Valentine’s Day 2026: ಇಂದು ‘ಪ್ರೇಮಿಗಳ ದಿನ’ ಗುಲಾಬಿ ರೈತರಿಗೆ ಸುದಿನ | Valentine’s Day celebration | Valentine S Day 2026 A Rosy Day For Karnataka Farmers As Demand And Prices Soar

Valentine’s Day 2026: ಇಂದು ‘ಪ್ರೇಮಿಗಳ ದಿನ’ ಗುಲಾಬಿ ರೈತರಿಗೆ ಸುದಿನ | Valentine’s Day celebration | Valentine S Day 2026 A Rosy Day For Karnataka Farmers As Demand And Prices Soar



Valentine’s Day 2026: ಇಂದು ‘ಪ್ರೇಮಿಗಳ ದಿನ’ ಗುಲಾಬಿ ರೈತರಿಗೆ ಸುದಿನ | Valentine’s Day celebration | Valentine S Day 2026 A Rosy Day For Karnataka Farmers As Demand And Prices Soar

Valentine’s Day 2026: ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಕೆಂಪು ಗುಲಾಬಿ ಹೂವುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಹೆಬ್ಬಾಳದ ಪುಷ್ಪ ಹರಾಜು ಕೇಂದ್ರದಲ್ಲಿ ಒಂದು ಕೋಟಿ ಗುಲಾಬಿಗಳು ಮಾರಾಟವಾಗಿದ್ದು, ನಗರದ ರೆಸ್ಟೋರೆಂಟ್‌ ಮತ್ತು ಮಾಲ್‌ಗಳು ವಿಶೇಷ ಕೊಡುಗೆಗಳೊಂದಿಗೆ ಸಜ್ಜಾಗಿವೆ.

ಬೆಂಗಳೂರು (ಫೆ.14): ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಪ್ರೇಮಿಗಳ ದಿನದ ಪ್ರತೀಕವಾಗಿರುವ ಕೆಂಪು ಗುಲಾಬಿ ಹೂವುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.

ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಫ್ಯಾಬ್) ಫೆ.1ರಿಂದ ಫೆ.13ರವರೆಗೆ ಒಂದು ಕೋಟಿ ಗುಲಾಬಿ ಹೂವುಗಳ ಮಾರಾಟವಾಗಿದೆ. ಇದರಲ್ಲಿ ಶೇ.30ರಿಂದ 40ರಷ್ಟು ಗುಲಾಬಿ ಹೂವುಗಳನ್ನು ಬೆಂಗಳೂರಿನ ವ್ಯಾಪಾರಿಗಳು ಖರೀದಿಸಿದ್ದಾರೆ. ಪ್ರೇಮ ನಿವೇದನೆಗೆ, ಪ್ರೀತಿ ಪಾತ್ರರ ಭೇಟಿಗೆ ಗುಲಾಬಿ ಹೂವು ಮತ್ತು ಹೂವಿನ ಗುಚ್ಛವೇ ಅಚ್ಚುಮೆಚ್ಚು. ಅದರ ಜೊತೆಗೆ ವಾರಾಂತ್ಯದಲ್ಲಿ ಪ್ರೇಮಿಗಳ ದಿನ ಬಂದಿರುವ ಕಾರಣ ಈ ಬಾರಿ ಗುಲಾಬಿ ಹೂವಿನ ಮಾರಾಟ ಜೋರಾಗಿದೆ.

ಮತ್ತೊಂದೆಡೆ ಪ್ರೇಮಿಗಳನ್ನು ಸ್ವಾಗತಿಸಲು ರೆಸ್ಟೋರೆಂಟ್‌, ಹೋಟೆಲ್‌ಗಳು ಕೂಡ ವಿಶೇಷವಾಗಿ ಸಜ್ಜುಗೊಂಡಿವೆ. ಜೋಡಿಗಳಿಗಾಗಿ ಕ್ಯಾಂಡಲ್ ಲೈಟ್ ಡಿನ್ನರ್ ಸೇರಿದಂತೆ ಬಗೆಬಗೆಯ ಭೋಜನ ವ್ಯವಸ್ಥೆಯನ್ನು ರೆಸ್ಟೋರೆಂಟ್‌ಗಳು ಮಾಡಿವೆ.

ನಗರದ ​ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾನಗರ, ಜಯನಗರ ಸೇರಿದಂತೆ ನಗರ ಅನೇಕ ಪ್ರದೇಶಗಳಲ್ಲಿ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದಂತೆ ಹೂವಿನ ಅಂಗಡಿ, ಗಿಫ್ಟ್ ಸೆಂಟರ್‌ಗಳು ಹಾಗೂ ಮಾಲ್‌ಗಳಲ್ಲಿ ವಿಶೇಷ ರಿಯಾಯಿತಿಯ ಮಾರಾಟ ಜೋರಾಗಿದೆ. ಶಾಪಿಂಗ್ ಮಾಲ್‌ಗಳಲ್ಲಿ ಟ್ವಿನ್ನಿಂಗ್ ಡ್ರೆಸ್ ಹಾಗೂ ಕಸ್ಟಮೈಸ್ಡ್ ಗಿಫ್ಟ್‌ಗಳ ಖರೀದಿಯಲ್ಲಿ ಯುವಜನತೆ, ಪ್ರೇಮಿಗಳು ತೊಡಗಿದ್ದಾರೆ.

ವಾರಾಂತ್ಯದಲ್ಲಿ ಪ್ರೇಮಿಗಳ ದಿನ ಬಂದಿರುವುದರಿಂದ ಪ್ರೇಮಿಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಜೊತೆಯಾಗಿ ಹೆಚ್ಚು ಸಮಯ ಕಾಲ ಕಳೆಯಲು ಅವಕಾಶ ಸಿಕ್ಕಂತಾಗಿದೆ.

ಹೂವು ಮಾರಾಟದಿಂದ ₹ 17 ಕೋಟಿಗೂ ಅಧಿಕ ವಹಿವಾಟು

ಗುಲಾಬಿ ಹೂವು ಮಾರಾಟದ ಕುರಿತು ಮಾಹಿತಿ ಹಂಚಿಕೊಂಡಿರುವ ಐಫ್ಯಾಬ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿಶ್ವನಾಥ್, ಕಳೆದ ಒಂದು ವಾರದಿಂದ ಗುಲಾಬಿ ಹೂವುಗಳಿಗೆ ಬೇಡಿಕೆ ಚೆನ್ನಾಗಿದೆ. ದೇಶದ ಅನೇಕ ಮಹಾನಗರಗಳಿಗೆ ಹೂವುಗಳು ಮಾರಾಟವಾಗಿವೆ. 1 ಕೋಟಿ ಹೂವುಗಳ ಮಾರಾಟದಿಂದ 17 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷ ಸುಮಾರು 80 ಲಕ್ಷ ಹೂವುಗಳು ಮಾರಾಟವಾಗಿದ್ದವು. ರೈತರಿಗೂ ಶೇ.10ರಿಂದ 15ರಷ್ಟು ಹೆಚ್ಚುವರಿ ಆದಾಯ ಬಂದಿದೆ ಎಂದು ತಿಳಿಸಿದರು.



Source link

Leave a Reply

Your email address will not be published. Required fields are marked *