Headlines

ಪಿಯು ವಿದ್ಯಾರ್ಥಿನಿಗೆ ನೀನು ಮುಸ್ಲಿಂ ಆಗು, ಇಲ್ಲವೇ ನಿನ್ನ ರೇಪ್ ಮಾಡಿದ ವಿಡಿಯೋ ವೈರಲ್ ಮಾಡ್ತೀನೆಂದ ಯುವಕ! | Bhopal Student Physically Used Filmed And Pressured To Convert To Islam Sat

ಪಿಯು ವಿದ್ಯಾರ್ಥಿನಿಗೆ ನೀನು ಮುಸ್ಲಿಂ ಆಗು, ಇಲ್ಲವೇ ನಿನ್ನ ರೇಪ್ ಮಾಡಿದ ವಿಡಿಯೋ ವೈರಲ್ ಮಾಡ್ತೀನೆಂದ ಯುವಕ! | Bhopal Student Physically Used Filmed And Pressured To Convert To Islam Sat



ಪಿಯು ವಿದ್ಯಾರ್ಥಿನಿಗೆ ನೀನು ಮುಸ್ಲಿಂ ಆಗು, ಇಲ್ಲವೇ ನಿನ್ನ ರೇಪ್ ಮಾಡಿದ ವಿಡಿಯೋ ವೈರಲ್ ಮಾಡ್ತೀನೆಂದ ಯುವಕ! | Bhopal Student Physically Used Filmed And Pressured To Convert To Islam Sat

ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಲಾಂಗ್ ರೈಡ್ ಕರೆದುಕೊಂಡು ಹೋದ ಅನ್ಯಕೋಮಿನ ಯುವಕ,  ಆಕೆಯನ್ನ ಅತ್ಯಾ*ಚಾರ ಮಾಡಿ, ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಮತಾಂತರಕ್ಕೂ ಒತ್ತಡ ಹೇರಿದ್ದಾನೆ. ಪೊಲೀಸರು, ಇಬ್ಬರನ್ನ ಬಂಧಿಸಿದ್ದಾರೆ. ಸರ್ಕಾರ ಎಸ್‌ಐಟಿ ರಚಿಸಿದೆ.

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 11ನೇ ತರಗತಿ ವಿದ್ಯಾರ್ಥಿನಿ ಮೇಲೆ ರೇಪ್, ಬ್ಲ್ಯಾಕ್‌ಮೇಲ್ ಮತ್ತು ಬಲವಂತದ ಮತಾಂತರಕ್ಕೆ ಯತ್ನಿಸಿದ ಗಂಭೀರ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿ ತನಿಖೆ ಶುರು ಮಾಡಿದ್ದಾರೆ. ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ಶಹಪುರ ಏರಿಯಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಆಕೆಗೆ ಸ್ನೇಹಿತನ ಮೂಲಕ ಔಸಾಫ್ ಅಲಿ ಖಾನ್ ಎಂಬಾತನ ಪರಿಚಯವಾಗಿತ್ತು.

ಸ್ನೇಹದ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರೇಪ್

ಸ್ನೇಹ ಬೆಳೆದ ನಂತರ, ಔಸಾಫ್ ಅಲಿ ಖಾನ್ ವಿದ್ಯಾರ್ಥಿನಿಯನ್ನು ಲಾಂಗ್ ಡ್ರೈವ್ ಹೋಗೋಣ ಎಂದು ಕಾರಿನಲ್ಲಿ ಕಾಡಿನಂತಹ ನಿರ್ಜನ ಪ್ರದೇಶಕ್ಕೆ ಕರೆದಿದ್ದಾನೆ. ಸ್ನೇಹಿತನ ಮೇಲೆ ನಂಬಿಕೆ ಇಟ್ಟುಕೊಂಡು ಹೋದ ಆಕೆಯನ್ನು ಖಾನೂಗಾಂವ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಾರಿನಲ್ಲೇ ಅತ್ಯಾ*ಚಾರ ಎಸಗಿದ್ದಾನೆ. ಪೊಲೀಸರ ಪ್ರಕಾರ, ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದೆ.

ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್, 1 ಲಕ್ಷ ರೂ.ಗೆ ಬೇಡಿಕೆ

ಪೊಲೀಸರ ಮಾಹಿತಿ ಪ್ರಕಾರ, ಔಸಾಫ್‌ನ ಸ್ನೇಹಿತ ಮಾಜ್ ಖಾನ್, ಜಿಮ್ ನಡೆಸುತ್ತಿದ್ದನು. ಈತ ಕಾರಿನ ಹೊರಗೆ ನಿಂತುಕೊಂಡು ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದ. ನಂತರ ಇಬ್ಬರೂ ಆರೋಪಿಗಳು ಈ ವಿಡಿಯೋ ಇಟ್ಟುಕೊಂಡು ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ್ದಾರೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ 1 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೆದರಿದ ವಿದ್ಯಾರ್ಥಿನಿ ಹೇಗೋ 40 ಸಾವಿರ ರೂಪಾಯಿ ಕೊಟ್ಟಿದ್ದಾಳೆ. ಆದರೂ ಆರೋಪಿಗಳು ಕಿರುಕುಳ ಮತ್ತು ಒತ್ತಡವನ್ನು ಮುಂದುವರಿಸಿದ್ದಾರೆ.

ಮತಾಂತರಕ್ಕೆ ಒತ್ತಡ, ನಿರಾಕರಿಸಿದ್ದಕ್ಕೆ ವಿಡಿಯೋ ಶೇರ್

ಆರೋಪಿಗಳು ವಿದ್ಯಾರ್ಥಿನಿಯನ್ನು 4 ಬೇರೆ ಬೇರೆ ಕಾರುಗಳಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಎರಡು ಸೆಡಾನ್ ಮತ್ತು ಒಂದು ಮಹೀಂದ್ರಾ ಥಾರ್ ಕಾರು ಸೇರಿವೆ. ಈ ಎಲ್ಲಾ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿ ಆರೋಪಿಗಳ ಸಂಪರ್ಕ ಕಡಿದುಕೊಂಡು ಅವರನ್ನು ಬ್ಲಾಕ್ ಮಾಡಿದಾಗ, ಔಸಾಫ್ ಆ ವಿಡಿಯೋವನ್ನು ಆಕೆಯ ಸ್ನೇಹಿತರಿಗೆ ಕಳುಹಿಸಿದ್ದಾನೆ. ನಂತರ, ಇಸ್ಲಾಂಗೆ ಮತಾಂತರವಾಗಿ ನಮಾಜ್ ಮಾಡುವಂತೆ ಆಕೆಯ ಮೇಲೆ ಒತ್ತಡ ಹೇರಲಾಗಿದೆ. ಕೊನೆಗೆ, ವಿದ್ಯಾರ್ಥಿನಿ ನಡೆದ ಎಲ್ಲಾ ಘಟನೆಯನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಬಳಿಕ ಹಿಂದೂ ಸಂಘಟನೆಗಳ ಸಹಾಯದಿಂದ ಆಕೆಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ.

SIT ರಚನೆ, ತನಿಖೆ ಚುರುಕು

ಹಿರಿಯ ಅಧಿಕಾರಿಯೊಬ್ಬರು ಇಬ್ಬರೂ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಗಂಭೀರತೆ ಗಮನಿಸಿ, ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಸಹಾಯಕ ಪೊಲೀಸ್ ಕಮಿಷನರ್ ನೇತೃತ್ವದ ಈ ತಂಡ, ಆರೋಪಿಗಳು ಬೇರೆ ಮಹಿಳೆಯರನ್ನೂ ಇದೇ ರೀತಿ ಟಾರ್ಗೆಟ್ ಮಾಡಿದ್ದಾರೆಯೇ ಎಂದೂ ತನಿಖೆ ನಡೆಸಲಿದೆ. ಭೋಪಾಲ್‌ನ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಿದಾಗ, ವಕೀಲರು ಔಸಾಫ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವರದಿಯೂ ಬಂದಿದೆ. ಪೊಲೀಸರು ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಮತ್ತು ಆಳವಾದ ತನಿಖೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *