Bhagyalakshmi Serial ಮುಗಿಯಲ್ಲ, ಪಾತ್ರ ಬದಲು- ಖುದ್ದು ನಟಿ ಸುಷ್ಮಾ ರಾವ್​ ಏನ್​ ಹೇಳಿದ್ರು ನೋಡಿ

Bhagyalakshmi Serial ಮುಗಿಯಲ್ಲ, ಪಾತ್ರ ಬದಲು- ಖುದ್ದು ನಟಿ ಸುಷ್ಮಾ ರಾವ್​ ಏನ್​ ಹೇಳಿದ್ರು ನೋಡಿ

Bhagyalakshmi Serial ಮುಗಿಯಲ್ಲ, ಪಾತ್ರ ಬದಲು- ಖುದ್ದು ನಟಿ ಸುಷ್ಮಾ ರಾವ್​ ಏನ್​ ಹೇಳಿದ್ರು ನೋಡಿ
ಭಾಗ್ಯಲಕ್ಷ್ಮಿ ಸೀರಿಯಲ್ ಮುಗಿಯುತ್ತಿದೆ ಎಂಬ ವದಂತಿಗಳ ನಡುವೆ, ಖಳನಾಯಕ ತಾಂಡವ್ ಪಶ್ಚಾತ್ತಾಪ ಪಡುತ್ತಿದ್ದಾನೆ. ಆದರೆ, ನಟಿ ಸುಷ್ಮಾ ಕೆ. ರಾವ್ ಅವರು ಇನ್​ಸ್ಟಾಗ್ರಾಮ್​ ಮೂಲಕ ಸೀರಿಯಲ್ ಸದ್ಯಕ್ಕೆ ಮುಗಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಕಥೆಯು ಕುತೂಹಲಕಾರಿ ಘಟ್ಟ ತಲುಪಿದೆ.
ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಸದ್ಯ ಮುಗಿಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಏಕೆಂದರೆ ತಾಂಡವ್​ ಬದಲಾಗಿದ್ದಾನೆ. ಭಾಗ್ಯಳ ಕಾಲಿಗೆ ಬಿದ್ದು ಗೋಳೋ ಎನ್ನುತ್ತಿದ್ದಾನೆ. ಆದರೆ ಭಾಗ್ಯ ಮಾತ್ರ ಅವನನ್ನು ಕ್ಷಮಿಸಲು ರೆಡಿ ಇಲ್ಲ. ಆದರೆ ನಿಜಕ್ಕೂ ಸೀರಿಯಲ್​ ಮುಗಿಯತ್ತಾ?

ಇಲ್ಲ ಎನ್ನುತ್ತಿದ್ದಾರೆ ಭಾಗ್ಯ ಪಾತ್ರಧಾರಿ ನಟಿ ಸುಷ್ಮಾ ಕೆ. ರಾವ್​. ತಾಂಡವ್​ ಪಾತ್ರ ಬದಲಾಗಿದೆ. ಅಂದರೆ, ವಿಲನ್​ ಆಗಿರೋ ತಾಂಡವ್​ ಇದೀಗ ಪಶ್ಚಾತ್ತಾಪದಲ್ಲಿ ಬೇಯುತ್ತಿದ್ದಾನೆ, ಪತ್ನಿ ಭಾಗ್ಯ ಒಂದು ಸಲ ಕ್ಷಮಿಸಿದರೆ ಸಾಕು, ಆಕೆಯ ತಂಟೆಗೆ ಬರುವುದಿಲ್ಲ ಎನ್ನುತ್ತಿದ್ದಾನೆ.

ಅದೇ ಇನ್ನೊಂದೆಡೆ, ಭಾಗ್ಯ ಮತ್ತು ಆದಿ ಒಂದಾಗುತ್ತಾರೆ ಎನ್ನಲಾಗುತ್ತಿದ್ದರೂ, ಅದು ಕೂಡ ಸ್ಪಷ್ಟವಾಗಿಲ್ಲ. ಭಾಗ್ಯ ಮತ್ತು ಆದಿ ಒಂದಾಗಿ, ಶ್ರೇಷ್ಠಾ ಮತ್ತು ತಾಂಡವ್​ ಜೋಡಿಯಾಗಿ ಸುಖವಾಗಿ ಬಾಳುತ್ತಾರೆ ಎಂದೇ ಹೇಳಲಾಗುತ್ತಿದ್ದರೂ, ಸದ್ಯ ಸೀರಿಯಲ್​ ಮುಗಿಯಲ್ಲ ಎನ್ನುವ ಪೋಸ್ಟ್​ ಸುಷ್ಮಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಯೊಬ್ಬರು ಶೇರ್​ ಮಾಡಿದ್ದಾರೆ.

“ಹಾಯ್‌ ಎಲ್ಲರಿಗೂ ನಮಸ್ಕಾರ, ಎಲ್ಲಾ ಹೇಗಿದ್ದೀರಾ…ಎಲ್ಲರೂ ಭಾಗ್ಯಲಕ್ಷ್ಮೀ ಸೀರಿಯಲ್‌ ಮುಗೀತಾ ಇದೆ ಅಂತ ಪೋಸ್ಟ್‌ ಅಪ್ಲೋಡ್‌ ಮಾಡಿದ್ದಾರೆ. ಅದು ಸುಳ್ಳು. ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ಮುಗಿಯುತ್ತಾ ಇಲ್ಲ. ಹೀಗಂತ ಸುಷ್ಮಾ ಅವರೇ ಹೇಳಿದ್ದಾರೆ. ಸೀರಿಯಲ್‌ ಮುಗಿಯಲ್ಲ.. ದಯವಿಟ್ಟು ಸುಳ್ಳು ಪೋಸ್ಟ್ ಅಪ್ಲೋಡ್‌ ಮಾಡಬೇಡಿ" ಎಂದು ಸುಷ್ಮಾ ಅವರ ಅಭಿಮಾನಿಯೊಬ್ಬರು ಟ್ಯಾಗ್​ ಮಾಡಿದ್ದು, ಅದಕ್ಕೆ ಖುದ್ದು ಸುಷ್ಮಾ ಕೆ. ರಾವ್​ ಅವರು ಲೈಕ್​ ಮಾಡಿದ್ದಾರೆ. ಅಲ್ಲಿಗೆ ಈ ಸೀರಿಯಲ್​ ಸದ್ಯ ಮುಗಿಯಲ್ಲ ಎನ್ನುವುದು ತಿಳಿಯುತ್ತದೆ.

ಹಾಗಿದ್ದರೆ ಮುಂದೇನಾಗುತ್ತೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇದಾಗಲೇ ಸೀರಿಯಲ್​ ಶುರುವಾಗಿ ಮೂರು ವರ್ಷ ಕಳೆದಿದೆ. ಭಾಗ್ಯನ ಗೋಳು ನೋಡಿ ನೋಡಿ ಬೇಸತ್ತಿದ್ದ ವೀಕ್ಷಕರಿಗೆ ಆಕೆಯ ಲೈಫ್​ನಲ್ಲಿ ಆಗ್ತಿರೋ ಬದಲಾವಣೆ ಖುಷಿ ತಂದಿತ್ತು. ಆದಿಯ ಎಂಟ್ರಿ ಆದ ಮೇಲೆ ಇನ್ನಷ್ಟು ಖುಷಿ ಪಡುತ್ತಿದ್ದಾರೆ ವೀಕ್ಷಕರು.

ಇನ್ನೇನು ಆದಿ- ಭಾಗ್ಯ ಒಂದಾಗುತ್ತಾರೆ ಎನ್ನುವಷ್ಟರಲ್ಲಿ ತಾಂಡವ್ ಎಂಟ್ರಿಯಾಗಿದೆ. ಭಾಗ್ಯಳ ಅಮ್ಮ ಸುನಂದ ಮತ್ತು ಭಾಗ್ಯಳ ಮಗಳು ತನ್ವಿ ತಾಂಡವ್​ ಪರ ಇದ್ದಾರೆ. ಆತನನ್ನು ಕ್ಷಮಿಸಿಬಿಡು ಎನ್ನುತ್ತಿದ್ದಾರೆ. ತಾಂಡವ್​ ಅಮ್ಮ ಕುಸುಮಾ ಮತ್ತು ಮಗ ಗುಂಡಣ್ಣ ಮಾತ್ರ ಅವನ ವಿರುದ್ಧ ಇದ್ದಾರೆ. ಭಾಗ್ಯ ಕೂಡ ಕ್ಷಮಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಮುಂದೇನು?

Source link

Leave a Reply

Your email address will not be published. Required fields are marked *