ಚಿಕ್ಕಬಳ್ಳಾಪುರ,ಫೆ.13: ಹೆಂಡತಿಯ ಒಡವೆಯನ್ನು ಅಡವಿಟ್ಟು, ಹಗಲು ರಾತ್ರಿ ಕಷ್ಟಪಟ್ಟು ಸುಂದರವಾದ ಬಾಳೆ ತೋಟ ಬೆಳೆಸಿದ್ದ ರೈತನಿಗೆ ಅದೇ ಜೀವನ ಆಸರೆಯಾಗಿತ್ತು. 300ಕ್ಕೂ ಹೆಚ್ಚು ಬಾಳೆ ಗಿಡಗಳು ಇದ್ದವು, ಅದು ಯಾರ ಕಣ್ಣು ಬಿಟ್ಟೋ ಗೊತ್ತಿಲ್ಲ. ರಾತ್ರೋ ರಾತ್ರಿ ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಬೆಳಗೆರೆ ಗ್ರಾಮದ ಮಂಜುನಾಥ್ ಹಾಗೂ ನಂದಿನಿ ದಂಪತಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಮಾರುಕಟ್ಟೆಯಲ್ಲಿ ರೂಪಾಯಿ ಬಂಡವಾಳ ಹಾಕಿ ಬಾಳೆ ಗಿಡ ಹಾಕಿದ್ದರು. ಇನ್ನೇನು ತಿಂಗಳು ಎರಡು ಆಗಿದ್ರೆ, ಬಾಳೆ ಹೋಗಿ ಬಿಟ್ಟು ಫಸಲು ಕೈಗೆ ಬರಬೇಕಿತ್ತು. ಅಷ್ಟರಲ್ಲೇ ದುಷ್ಕರ್ಮಿಗಳು ರಾತ್ರೋ ರಾತ್ರಿ ಎಲ್ಲವನ್ನು ನಾಶ ಮಾಡಿದ್ದಾರೆ. ಈ ಕೃತ್ಯವನ್ನು ಹಳೆಯ ದ್ವೇಷಕ್ಕೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ