Headlines

Naa Ninna Bidalaare ಸೀರಿಯಲ್‌ ಮಾಯಾ ಆತ್ಮಹ*ತ್ಯೆಗೆ ಯತ್ನ: ಶೂಟಿಂಗ್‌ ಸೆಟ್‌ನಲ್ಲಿ ಏನಾಯ್ತು ನೋಡಿ

Naa Ninna Bidalaare ಸೀರಿಯಲ್‌ ಮಾಯಾ ಆತ್ಮಹ*ತ್ಯೆಗೆ ಯತ್ನ: ಶೂಟಿಂಗ್‌ ಸೆಟ್‌ನಲ್ಲಿ ಏನಾಯ್ತು ನೋಡಿ

Naa Ninna Bidalaare ಸೀರಿಯಲ್‌ ಮಾಯಾ ಆತ್ಮಹ*ತ್ಯೆಗೆ ಯತ್ನ: ಶೂಟಿಂಗ್‌ ಸೆಟ್‌ನಲ್ಲಿ ಏನಾಯ್ತು ನೋಡಿ

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಅಂಬಿಕಾಳ ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಮಾಯಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸುತ್ತಾಳೆ. ಈ ಅಪಾಯಕಾರಿ ದೃಶ್ಯದ ಚಿತ್ರೀಕರಣವನ್ನು ಹೇಗೆ ಮಾಡಲಾಯಿತು, ಎಷ್ಟು ಟೇಕ್‌ಗಳನ್ನು ತೆಗೆದುಕೊಳ್ಳಲಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಧಾರಾವಾಹಿಗಳನ್ನು ಹಲವು ವರ್ಷಗಳವರೆಗೆ ಎಳೆಯುತ್ತಾರೆ ಎನ್ನುವ ಆರೋಪ ಮಾಮೂಲು. ಆದರೆ ಒಂದೊಂದು ಎಪಿಸೋಡ್‌ ದೃಶ್ಯಗಳನ್ನು ಮಾಡುವಾಗಲೂ ನಟ-ನಟಿ ಮಾತ್ರವಲ್ಲದೇ ಇಡೀ ತಂಡ ಹೇಗೆಲ್ಲಾ ಸರ್ಕಸ್‌ ಮಾಡಬೇಕಾಗುತ್ತದೆ, ಎಷ್ಟು ಕಷ್ಟಪಡಬೇಕು ಎನ್ನುವುದು ಆ ತಂಡಕ್ಕೆ ಮಾತ್ರ ತಿಳಿದಿರುತ್ತದೆ. ಅದರಲ್ಲಿಯೂ ಒಂದು ಸೀರಿಯಲ್​ನ ಒಂದೇ ಒಂದು ಸೀನ್​ ಮಾಡುವಾಗಲೂ ಕೆಲವೊಮ್ಮೆ ಹಲವಾರು ಟೇಕ್​ಗಳನ್ನು ತೆಗೆದುಕೊಳ್ಳುವುದು ಉಂಟು. ಆದ್ದರಿಂದ ಎಷ್ಟೋ ಬಾರಿ ದಿನಪೂರ್ತಿ ಶೂಟಿಂಗ್​ ಮಾಡಿದರೂ ಕೆಲವೇ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಸಾಹಸಮಯ ದೃಶ್ಯಗಳನ್ನು ಮಾಡುವಾಗ ಕೆಲವೊಮ್ಮೆ ಅಪಾಯಕಾರಿ ಎನ್ನಿಸುವುದೂ ಉಂಟು.

ಇದೀಗ ನಾ ನಿನ್ನ ಬಿಡಲಾರೆ ಸೀರಿಯಲ್‌ (Naa Ninna Bidalaare Serial) ನಲ್ಲಿ ಮಾಯಾ, ಸೀರಿಯಲ್​ನಲ್ಲಿ ಆತ್ಮಹ*ತ್ಯೆ ಮಾಡಿಕೊಳ್ಳುವ ದೃಶ್ಯವೊಂದಿದೆ. ಅಷ್ಟಕ್ಕೂ ಈ ಸೀರಿಯಲ್​​ನಲ್ಲಿ ಅಂಬಿಕಾಳನ್ನು ಸಾಯಿಸಿದ್ದು ಮಾಯಾನೇ ಎನ್ನುವ ಸತ್ಯ ದುರ್ಗಾಗೆ ತಿಳಿಯುತ್ತದೆ. ಅದಕ್ಕೆ ಸಾಕ್ಷಿಯಾಗಿ ಕಿವಿಯೋಲೆ ಸಿಗುತ್ತದೆ.

ಈ ಬಗ್ಗೆ ಗರಂ ಆದ ದುರ್ಗಾ, ನೇರವಾಗಿಯೇ ಮಾಯಾ ಬಳಿ ಈ ವಿಷಯ ಕೇಳುತ್ತಾಳೆ. ನನಗೆ ಸಾಕ್ಷಿ ಸಿಕ್ಕಿದೆ. ನೀನೇ ಅಂಬಿಕಾ ಅವರನ್ನು ಕೊ*ಲೆ ಮಾಡಿದ್ದು ಎನ್ನುವುದು ಗೊತ್ತಾಗಿದೆ ಎನ್ನುತ್ತಾಳೆ. ಆಗ ಮಾಯಾಗೆ ತಪ್ಪಿಸಿಕೊಳ್ಳಲು ಯಾವ ಮಾರ್ಗವೂ ತೋಚುವುದಿಲ್ಲ.

ಇನ್ನು ತನ್ನ ಬಣ್ಣ ಬಯಲಾಗುತ್ತದೆ ಎಂದು, ಇಂಥ ಗಂಭೀರ ಆರೋಪ ಮಾಡಿದ ಮೇಲೆ ನಾನು ಬದುಕಿದ್ದು ಪ್ರಯೋಜನ ಇಲ್ಲ ಎಂದು ಅಲ್ಲೇ ಇರುವ ಬಿಲ್ಡಿಂಗ್​ನಲ್ಲಿ ಬೀಳುತ್ತಾಳೆ. ಅದರ ಶೂಟಿಂಗ್​ ಹೇಗೆ ಮಾಡಲಾಗಿದೆ ಎನ್ನುವ ವಿಡಿಯೋ ಅನ್ನು ಮಾಯಾ ಪಾತ್ರಧಾರಿ ರಮ್ಯಾ ಶೇರ್​ ಮಾಡಿಕೊಂಡಿದ್ದಾರೆ.

ಹಗ್ಗವನ್ನು ಕಟ್ಟಿ ಬಿಲ್ಡಿಂಗ್​ ಮೇಲುಗಡೆ ಕಳಿಸಲಾಗುತ್ತದೆ. ಬಳಿಕ ಹಗ್ಗವನ್ನು ಜಗ್ಗಿದಾಗ, ತೀರಾ ಹತ್ತಿರದಲ್ಲಿಯೇ ಇರುವ, ಎಲ್ಲಾ ಸೌಕರ್ಯ ಇರುವ ನೆಲದ ಮೇಲೆ ಬೀಳುತ್ತಾಳೆ. ಇಲ್ಲಿ ಎಡಿಟಿಂಗ್​ ಮಾಡುವಾಗ ಹಗ್ಗ ಕಾಣಿಸುವುದಿಲ್ಲ. ನೇರವಾಗಿ ಎತ್ತರದ ಕಟ್ಟಡದಿಂದ ಬಿದ್ದಂತೆ ಕಾಣಿಸುತ್ತದೆ.

ಆದರೆ, ಈ ಸಮಯದಲ್ಲಿ ಯಾವುದೂ ಸರಿಯಾಗದೇ ಹಲವಾರು ಟೇಕ್​ ತೆಗೆದುಕೊಳ್ಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಮೇಲಿನಿಂದ ಬೀಳುವಾಗ, ಒಂದೊಂದು ಸಲ ಒಂದೊಂದು ರೀತಿ ಬೀಳುವ ಕಾರಣ, ಹಲವಾರು ಟೇಕ್​ ನಂತರ ಕೊನೆಗೂ ಮಾಯಾ ಸರಿಯಾಗಿ ಬಿದ್ದಿದ್ದಾಳೆ.

Source link

Leave a Reply

Your email address will not be published. Required fields are marked *