Headlines

ಪಾಕಿಸ್ತಾನದಲ್ಲಿ ‘ಧುರಂಧರ್’ ಸಿನಿಮಾಕ್ಕೆ ಭಾರಿ ಬೇಡಿಕೆ: ಡಿವಿಡಿ ಬೆಲೆ ಎಷ್ಟು?

ಪಾಕಿಸ್ತಾನದಲ್ಲಿ ‘ಧುರಂಧರ್’ ಸಿನಿಮಾಕ್ಕೆ ಭಾರಿ ಬೇಡಿಕೆ: ಡಿವಿಡಿ ಬೆಲೆ ಎಷ್ಟು?


ಬಾಕ್ಸ್ ಆಫೀಸ್‌ನಲ್ಲಿ ಹಲವು ಹೊಸ ದಾಖಲೆಗಳನ್ನೇ ಬರೆದಿರುವ 2025ರ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ’ ಈ ವಾರ ಒಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳ ರೀತಿಯಲ್ಲೇ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ.

‘ಧುರಂಧರ’ (ಧುರಂಧರ) ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಸಹ ಸಿನಿಮಾ ಚಿತ್ರಮಂದಿರಗಳಲ್ಲಿ ಕಾಣುತ್ತಲೇ ಇದೆ. ಭಾರತೀಯ ಸೈನಿಕ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದಕರೊಟ್ಟಿಗೆ ಸೇರಿ ಅವರ ಮೇಲೆ ಗೂಢಚಾರಿಕೆ ಮಾಡುವ ಕಥೆ ‘ಧುರಂಧರ’ ಸಿನಿಮಾ ಒಳಗೊಂಡಿದೆ. ಸಿನಿಮಾದ ಆಕ್ಷನ್, ಹಾಡುಗಳು, ನಟರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಆದರೆ ಸಿನಿಮಾವನ್ನು ಮುಸ್ಲಿಂ ವಿರೋಧಿ, ನೆರೆ ರಾಷ್ಟ್ರ ವಿರೋಧಿ ಎಂಬಿತರ ಕಾರಣಗಳಿಂದ ಯುಎಇ ಮತ್ತು ಕೆಲ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ. ಇನ್ನು ಪಾಕಿಸ್ತಾನದಲ್ಲಂತೂ ಇಂದಿಗೂ ಭಾರತೀಯ ಸಿನಿಮಾಗಳ ಮೇಲೆ ನಿಷೇಧ ಇದ್ದೇ ಇದೆ. ಹಾಗಿದ್ದರೂ ಸಹ ಪಾಕಿಸ್ತಾನದಲ್ಲಿ ‘ಧುರಂಧರ’ ಸಿನಿಮಾ ಭಾರಿ ವೈರಲ್ ಆಗಿದ್ದು, ಜನ ಮುಗಿಬಿದ್ದು ಸಿನಿಮಾದ ಪೈರಸಿ ಕಾಪಿಗಳನ್ನು ಖರೀದಿಸಿ ನೋಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ‘ಧುರಂಧರ’ ಸಿನಿಮಾ ಪೈರೇಟೆಡ್ ರೂಪದಲ್ಲಿ ದೂಳೆಬ್ಬಿಸುತ್ತಿದೆ. ವಿದೇಶಿಗೊಬ್ಬರು ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಿಂದೆ ಭಾರತಕ್ಕೂ ಭೇಟಿ ನೀಡಿದ್ದ ಟ್ರಾವೆಲ್ ವ್ಲಾಗರ್ ಕರ್ಲ್ ರಾಕ್, ಇದೀಗ ಪಾಕಿಸ್ತಾನದ ಪ್ರವಾಸದಲ್ಲಿದ್ದು, ಅಲ್ಲಿನ ಕರಾಚಿ ನಗರದ ‘ಧುರಂಧರ’ ಸಿನಿಮಾದ ಡಿವಿಡಿ ಮಾರುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಸಿನಿಮಾದ ಡಿವಿಡಿ ಮಾರಾಟದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:’ಧುರಂಧರ’ ನಟ ರಣವೀರ್ ಸಿಂಗ್‌ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ವೈದ್ಯರು

ಪಾಕಿಸ್ತಾನದ ಮಾರುಕಟ್ಟೆಯಲ್ಲಿ ‘ಧುರಂಧರ’ ಸಿನಿಮಾದ ಡಿವಿಡಿಗಳು ಕೇವಲ 16 ರೂಪಾಯಿಗೆ (50 ಪಾಕಿಸ್ತಾನಿ ರೂಪಾಯಿ) ಮಾರಾಟವಾಗುತ್ತಿವೆ. ಅದೂ, ಡಿವಿಡಿ ಅಂಗಡಿಗಳವರು ‘ರಂಧ್ರ’ ಸಿನಿಮಾದ ಜಾಹೀರಾತಿಗಾಗಿ ದೊಡ್ಡದಾಗಿ ಪೋಸ್ಟರ್ ಹಾಕಿದ್ದಾರೆ.

‘ಧುರಂಧರ’ ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಕಥಾವಸ್ತುವಿದ್ದರೂ ಸಹ ಅಲ್ಲಿನ ಜನರು ಮುಗಿಬಿದ್ದು ನೋಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಇದೆ, ‘ಧುರಂಧರ’ ಸಿನಿಮಾದ ಹಾಡುಗಳು ಸಹ ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಅಲ್ಲಿಯ ಮದುವೆ ಸಮಾರಂಭಗಳಲ್ಲಿ, ಇತರೆ ಸಮಂಭಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಜನ ಡ್ಯಾನ್ಸ್ ಮಾಡುತ್ತಿದ್ದಾರೆ.

‘ಧುರಂಧರ’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಇದರ ಮುಂದುವರಿದ ಭಾಗ ‘ಧುರಂಧರ 2’ ಬಿಡುಗಡೆಗೆ ಸಜ್ಜಾಗಿದೆ. ರಣವೀರ್ ಸಿಂಗ್ ನಟನೆಯ ಈ ಬಹುನಿರೀಕ್ಷಿತ ಆಕ್ಷನ್ ಚಿತ್ರವು **2026 ರ ಮಾರ್ಚ್ 19 ರಂದು** ವಿಶ್ವದಾದ್ಯಂತ ತೆರೆಕಾಣಲಿದೆ. ಮೊದಲ ಭಾಗ ಈ ಬಾರಿ ಹೆಚ್ಚಿನ ಸಾಹಸ ಮತ್ತು ರೋಚಕತೆ ಇರಲಿದೆ, ಸಿನಿಯಲ್ಲಿ ಭಾರೀ ಕುತೂಹಲ ಮೂಡಿಸಿದೆ. ಐಎಂಡಿಬಿ ಪಟ್ಟಿಯಲ್ಲಿಯೂ ಇದು ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *