Headlines

25 ವರ್ಷದ ಕಾಯುವಿಕೆಯ ನಂತರ 79ನೇ ವರ್ಷದಲ್ಲಿ 8 ಕೋಟಿಯ ಲಾಟರಿ ಗೆದ್ದ ಬಾಲಿವುಡ್‌ ನಿರ್ಮಾಪಕ! | Bollywood Producer Rajan Lall Wins 8 Crore Dubai Duty Free Jackpot Lottery San

25 ವರ್ಷದ ಕಾಯುವಿಕೆಯ ನಂತರ 79ನೇ ವರ್ಷದಲ್ಲಿ 8 ಕೋಟಿಯ ಲಾಟರಿ ಗೆದ್ದ ಬಾಲಿವುಡ್‌ ನಿರ್ಮಾಪಕ! | Bollywood Producer Rajan Lall Wins 8 Crore Dubai Duty Free Jackpot Lottery San



25 ವರ್ಷದ ಕಾಯುವಿಕೆಯ ನಂತರ 79ನೇ ವರ್ಷದಲ್ಲಿ 8 ಕೋಟಿಯ ಲಾಟರಿ ಗೆದ್ದ ಬಾಲಿವುಡ್‌ ನಿರ್ಮಾಪಕ! | Bollywood Producer Rajan Lall Wins 8 Crore Dubai Duty Free Jackpot Lottery San

Bollywood Producer Rajan Lall Wins ₹8 Crore Dubai Jackpot ದುಬೈ ಮೂಲದ ಭಾರತೀಯ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ರಾಜನ್ ಲಾಲ್ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ರಾಫೆಲ್‌ನಲ್ಲಿ $1 ಮಿಲಿಯನ್ (₹8-9 ಕೋಟಿ) ಗೆದ್ದಿದ್ದಾರೆ. 

ಬೆಂಗಳೂರು (ಫೆ.13): 80ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಇರುವಾಗ ಭಾರತೀಯ ವಲಸಿಗ ಮತ್ತು ಬಾಲಿವುಡ್ ನಿರ್ಮಾಪಕ ರಾಜನ್ ಲಾಲ್ ದುಬೈ ಡ್ಯೂಟಿ ಫ್ರೀ ಜಾಕ್‌ಪಾಟ್ ಗೆದ್ದಿದ್ದಾರೆ. ದುಬೈ ಮೂಲದ ಭಾರತೀಯ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ರಾಜನ್ ಲಾಲ್ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ರಾಫೆಲ್‌ನಲ್ಲಿ $1 ಮಿಲಿಯನ್ (₹8-9 ಕೋಟಿ) ಗೆದ್ದಿದ್ದಾರೆ. ವಿಶೇಷ ಏನೆಂದರೆ, ಇನ್ನೇನು ಕೆಲವೇ ದಿನಗಳಲ್ಲಿ ಅವರಿ 80ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಕ್ಯಾನ್ಸರ್‌, ಮೂರು ಬಾರಿ ಹೃದಯಾಘಾತ ಹಾಗೂ ಹೃದಯ ವೈಫಲ್ಯ ಒಳಗಾದ ನಡುವೆಯೂ ಬದುಕುಳಿದಿದ್ದ ಲಾಲ್‌, ಈ ಗೆಲುವನ್ನು ತಮ್ಮ ಜನ್ಮದಿನಕ್ಕೆ ನಾನು ಊಹೆ ಮಾಡಿಕೊಳ್ಳಲು ಸಾಧ್ಯವಾಗದಂತ ದೊಡ್ಡ ಉಡುಗೊರೆ ಎಂದು ಬಣ್ಣಿಸಿದ್ದಾರೆ. ದೀರ್ಘಕಾಲದ ದುಬೈ ನಿವಾಸಿಯಾಗಿರುವ ಅವರು ಜನವರಿ 30 ರಂದು ಕಾನ್ಕೋರ್ಸ್ ಡಿ ನಲ್ಲಿ ಖರೀದಿಸಿದ ಟಿಕೆಟ್ ಸಂಖ್ಯೆ 3099 ನೊಂದಿಗೆ ಮಿಲೇನಿಯಮ್ ಮಿಲಿಯನೇರ್ ಸರಣಿ 535 ರಲ್ಲಿ ಬಹುಮಾನವನ್ನು ಜಯಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಸಿರೀಸ್‌ 534 ರ ಮತ್ತೊಬ್ಬ ವಿಜೇತ, ಪೋರ್ಚುಗಲ್‌ನಲ್ಲಿ ನೆಲೆಸಿರುವ ಆಸ್ಟ್ರಿಯನ್ ಪ್ರಜೆ ಆಲಿವರ್ ಕೂಡ ಜನವರಿ 27 ರಂದು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ ನಂತರ $1 ಮಿಲಿಯನ್ ಬಹುಮಾನ ಗೆದ್ದಿದ್ದಾರೆ.

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನೀ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ “ಇಯರ್‌ ಆಫ್‌ ಫೈರ್‌ ಹಾರ್ಸ್‌” ಗುರುತಿಸುವ ಆಚರಣೆಯ ಭಾಗವಾಗಿ ಈ ಡ್ರಾವನ್ನು ನಡೆಸಲಾಯಿತು.

ಪಾಮ್ ಜುಮೇರಾದ ಸಮುದ್ರಮುಖಿ ವಿಲ್ಲಾದಲ್ಲಿ ವಾಸಿಸುವ ಲಾಲ್, ಶ್ರೀಮಂತರು ಇಂತಹ ಅನಿರೀಕ್ಷಿತ ಲಾಭಗಳಿಂದ ಲಾಭ ಪಡೆಯುವುದನ್ನು ಮುಂದುವರಿಸಬೇಕೇ ಎಂದು ಕೇಳಿದಾಗ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದರು. ಜೀವನವು ನನಗೆ ಎಂದಿಗೂ ನ್ಯಾಯಯುತವಾಗಿಲ್ಲ ಎಂದು ಹೇಳಿದರು ಮತ್ತು ಜನರು ತಮಗೆ ಹಣದ ಅಗತ್ಯವಿಲ್ಲ ಎಂದು ಭಾವಿಸಬಾರದು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಸದ್ಯಕ್ಕೆ ಅವರು ಬಹುಮಾನದ ಮೊತ್ತವನ್ನು ಹೇಗೆ ಬಳಸಬೇಕೆಂದು ನಿರ್ಧರಿಸಿಲ್ಲ. ಬದಲಾಗಿ, ಮುಂಬರುವ ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಅವರು ಕಾತರದಿಂದ ಕಾಯುತ್ತಿದ್ದಾರೆ.

25 ವರ್ಷದಿಂದ ಕಾಯುತ್ತಿದ್ದ ಲಾಲ್‌

ವರ್ಷಗಳ ಪರಿಶ್ರಮದ ನಂತರ ಈ ಗೆಲುವು ಬಂದಿದೆ ಎಂದು ಲಾಲ್‌ ಹೇಳಿದ್ದಾರೆ. ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಒಂದು ಟಿಕೆಟ್ ಖರೀದಿಸುತ್ತಿದ್ದೇನೆ, ಆದರೆ ಯಾವುದೇ ಯಶಸ್ಸು ಸಿಕ್ಕಿಲ್ಲ ಎಂದು ಲಾಲ್ ತಿಳಿಸಿದ್ದಾರೆ. ಇತ್ತೀಚೆಗೆ ಅವರು ಸ್ನೇಹಿತರೊಬ್ಬರು ಎಂದಿಗೂ ಗೆಲ್ಲದ ಬಗ್ಗೆ ತಮಾಷೆ ಮಾಡಿದ್ದರು. ಅವರು ಮುಂಬೈಗೆ ಚಲನಚಿತ್ರೋದ್ಯಮದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಪ್ರವಾಸದ ಸಮಯದಲ್ಲಿ ವಿಜೇತ ಟಿಕೆಟ್ ಖರೀದಿಸಿದರು. ಅವರು ಸೌದಿ ಅರೇಬಿಯಾದಲ್ಲಿದ್ದಾಗ ಗೆಲುವಿನ ಬಗ್ಗೆ ಮಾಹಿತಿ ನೀಡುವ ಕರೆಯನ್ನು ಸ್ವೀಕರಿಸಿದರು. ಆ ಕ್ಷಣಕ್ಕೆ ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ ಎಂದಿದ್ದಾರೆ.

1990 ರ ದಶಕದಲ್ಲಿ ಮುಂಬೈನಲ್ಲಿ ಆದಾಯ ತೆರಿಗೆ ದಾಳಿಗಳು ಮತ್ತು ಬೆದರಿಕೆಗಳನ್ನು ಎದುರಿಸಿದ ನಂತರ ಅವರು ತಮ್ಮ ಐವತ್ತರ ಹರೆಯದಲ್ಲಿ ದುಬೈಗೆ ತೆರಳಿದರು. ಹೊಸದಾಗಿ ಬಟ್ಟೆ ವ್ಯಾಪಾರದಲ್ಲಿ ಕೆಲಸ ಪ್ರಾರಂಭಿಸಿ, ತಮ್ಮ ವೃತ್ತಿಜೀವನವನ್ನು ಮೊದಲಿನಿಂದಲೂ ಪುನರ್ನಿರ್ಮಿಸಿಕೊಂಡರು. ನಗರದಲ್ಲಿನ ಆರಂಭಿಕ ದಿನಗಳಲ್ಲಿ ಸಾಧಾರಣ ವೇತನ ಗಳಿಸುವುದು, ಮಿತವ್ಯಯದಿಂದ ಬದುಕುವುದು ಮತ್ತು ಸ್ನೇಹಿತರನ್ನು ಅವಲಂಬಿಸಿದ್ದನ್ನು ಅವರು ಈ ಹಿಂದೆ ನೆನಪಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *