
ಶುಗರ್ ಆರೋಗ್ಯಕ್ಕೆ ಹಾನಿಕರ. ಇದನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಟೀ, ಕಾಫಿಗೂ ಶುಗರ್ ಹಾಕದ ಅನೇಕರು, ಕೋಲ್ಡ್ ಡ್ರಿಂಕ್ಸ್ ನಲ್ಲೂ ಶುಗರ್ ಫ್ರೀ ಹುಡುಕ್ತಿದ್ದಾರೆ. ಇದೇ ಕಾರಣಕ್ಕೆ ಅಂತ ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ.
ಫಿಟ್ನೆಸ್, ತೂಕ ಇಳಿಕೆ ಹೆಸರಿನಲ್ಲಿ ಜನರು ಝೀರೋ ಶುಗರ್ ಟ್ರೆಂಡ್ ಫಾಲೋ ಮಾಡ್ತಿದ್ದಾರೆ. ಹೆಚ್ಚು ಸಕ್ಕರೆ ಸೇವಿಸೋದ್ರಿಂದ ಮೂಡ್ ಸ್ವಿಂಗ್, ತೂಕ ಹೆಚ್ಚಳ, ಮಧುಮೇಹ ಮತ್ತು ಹೃದಯ ಕಾಯಿಲೆಯಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಉಂಟಾಗ್ಬಹುದು. ಈ ಬಗ್ಗೆ ಡಾಕ್ಟರ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಲಹೆ, ವಿಡಿಯೋಗಳು ಬರ್ತಿರುತ್ತವೆ. ಇದೇ ಕಾರಣಕ್ಕೆ ಅನೇಕರು ಸಕ್ಕರೆ ರಹಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮಾರ್ಕೆಟ್ ನಲ್ಲಿ ಸಕ್ಕರೆ ರಹಿತ ಸ್ಮೂಥಿ ಬೌಲ್, ಸಕ್ಕರೆ ರಹಿತ ಪ್ರೋಟೀನ್ ಬಾರ್ಗಳಿಂದ ಹಿಡಿದು ಸಕ್ಕರೆ ರಹಿತ ಕೋಲ್ಡ್ ಡ್ರಿಂಕ್ಸ್ ಲಭ್ಯ ಇದೆ. ಈ ಜಿರೋ ಶುಗರ್ ಅಥವಾ ಶುಗರ್ ಫ್ರೀ ಪಾನೀಯಕ್ಕೆದಿನ ದಿನಕ್ಕೂ ಬೇಡಿಕೆ ಹೆಚ್ಚಾಗ್ತಿದೆ. ಭಾರತದಲ್ಲಿ ಶೂನ್ಯ ಮತ್ತು ಕಡಿಮೆ ಸಕ್ಕರೆ ಪಾನೀಯಗಳ ಮಾರಾಟ 2025 ರಲ್ಲಿ ಐದು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿತು.
ಹಿಂದೆ ಇದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತ ಆಗಿತ್ತು. ಅನೇಕರು ಶುಗರ್ ಫ್ರೀ ಅಂದ್ರೆ ನಗ್ತಿದ್ರು. ಮಧುಮೇಹಿಗಳು ಮಾತ್ರ ಇದ್ರ ಸೇವನೆ ಮಾಡ್ಬೇಕು ಎನ್ನುವ ಅಲಿಖಿತ ರೂಲ್ಸ್ ಕೂಡ ಇತ್ತು. ಆದ್ರೀಗ ಕಾಲ ಬದಲಾಗಿದೆ. ಜನರು ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸ್ತಿರೋದ್ರಿಂದ ಪ್ರತಿ ದಿನ ತಿನ್ನುವ ಆಹಾರದಿಂದ ಹಿಡಿದು ಟೀ, ಕಾಫಿ ಸೇರಿದಂತೆ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಮುನ್ನ ಶುಗರ್ ಫ್ರೀಗೆ ಆದ್ಯತೆ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಐದು ವರ್ಷಗಳಿಂದ ಶುಗರ್ ಫ್ರೀ ಕೋಲ್ಡ್ ಡ್ರಿಂಕ್ಸ್ ಕಂಪನಿ ಲೀಡ್ ನಲ್ಲಿದೆ.
Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ
ನಂಬರ್ ಒನ್ ಸ್ಥಾನದಲ್ಲಿ ಕೋಕಕೋಲಾ
ET ವರದಿಯ ಪ್ರಕಾರ, ಕೋಕಾ-ಕೋಲಾ 60,000 ಕೋಟಿ ರೂಪಾಯಿ ಸಾಫ್ಟ್ ಡ್ರಿಂಕ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ಕಳೆದ ವರ್ಷ, ಶೂನ್ಯ ಸಕ್ಕರೆ ಪಾನೀಯಗಳು ಕಂಪನಿಯ ಒಟ್ಟು ಮಾರಾಟದ ಶೇಕಡಾ 30 ರಷ್ಟಿತ್ತು. ಈ ಅವಧಿಯಲ್ಲಿ, ಡಯಟ್ ಕೋಕ್ ಮಾರಾಟ ಒಂದು ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ. ಕೋಕಾ-ಕೋಲಾದ ಶೂನ್ಯ ಸಕ್ಕರೆ ಪಾನೀಯಗಳಲ್ಲಿ ಡಯಟ್ ಕೋಕ್, ಕೋಕ್ ಝೀರೋ, ನೊ-ಶುಗರ್ ಥಂಬ್ಸ್ ಅಪ್ ಎಕ್ಸ್ ಫೋರ್ಸ್, ಸ್ಪ್ರೈಟ್ ಝೀರೋ ಮತ್ತು ಕಿನ್ಲಿ ವಾಟರ್ ಹಾಗೆಯೇ ಜ್ಯೂಸ್ಗಳು ಮತ್ತು ಎನರ್ಜಿ ಡ್ರಿಂಕ್ಗಳು ಸೇರಿವೆ. ಪೆಪ್ಸಿಕೋದ ಸಕ್ಕರೆ ರಹಿತ ಮತ್ತು ಮಧ್ಯಮ ಸಕ್ಕರೆ ಪಾನೀಯಗಳ ಮಾರಾಟವು ಅಕ್ಟೋಬರ್-ಡಿಸೆಂಬರ್ 2025 ರ ಅವಧಿಯಲ್ಲಿ ಕಂಪನಿಯ ಒಟ್ಟು ಮಾರಾಟದ ಶೇಕಡಾ 59 ರಷ್ಟು ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕಕ್ಕಿಂತ ಶೇಕಡಾ 53ರಷ್ಟು ಹೆಚ್ಚಾಗಿದೆ. ಈ ವಿಭಾಗದಲ್ಲಿ ಕಂಪನಿಯ ಕೊಡುಗೆಗಳಲ್ಲಿ ಎನರ್ಜಿ ಡ್ರಿಂಕ್ ಸ್ಟಿಂಗ್, ಪೆಪ್ಸಿ ಬ್ಲಾಕ್, 7 ಅಪ್ ಝೀರೋ ಶುಗರ್, ಟ್ರೋಪಿಕಾನಾ ನೋ-ಶುಗರ್, ಎವರೆಸ್ಟ್ ಸೋಡಾ ಮತ್ತು ಅಕ್ವಾಫಿನಾ ವಾಟರ್ ಸೇರಿವೆ.
ಪುರುಷರಿಗೆ ಪೀರಿಯಡ್ಸ್ ಆಗುತ್ತದೆಯೇ? ಇರಿಟೆಬಲ್ ಮೇಲ್ ಸಿಂಡ್ರೋಮ್ ಬಗ್ಗೆ ತಿಳ್ಕೊಳ್ಳಿ
ಸಕ್ಕರೆ ಪಾನೀಯ ಸೇವನೆಯಿಂದಾಗುವ ಹಾನಿ
ಸಕ್ಕರೆ ಪಾನೀಯಗಳು ಬೊಜ್ಜಿಗೆ ಕಾರಣವಾಗುತ್ವೆ ಎಂಬುದು ಎಲ್ಲರಿಗೂ ತಿಳಿದಿರೋ ವಿಷ್ಯ. ಇದು 13 ರೀತಿಯ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಕ್ಯಾನ್ಸರ್ ಸಕ್ಕರೆ ಪಾನೀಯ ಸೇವನೆಯೊಂದಿಗೆ ಸಂಬಂಧಿಸಿದ ಅನೇಕ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದರಲ್ಲಿ ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಹಲ್ಲು ಕೊಳೆಯುವಿಕೆಯ ಅಪಾಯವೂ ಸೇರಿದೆ. ಕೊರೊನಾ ನಂತ್ರ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಹಾಗಾಗಿ ಸಕ್ಕರೆಯುಕ್ತ ಕೋಲ್ಡ್ ಡ್ರಿಂಕ್ಸ್ ಗೆ ಗುಡ್ ಬೈ ಹೇಳ್ತಿದ್ದಾರೆ.