತಿ ವರ್ಷ, 85,000 ಹೊಸ H-1B ವೀಸಾಗಳನ್ನು ಅಮೆರಿಕದಲ್ಲಿ ನೀಡಲಾಗುತ್ತದೆ. ಇವುಗಳಲ್ಲಿ, 20,000 ಅಮೆರಿಕನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಅಥವಾ ಅದಕ್ಕಿಂತ ಹೆಚ್ಚಿನದನ್ನು ಪಡೆದ ವಿದೇಶಿ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. ಹಿಂದೆ, ಈ ವೀಸಾ ವ್ಯವಸ್ಥೆಯನ್ನು ಲಾಟರಿ ವ್ಯವಸ್ಥೆಯ ಮೂಲಕ ನೀಡಲಾಗುತ್ತಿತ್ತು. ಈಗ ಸರ್ಕಾರ ಈ ವ್ಯವಸ್ಥೆಯನ್ನು ಸಹ ಬದಲಾಯಿಸಿದೆ. ಹೊಸ ವ್ಯವಸ್ಥೆಯ ಅಡಿಯಲ್ಲಿ, ಹೆಚ್ಚಿನ ಸಂಬಳ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಇದು ದೊಡ್ಡ ಕಂಪನಿಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಹೆಚ್ಚಿನ ಸಂಬಳ ನೀಡಲು ದೊಡ್ಡ ಕಂಪನಿಗಳಿಗೆ ಸಮಸ್ಯೆ ಇಲ್ಲ. ಹಾಗಾಗಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳ ನೇಮಕಕ್ಕೆ ಆದ್ಯತೆ ನೀಡಲಾಗ್ತಿದೆ.

ಟೆಕ್ ಕಂಪನಿಗಳ ಆಯ್ಕೆ ಹೀಗಿದೆ

ಅಮೆರಿಕದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಐಚ್ಛಿಕ ಪ್ರಾಯೋಗಿಕ ತರಬೇತಿ (OPT) ಮೂಲಕ 12 ತಿಂಗಳವರೆಗೆ ಕೆಲಸ ಮಾಡಲು ಅವಕಾಶವಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷ್ಯದಲ್ಲಿ ಪದವಿ ಪಡೆದವರಿಗೆ STEM-OPT ಅಡಿಯಲ್ಲಿ ಮೂರು ವರ್ಷಗಳ ಉದ್ಯೋಗವನ್ನು ನೀಡಲಾಗುತ್ತದೆ. H-1B ವೀಸಾಗಳಲ್ಲಿ ನೇಮಕ ಮಾಡಿಕೊಳ್ಳುವ ಬದಲು, ದೊಡ್ಡ ಟೆಕ್ ಕಂಪನಿಗಳು ನೇರವಾಗಿ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತಿವೆ. ಮೂರು ವರ್ಷಗಳವರೆಗೆ ಅವರು ಸುಲಭವಾಗಿ ಕೆಲಸ ಮಾಡಬಹುದು. ನಂತ್ರ ಏನು ಎಂಬ ಪ್ಲಾನಿಂಗ್ ಗೆ ಸಾಕಷ್ಟು ಸಮಯ ಸಿಗುತ್ತದೆ. ಜೊತೆಗೆ H-1B ಶುಲ್ಕವನ್ನು ಪಾವತಿಸಬೇಕಾಗಿಲ್ಲ. 

ಮಿಲಿಟರಿ ನರ್ಸ್‌ಗಳಿಗೆ ಬಂಪರ್‌ ನ್ಯೂಸ್‌, Ex-Servicemen ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ!

ಟೆಕ್ ಕಂಪನಿಗಳ ಈ ಹೊಸ ನೀತಿ ವಿದ್ಯಾರ್ಥಿಗಳಿಗೆ ಖುಷಿ ತಂದಿದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಹೊಸ ಅವಕಾಶ ತೆರೆದುಕೊಂಡಿದೆ. ಆದ್ರೆ ಸ್ಟಾರ್ಟ್ ಅಪ್ ಕಂಪನಿಗಳಿಗೆ ವೀಸಾ ದೊಡ್ಡ ಸಮಸ್ಯೆ. ಹೆಚ್ಚಿನ ಸಂಬಳ ನೀಡಲು ಸಾಧ್ಯವಾಗದ ಕಂಪನಿಗಳು ಸ್ಥಳೀಯರನ್ನು ನೇಮಕ ಮಾಡ್ಕೊಂಡು ಅವರಿಗೆ ತರಬೇತಿ ನೀಡ್ತಿವೆ.



Source link

Leave a Reply

Your email address will not be published. Required fields are marked *