”ಬಿಜೆಪಿ ಬಿಟ್ಟು ಹೋದವರನ್ನು ನಾವು ಪಕ್ಷಕ್ಕೆ ವಾಪಸ್‌ ಕರೆತರುತ್ತೇವೆ” : ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರಾಣಿ | We Will Bring Back Those Who Left The Bjp Into The Party

ಬಿಜೆಪಿ ಬಿಟ್ಟು ಹೋದವರನ್ನು ವಾಪಸ್‌ ಕರೆದುಕೊಂಡು ಬರುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆದ ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮದ ನಂತರ ಮಾತನಾಡಿ ವಾಪಸ್ ಕರೆದು ತರುತ್ತೇವೆ ಎಂದರು

ಬೀಳಗಿ: ಬಿಜೆಪಿ ಬಿಟ್ಟು ಹೋದವರನ್ನು ವಾಪಸ್‌ ಕರೆದುಕೊಂಡು ಬರುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದರು.

ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆದ ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮದ ನಂತರ ಮಾತನಾಡಿ, ಖಂಡಿತವಾಗಿಯೂ ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆದು ತರುತ್ತೇವೆ. ರಾಜ್ಯಾದ್ಯಂತ ಷರತ್ತುರಹಿತವಾಗಿ ಯಾರ್‍ಯಾರು ಪಕ್ಷಕ್ಕೆ ವಾಪಸ್‌ ಬರಲು ಬಯಸುತ್ತಾರೋ ಅವರೆಲ್ಲರನ್ನು ಕೂಡ ಕರೆದುಕೊಂಡು ಬರುವುದಕ್ಕೆ‌ನಾವು ಸಿದ್ಧರಿದ್ದೇವೆ.

ಈಗಾಗಲೇ ಈ ಬಗ್ಗೆ ಚರ್ಚೆಯಾಗಿದೆ

ಈಗಾಗಲೇ ಈ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನೂ ವಾಪಸ್ ಕರೆತರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯತ್ನಾಳ್‌ ಅವರು ಶಾಸಕರಾಗಿರುವುದರಿಂದ ಅದು ನಮ್ಮ ‌ಕೈಯಲ್ಲಿ ಇಲ್ಲ. ಅದನ್ನು ರಾಷ್ಟ್ರೀಯ ನಾಯಕರು ನಿರ್ಧಾರ ಮಾಡಲಿದ್ದಾರೆ. ಇದರಿಂದಾಗಿ ಅವರು ಏನು ನಿರ್ಧಾರ ಮಾಡುತ್ತಾರೋ ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.

Source link

Leave a Reply

Your email address will not be published. Required fields are marked *