ತಮಿಳಿನ ‘ಜನ ನಾಯಕನ್’ ಸಿನಿಮಾ (ಜನ ನಾಯಗನ್) ಈಗ ಸಂಕಷ್ಟದಲ್ಲಿದೆ. ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂಬ ಸ್ಪಷ್ಟನೆ ಅಭಿಮಾನಿಗಳಿಗೆ ಹಾಗಿರಲಿ, ಟೀನ್ನವರಿಗೂ ಇಲ್ಲ. ಮುಂದೇನು ಎಂಬ ಪ್ರಶ್ನೆ ತಂಡಕ್ಕೆ ಕಾಡುತ್ತಿದೆ. ಸದ್ಯ ಸೆನ್ಸಾರ್ ಪುನರ್ ವಿಮರ್ಶೆ ಮಾಡೋ ಸಂಸ್ಥೆಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದೆ. ಎರಡು ವಾರದ ಒಳಗೆ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ತಂಡ ಕೈ ಸೇರೋ ಸಾಧ್ಯತೆ ಇದೆ. ಈ ಮಧ್ಯೆ ಕೋರ್ಟ್ ಕೇಸ್ ದುಬಾರಿಯಾಗಿದೆ.
‘ಜನ ನಾಯಕನ್’ ಸಿನಿಮಾ ಜನವರಿ 9ರಂದು ರಿಲೀಸ್ ಆಗಬೇಕಿತ್ತು. ಅಂದರೆ ಸುಮಾರು ಐದು ವಾರಗಳ ಹಿಂದೆಯೇ ಚಿತ್ರ ಜನರ ಎದುರು ಬರಬೇಕಿತ್ತು. ಆದರೆ, ಈ ತಂಡಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಇದು ಚಿತ್ರಕ್ಕೆ ದುಬಾರಿಯಾಗಿದೆ. ಇಷ್ಟು ದಿನಗಳ ಕಾಲ ಕೋರ್ಟ್ ನಲ್ಲಿ ಹೋರಾಡುತ್ತಾ ಇದ್ದ ತಂಡ, ಈಗ ಕೇಸ್ ನ ಹಿಂಬಾಲಿಸುವುದು ಪುನರ್ ವಿಮರ್ಶೆ ಮಾಡುವ ಸಂಸ್ಥೆಗೆ ಸಿನಿಮಾದ ಸಲ್ಲಿಕೆಯಾಗಿದೆ.
ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆ 120 ಕೋಟಿ ರೂಪಾಯಿ ನೀಡಿ ‘ಜನ ನಾಯಕನ್’ ಚಿತ್ರ ಖರೀದಿ ಮಾಡಿದೆ. ಈಗ ಸಿನಿಮಾ ವಿಳಂಬ ಆಗುತ್ತಿರುವುದರಿಂದ ಒಟಿಟಿ ಸಂಸ್ಥೆಯವರು 60 ಕೋಟಿ ರೂಪಾಯಿ ನೀಡಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ. ಉಳಿದ ಲೆಕ್ಕಾಚಾರ ಸೇರಿದರೆ 150 ಕೋಟಿ ರೂಪಾಯಿ ಹೆಚ್ಚುವರಿಯಾಗಿ ವೆಚ್ಛವನ್ನು ಭರಿಸೋ ಸ್ಥಿತಿಯಲ್ಲಿ ‘ಜನ ನಾಯಕನ್’ ತಂಡವಿದೆ.
ಎರಡು ವಾರಗಳಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರ ಕೈ ಸೇರಿದರೂ ಸಿನಿಮಾನ ಏಕಾಏಕಿ ರಿಲೀಸ್ ಮಾಡೋದು ಸಾಧ್ಯವಾಗದೇ ಇರಬಹುದು. ಇದು ವಿಶ್ವ ಮಟ್ಟದಲ್ಲಿ ತೆರೆಗೆ ಬರಬೇಕಿದೆ. ಹೀಗಾಗಿ, ತಮಿಳುನಾಡು ಸೇರಿದಂತೆ ಭಾರತಾದ್ಯಂತ ಥಿಯೇಟರ್ ಸೆಟಪ್ ಮಾಡಿಕೊಳ್ಳಬೇಕಾಗಿದೆ. ಆ ಬಳಿಕ ವಿಶ್ವ ಮಟ್ಟದಲ್ಲಿಯೂ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: ಜನ ನಾಯಕನ ಬಳಿಕ ಮತ್ತೊಂದು ಚಿತ್ರದ ರಿಲೀಸ್ ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ
‘ಜನ ನಾಯಕನ್’ ಸಿನಿಮಾ ಫೆಬ್ರವರಿ ಕೊನೆಯಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಮಾರ್ಚ್ 19 ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಕೇವಲ ಎರಡು ವಾರ ಗ್ಯಾಪ್ ನಲ್ಲಿ ಒಂದೇ ಸಂಸ್ಥೆಯ ಎರಡು ಸಿನಿಮಾಗಳನ್ನು ರಿಲೀಸ್ ಮಾಡೋದು ಅಸಾಧ್ಯ. ಹೀಗಾಗಿ, ‘ಜನ ನಾಯಕನ್ ಮತ್ತಷ್ಟು’ ಮುಂದಕ್ಕೆ ಹೋಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.