ಆ ಜ್ಯೋತಿಷಿ ಮಾತಿನಂತೆ ಒಳ ಉಡುಪು ಹಾಕ್ತಿಲ್ಲ! ರಾಖಿ ಸಾವಂತ್​ ಕೊಟ್ಟ ಕಾರಣ ಕೇಳಿ ಆ್ಯಂಕರ್​ ಸುಸ್ತೋ ಸುಸ್ತು

ಆ ಜ್ಯೋತಿಷಿ ಮಾತಿನಂತೆ ಒಳ ಉಡುಪು ಹಾಕ್ತಿಲ್ಲ! ರಾಖಿ ಸಾವಂತ್​ ಕೊಟ್ಟ ಕಾರಣ ಕೇಳಿ ಆ್ಯಂಕರ್​ ಸುಸ್ತೋ ಸುಸ್ತು

ಆ ಜ್ಯೋತಿಷಿ ಮಾತಿನಂತೆ ಒಳ ಉಡುಪು ಹಾಕ್ತಿಲ್ಲ! ರಾಖಿ ಸಾವಂತ್​ ಕೊಟ್ಟ ಕಾರಣ ಕೇಳಿ ಆ್ಯಂಕರ್​ ಸುಸ್ತೋ ಸುಸ್ತು

ವಿವಾದಗಳ ರಾಣಿ ರಾಖಿ ಸಾವಂತ್, ಯಶಸ್ಸು ಗಳಿಸಲು ಜ್ಯೋತಿಷಿಯೊಬ್ಬರ ಸಲಹೆಯಂತೆ ತಾನು ಒಳ ಉಡುಪುಗಳನ್ನು ಧರಿಸುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮರಾಠಿ ಬಿಗ್‌ಬಾಸ್‌ಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ರಾಖಿ, ಈ ಹಿಂದೆ ಮುಕೇಶ್ ಅಂಬಾನಿಯನ್ನು ಮದುವೆಯಾಗುವುದಾಗಿಯೂ ಹೇಳಿದ್ದರು.

ವಿವಾದಗಳ ರಾಣಿ, ಡ್ರಾಮಾ ಕ್ವೀನ್​ ರಾಖಿ ಸಾವಂತ್ (Rakhi Sawant) ಬಗ್ಗೆ ಎಲ್ಲರಿಗೂ ತಿಳಿದದ್ದೇ. ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ ಫಾತಿಮಾ ಆಗಿ ಸೈಲೆಂಟ್​ ಆಗಿ, ಮತ್ತೆ ಪಾಕಿಸ್ತಾನದ ಧರ್ಮಗುರುವನ್ನು ಮದುವೆಯಾಗಲು ಹೋಗುವುದಾಗಿ ಹೇಳಿ, ಮೆಕ್ಕಾಕ್ಕೂ ಭೇಟಿ ಕೊಟ್ಟು ಇದೀಗ ಮತ್ತದೇ ಪ್ಲಾಸ್ಟಿಕ್​ ಸರ್ಜರಿ ದೇಹವನ್ನು ಪ್ರದರ್ಶಿಸುತ್ತಾ ಇರುವ ರಾಖಿ ಸಾವಂತ್​ ಇದೀಗ ಮರಾಠಿಯ ಬಿಗ್​ಬಾಸ್​​ ಮನೆಗೆ ಭೇಟಿ ಕೊಟ್ಟು ಬಿಗ್​ ಸರ್​ಪ್ರೈಸ್​ ನೀಡಿದ್ದಾರೆ.

ರಾಖಿ ಅವರು, ತಮ್ಮ ಪತಿ ಆದಿಲ್ ದುರಾನಿ (Adil Durrani) ವಿರುದ್ಧ ಕ್ರಿಮಿನಲ್ ಕೇಸ್​​ ದಾಖಲಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ. ಜೊತೆಗೆ, ಆದಿಲ್ ಕೂಡ ರಾಖಿ ವಿರುದ್ಧ ನೀಡಿದ್ದ ದೂರನ್ನೂ ವಜಾಗೊಳಿಸಲಾಗಿದೆ. ಇಬ್ಬರೂ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರೋ ಹಿನ್ನೆಲೆಯಲ್ಲಿ ಕೇಸ್ ವಜಾ ಆಗಿದೆ.

ಇಂತಿಪ್ಪ ರಾಖಿ ಇದೀಗ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ನೀವ್ಯಾಕೆ ಈ ರೀತಿಯ ಡ್ರೆಸ್​ ಹಾಕುತ್ತೀರಿ ಎಂದು ಆ್ಯಂಕರ್​ ಕೇಳಿದಾಗ ರಾಖಿ ಸಾವಂತ್​ (Rakhi Sawanth), ನನಗೆ ಜ್ಯೋತಿಷಿ ಒಬ್ಬರು ಮೇಲಿನ ಹಾಗೂ ಕೆಳಗಿನ ಒಳ ಉಡುಪು ಹಾಕಬಾರದು. ಒಂದು ವೇಳೆ ಈ ಉಡುಪು ಹಾಕದಿದ್ದರೆ, ಟಾಪ್​ ಲೆವಲ್​ಗೆ ಹೋಗುವುದಾಗಿ ಹೇಳಿದ್ದಾರೆ ಎಂದರು.

ಆಗ, ಸುಸ್ತಾದ ಆ್ಯಂಕರ್​ ನಾಚಿಕೆಯಿಂದ, ಹಾಗಾದ್ರೆ ಈಗ ನೀವು… ಎಂದು ಅಂಜುತ್ತಲೇ ಕೇಳಿದಾಗ, ರಾಖಿ ಸಾವಂತ್​, ಅಂಜುತ್ತಾ ಯಾಕೆ ಕೇಳ್ತೀರಿ. ಈಗಲೂ ಆ ಉಡುಪುಗಳನ್ನು ನಾನು ಹಾಕಿಲ್ಲ. ನೀವು ಇದಕ್ಕೆ ಮುಜುಗರ ಪಡುವುದು ಬೇಕಿಲ್ಲ ಎಂದಾಗ ಆ್ಯಂಕರ್​ ಸುಸ್ತಾಗಿದ್ದಾಳೆ. ಇದರ ವಿಡಿಯೋ ಅನ್ನು ಫಿಲ್ಮಿಗ್ಯಾನ್​ ಹಂಚಿಕೊಂಡಿದೆ. ರಾಖಿಯ ಬೋಲ್ಡ್​ ಉತ್ತರಕ್ಕೆ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಅಷ್ಟಕ್ಕೂ ಈಚೆಗಷ್ಟೇ ರಾಖಿ ಸಾವಂತ್​, ಮದುಮಗಳಂತೆ ಶೃಂಗಾರ ಮಾಡಿಕೊಂಡು, ಮುಕೇಶ್​ ಅಂಬಾನಿಯನ್ನು ಮದುವೆಯಾಗುತ್ತೇನೆ ಎಂದು ಹುಚ್ಚುಚ್ಚಾಗಿ ಆಡಿದ್ದವರು ಇದೇ ರಾಖಿ ಸಾವಂತ್​. ನನ್ನ ಬ್ಲೌಸ್‌ 24 ಕ್ಯಾರೆಟ್‌ ಗೋಲ್ಡ್‌ನಿಂದ ಕೂಡಿದೆ. ನೀತಾ ಅಂಬಾನಿ ಬಂಗಾರದಲ್ಲಿ ಏನಾದರೂ ಮಿಕ್ಸ್‌ ಆಗಿರಬಹುದು, ಆದರೆ ನನ್ನ ಗೋಲ್ಡ್‌ನಲ್ಲಿ ಯಾವುದೂ ಮಿಸ್‌ ಇಲ್ಲ. ಮುಕೇಶ್‌ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸವತಿ ಆಗುತ್ತೇನೆ. ಅವರಿಂದ ನನಗೊಂದು ಮಗು ಬೇಕು ಎಂದಿದ್ದರು.

ನನಗೆ ಒಂಟಿಯಾಗಿದ್ದು ಸಾಕಾಗಿದೆ. ನಾನು ಕೊನೆಗೂ ವಧು ಆಗಿದ್ದೇನೆ, ರಿಯಲ್‌ ಆಗಿ ಮದುವೆ ಆಗುತ್ತಿದ್ದೇನೆ. ಖ್ಯಾತ ಚಾನೆಲ್‌ನಲ್ಲಿ ಮದುವೆ ನಡೆಯಲಿದೆ. ಇದು ನನ್ನ ಮೂರನೇ ಮದುವೆ. ನನ್ನ ಮದುವೆ ಆಗುವ ಹುಡುಗನಿಗೂ ಕೂಡ ಮೂರು ಮದುವೆ ಆಗಿದೆ. ಆ ಹುಡುಗನಿಗೆ ಈಗಾಗಲೇ ಹಿಂದು, ಕ್ರಿಶ್ಚಿಯನ್‌, ಮುಸ್ಲಿಂ ಜೊತೆಯಲ್ಲಿ ಮದುವೆ ಆಗಿದೆ ಎಂದೆಲ್ಲಾ ಹೇಳಿದ್ದ ರಾಖಿ ಸಾವಂತ್​ ಇದೀಗ ಮರಾಠಿಯ ಬಿಗ್​ಬಾಸ್​ಗೆ ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಿದ್ದಾರೆ.

Source link

Leave a Reply

Your email address will not be published. Required fields are marked *