Valentine's Day: ಹುಡುಗಿಯರು ಇಷ್ಟು ಅರ್ಥಮಾಡಿಕೊಂಡ್ರೆ 'ಲವ್ ಫೇಲ್ಯುರ್' ಆಗೋದೇ ಇಲ್ಲ ಅಂತಿರೋ ಗಂಡುಹೈಕ್ಳು!

Valentine's Day: ಹುಡುಗಿಯರು ಇಷ್ಟು ಅರ್ಥಮಾಡಿಕೊಂಡ್ರೆ 'ಲವ್ ಫೇಲ್ಯುರ್' ಆಗೋದೇ ಇಲ್ಲ ಅಂತಿರೋ ಗಂಡುಹೈಕ್ಳು!

Valentine's Day: ಹುಡುಗಿಯರು ಇಷ್ಟು ಅರ್ಥಮಾಡಿಕೊಂಡ್ರೆ 'ಲವ್ ಫೇಲ್ಯುರ್' ಆಗೋದೇ ಇಲ್ಲ ಅಂತಿರೋ ಗಂಡುಹೈಕ್ಳು!

ಪ್ರತಿವರ್ಷ ಫೆಬ್ರವರಿ 14 ಬಂದರೆ ಸಾಕು, ಯುವಜನತೆ ಅದೊಂದು ದೊಡ್ಡ ಹಬ್ಬ ಎಂಬಂತೆ ಸಂಭ್ರಮಿಸುತ್ತಾರೆ. ಇದು ವಿದೇಶಗಳಲ್ಲಿ ಶುರುವಾದ ಸಂಭ್ರಮಾಚರಣೆ. ಆದರೆ ಈಗ ಭಾರತವೂ ಸೇರಿದಂತೆ ಹೆಚ್ಚುಕಡಿಮೆ ಇಡೀ ವಿಶ್ವಕ್ಕೇ ವ್ಯಾಪಿಸಿದೆ ಎನ್ನಬಹುದು. ಆದರೆ ಈ ಪೋಸ್ಟ್ ತುಂಬಾ ವಿಶೇ‍ಷವಾಗಿದೆ..

ಪ್ರೇಮಿಗಳ ದಿನಾಚರಣೆಗೆ (Valentine’s Day) ಇನ್ನೊಂದೇ ದಿನ ಬಾಕಿ.. ಪ್ರತಿವರ್ಷ ಫೆಬ್ರವರಿ ತಿಂಗಳು 14 ಬಂತೆಂದರೆ ಪ್ರೇಮಿಗಳು ಹುಚ್ಚೆದ್ದು ಕುಣಿಯುತ್ತಾರೆ. ಕಾರಣ, ಈ ದಿನ ಪ್ರೇಮಿಗಳ ಡೇ ಎಂಬ ಕಾರಣಕ್ಕೆ. ವರ್ಷದಲ್ಲಿ ಅದೊಂದೇ ದಿನ ಲವರ್ಸ್ ತಮ್ಮ ದಿನ ಅನ್ನೋದನ್ನ ಆಚರಿಸೋದು ಅಂತಲ್ಲ. ಆದರೆ, ಈ ದಿನ ಹೊಸ ಪ್ರೇಮಿಗಳು ಹುಟ್ಟಿಕೊಳ್ಳುವ ದಿನವೂ ಹೌದು ಎನ್ನಬಹುದು. ಈಗಾಗಲೇ ಪ್ರೇಮಿಗಳು ಆಗಿರೋ ಹುಡುಗ-ಹುಡುಗಿಯರು ಈ ದಿನವನ್ನು ಆಚರಿಸುವುದರ ಜೊತೆಗೆ ಪ್ರತಿವರ್ಷ ಹೊಸಬರೂ ಒಂದಷ್ಟು ಜನರು ಸೇರಿಕೊಳ್ಳುತ್ತಾರೆ ಎಂಬುದು ವಿಶೇಷ ಎನ್ನಬಹುದು.

ಒಟ್ಟಿನಲ್ಲಿ ಪ್ರತಿವರ್ಷ ಫೆಬ್ರವರಿ 14 ಬಂದರೆ ಸಾಕು, ಯುವಜನತೆ ಅದೊಂದು ದೊಡ್ಡ ಹಬ್ಬ ಎಂಬಂತೆ ಸಂಭ್ರಮಿಸುತ್ತಾರೆ. ಇದು ವಿದೇಶಗಳಲ್ಲಿ ಶುರುವಾದ ಸಂಭ್ರಮಾಚರಣೆ. ಆದರೆ ಈಗ ಭಾರತವೂ ಸೇರಿದಂತೆ ಹೆಚ್ಚುಕಡಿಮೆ ಇಡೀ ವಿಶ್ವಕ್ಕೇ ವ್ಯಾಪಿಸಿದೆ ಎನ್ನಬಹುದು.

ಭಾರತದಲ್ಲಿ ಸಾಕಷ್ಟು ಜನರು ಈ ಪ್ರೇಮಿಗಳ ದಿನವನ್ನು ವಿರೋಧಿಸುತ್ತಾರೆ ಎಂಬುದು ನಿಜವಾದರೂ, ಇತ್ತೀಚೆಗೆ ಈ ದಿನವನ್ನು ವಿಶೇಷವಾಗಿ ಆಚರಿಸುವ ಸಂಭ್ರಮವೇನೂ ಕಡಿಮೆ ಆಗಿಲ್ಲ. ಈ ವರ್ಷ ಕೂಡ ಹಲವರು ವ್ಯಾಲೆಂಟೈನ್ಸ್ ಡೇ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಅಚ್ಚರಿ ಎಂಬಂತೆ ಇದೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಲ್‌ಚಲ್ ಎಬ್ಬಿಸಿದೆ. ಹುಡುಗಿಯೊಬ್ಬಳು ಬರೆದಂತಿರುವ ಈ ಪೋಸ್ಟ್ ಹುಡುಗರಿಗೆ ಭಾರೀ ಇಷ್ಟವಾಗುವಂತಿವೆ. ಇಷ್ಟವಾಗುವಂತೆ ಇದೆ ಎಂಬುವುದಕ್ಕಿಂತ ‘ಹುಡುಗರು ಈ ಪೋಸ್ಟ್ ನೋಡಿ ಭಾರೀ ಇಷ್ಟಪಟ್ಟಿದ್ದಾರೆ’ ಎನ್ನುವುದೇ ಸೂಕ್ತ. ಏಕೆಂದರೆ, ಈ ಪೋಸ್ಟ್ ಶೇರ್ ಮಾಡುತ್ತಿರುವುದು, ಚರ್ಚೆ ಮಾಡುತ್ತಿರುವುದು, ಆ ಬಗ್ಗೆ ಹೆಚ್ಚುಹೆಚ್ಚು ಮಾತನ್ನಾಡುತ್ತಿರುವುದು ಕೂಡ ಹುಡುಗರೇ ಎಂಬುದು ವೈರಲ್ ಆಗಿರೋ ಸಂಗತಿ.

ಹಾಗಿದ್ದರೆ ಆ ಪೋಸ್ಟ್‌ನಲ್ಲಿ ಏನಿದೆ ನೋಡಿ:-

’ಸರಳವಾಗಿ ಪ್ರೇಮಿಸೋಣ ಗೆಳೆಯಾ..

ವಿಪರೀತ ನಾಟಕ, ತೀವ್ರಭಾವುಕತೆ, ಮುಗಿಯದ ಭರವಸೆ, ಬಲುದೂರದ ಯೋಜನೆಗಳು, ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, ಯಾವುದಂದರೆ ಯಾವುದೂ ಬೇಡ..

ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ, ಜೊತೆಗಿರುವಷ್ಟು ಹೊತ್ತೂ ನಮ್ಮದು ಮಾತ್ರವೆನಿಸುವ ಸಮಯ, ಒಂದು ಗಾಢ ಅಪ್ಪುಗೆ, ಕಣ್ಣ ಮಾತು, ಪರಸ್ಪರ ಕಾರುಣ್ಯ, ಸಾಕಿಷ್ಟು..

ಬದುಕು ಆಗಲೇ ಸಾಕಷ್ಟು ಸಂಕೀರ್ಣವಾಗಿದೆ. ನಾವು ಆದಷ್ಟೂ ಸರಳವಾಗಿಯೇ ಪ್ರೀತಿಸೋಣ!'

ಈ ಟೆಕ್ಸ್ಟ್, ಪೋಸ್ಟ್ ಹಾಗೂ ಇದರಲ್ಲಿರುವ ವಾಕ್ಯಗಳು ಇದೀಗ ಪ್ರೇಮಿಗಳ ದಿನಾಚರಣೆಯ ಮುನ್ನಾದಿನ ಸಾಕಷ್ಟು ವೈರಲ್ ಆಗುತ್ತಿವೆ. ಕಾರಣ, ಈ ಬರವಣಿಗೆ ಹುಡುಗರಿಗೆ ಇಷ್ಟವಾಗುವಂತಿವೆ. ಅದಕ್ಕೆ ಕಾರಣ ಸ್ಪಷ್ಟ.. ನಮ್ಮ ಭಾರತದಲ್ಲಿ ಹುಡುಗರು ಸಂಪಾದಿಸಿ ಹುಡುಗುಯರನ್ನು ಸಾಕಬೇಕು ಎಂಬ ಸಂಪ್ರದಾಯ ಚಾಲ್ತಿಯಲ್ಲಿತ್ತು.

ಅದರಂತೆ ಸಮಾಜದಲ್ಲಿ ಕೂಡ ‘ಗಂಡು ದುಡಿದು ತಂದುಹಾಕಬೇಕು, ಹೆಣ್ಣು ಮನೆ ತೂಗಿಸಿಕೊಂಡು ಹೋಗೋದನ್ನು ನೋಡಿಕೊಳ್ಳಬೇಕು’ ಎಂಬ ಪದ್ಧತಿ ಇತ್ತು. ಆದರೆ, ಈಗ ಹೆಣ್ಣು ಕೂಡ ಗಂಡಿಗೆ ಸರಿಸಮನಾವಾಗಿ ದುಡಿಯುತ್ತಿದ್ದರೂ ಕೂಡ ಇನ್ನೂ ಕೂಡ ಗಂಡು-ಹೆಣ್ಣು ಇಬ್ಬರಲ್ಲೂ ಆ ಮೆಂಟಾಲಿಟಿ ಹೋಗಿಲ್ಲ.

ಹೀಗಾಗಿ, ಗಂಡು ಸಂಸಾರದ ಭಾರ ಹೊರಬೇಕು ಎಂಬ ಮಾತಿನಂತೆ, ಹುಡುಗರು ಹೆಚ್ಚಾಗಿ ಸಂಪಾದಿಸುವ, ಹುಡುಗಿಗೆ ಕೊಡುವ ಮನಸ್ಥಿತಿಯಿಂದ ಹೊರಗೆ ಬಾರದ ಕಾರಣಕ್ಕೆ ಈ ಪೋಸ್ಟ್ ಹುಡುಗರಿಗೆ ಸ್ವಲ್ಪ ರಿಲೀಫ್ ಕೊಡುವಂತೆ ಇದೆ. ಆದ್ದರಿಂದ ಇದು ಹುಡುಗರ ಅಚ್ಚುಮೆಚ್ಚಿನ ಪೋಸ್ಟ್ ಆಗಿ ಸಾಕಷ್ಟು ವೈರಲ್ ಆಗುತ್ತಿದೆ.

Source link

Leave a Reply

Your email address will not be published. Required fields are marked *