ನಟಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತೆಲುಗು, ಹಿಂದಿ ಮತ್ತು ಬಾಲಿವುಡ್ ನಲ್ಲಿ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಶ್ರೀಲೀಲಾ ಕೇವಲ ನಟಿ ಅವರು ಇನ್ನು ಮುಂದೆ ವೈದ್ಯರೇ ಸಹ. ಓದುತ್ತಲೇ ಸಿನಿಮಾ ರಂಗದಲ್ಲಿಯೂ ತೊಡಗಿಸಿಕೊಂಡಿದ್ದ ಶ್ರೀಲೀಲಾ ಎಂಬಿಬಿಎಸ್ ಮುಗಿಸಿದ್ದಾರೆ.
ಮುಂಬೈನ ಡಿವೈ ಯುನಿವರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದ ಶ್ರೀಲೀಲಾ, ವೈದ್ಯಕೀಯ ಪದವಿ ಮುಗಿಸಿದ್ದು, ಇದೀಗ ಅಧಿಕೃತವಾಗಿ ವೈದ್ಯೆ.
2020ರಲ್ಲಿ ಎಂಬಿಬಿಎಸ್ ಪದವಿ ಆರಂಭಿಸಿದ ನಟಿ ಶ್ರೀಲೀಲಾ ಇದೀಗ ಪದವಿ ಮುಗಿಸಿದ್ದು, ಘಟಿಕೋತ್ಸವದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ತಮ್ಮ ಸಹಪಾಠಿಗಳೊಟ್ಟಿಗಿನ ಚಿತ್ರಗಳು, ಕಾಲೇಜು ದಿನದ ಚಿತ್ರಗಳನ್ನು ಸಹ ನಟಿ ಶ್ರೀಲೀಲಾ ಹಂಚಿಕೊಂಡಿದ್ದಾರೆ.
ತಮ್ಮ ಈ ಜರ್ನಿಯಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ತಾಯಿ ಮತ್ತು ಇತರ ಕುಟುಂಬದವರು ಮತ್ತು ಸಂಗೀತ ಧನ್ಯವಾದಗಳನ್ನು ನಟಿ ಶ್ರೀಲೀಲಾ ಹೇಳಿದ್ದಾರೆ.
ತಾವು ಅಭಿಮಾನಿಗಳಿಗೆ ಮತ್ತೆ ಪರಿಚಯ ಮಾಡಿಕೊಂಡಿರುವ ಶ್ರೀಲೀಲಾ, ಈ ಬಾರಿ ಡಾ ಶ್ರೀಲೀಲಾ ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಟಿಯ ಚಿತ್ರಗಳು ಇಲ್ಲಿವೆ ನೋಡಿ…






