Valentine’s Day Wishes: ಪ್ರೇಮಿಗಳ ದಿನಕ್ಕೆ ಶುಭಕೋರಲು ಇಲ್ಲಿವೆ ಸಿಹಿ ಸಂದೇಶ

Valentine’s Day Wishes: ಪ್ರೇಮಿಗಳ ದಿನಕ್ಕೆ ಶುಭಕೋರಲು ಇಲ್ಲಿವೆ ಸಿಹಿ ಸಂದೇಶ


ಪ್ರೇಮಿಗಳ ದಿನದ ಶುಭ ಸಂದೇಶಗಳುಚಿತ್ರ ಕ್ರೆಡಿಟ್ ಮೂಲ: vecteezy

ಪ್ರೀತಿ ಕೇವಲ ಭಾವನೆಯಲ್ಲ, ಅದು ಹೃದಯಗಳನ್ನು ಒಂದುಗೂಡಿಸುವ ಅತ್ಯಂತ ಸುಂದರವಾದ ಬಂಧವಾಗಿದೆ. ಈ ಪ್ರೀತಿಯನ್ನು ಸಂಭ್ರಮಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು (ಪ್ರೇಮಿಗಳ ದಿನ) ಆಚರಿಸದಿದ್ದರೆ. ಇದು ಬರೀ ಪ್ರಣಯ ಸಂಬಂಧದ ಆಚರಣೆಯಲ್ಲ ಪ್ರೀತಿಯೆಂಬ ಪವಿತ್ರ ಸಂಬಂಧದ ಮಹತ್ವವನ್ನು ಸಾರುವ ವಿಶೇಷ ದಿನವೂ ಹೌದು. ಈ ದಿನ ಪ್ರತಿಯೊಬ್ಬ ಪ್ರೇಮಿಗಳಿಗೆ, ದಂಪತಿಗಳಿಗೆ ತುಂಬಾ ವಿಶೇಷವಾಗಿದೆ. ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿ.

ನಿಮ್ಮ ಸಂಗಾತಿಗೆ ಈ ರೀತಿ ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿ:

  • ನನ್ನ ಜೀವನಕ್ಕೆ ಬೆಳಕಾಗಿ ಬಂದ ನನ್ನ ಪ್ರೀತಿಯ ದೇವತೆಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ಖುಷಿಯಲ್ಲಿ, ನೋವಲ್ಲೂ ಕೂಡ ನಿನ್ನ ಜೊತೆಯಾಗಿ ನಾನು ಕೊನೆಯುಸಿರು ಇರುವವರೆಗೂ ನಿಲ್ಲುವೆ, ನನ್ನ ಪ್ರೀತಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ನಿನ್ನ ಜೀವನವೆಲ್ಲಾ ಸದಾ ಖುಷಿಯಿಂದ ತುಂಬಿರಲಿ, ಆ ಖುಷಿಗೆ ಕಾರಣ ನಾನಾಗಿರಲಿ… ಹ್ಯಾಪಿ ವ್ಯಾಲೆಂಟೈನ್ಸ್‌ ಡೇ ಮೈ ಲವ್.
  • ನನ್ನ ಬದುಕಿಗೆ ಒಂದೊಳ್ಳೆ ಅರ್ಥಕೊಟ್ಟ ಈ ಜೀವಕ್ಕೆ ಪ್ರೇಮಿಗಳ ದಿನದ ಶುಭಾಶಯಗಳು…
  • ನೀ ನನ್ನ ಜೊತೆಗಿರು ಕಣ್ಣಲ್ಲಿ ಕಣ್ಣಾಗಿ ಕಾಯುವೆ, ನೀ ಪ್ರೀತಿಯ ತೋರು ಹೆಜ್ಜೆ ಹೆಜ್ಜೆಗೂ ಹೂ ಹಾಸುವೆ… ಪ್ರೇಮಿಗಳ ದಿನದ ಶುಭಾಶಯಗಳು.
  • ನೀ ಸಿಕ್ಕ ಮೇಲೆ ನನ್ನ ನೋವಿನ ಬದುಕಲಿ ನಲಿವು ಹೆಚ್ಚಾಗಿದ್ದು, ನಗು ಮರೆಯಾದ ಈ ಮೊಗದಲಿ ಮಗುವಿನಂತಹ ನಗು ಹುಟ್ಟಿದ್ದು, ನೀವು ಬಂದ ಮೇಲೆಯೇ ಲೈಫ್‌ ಈಸ್‌ ಬ್ಯೂಟಿಫುಲ್‌ ಅನಿಸಿದ್ದು, ನನ್ನ ಮನದರಸಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ನಿನ್ನ ಪ್ರೀತಿಯ ಹೃದಯದಲ್ಲಿ ನಾನು ಮಾತ್ರ ಇರಬೇಕು, ನಿನ್ನ ಜೊತೆ ಕಳೆಯೋ ಅವಕಾಶ ನನಗೆ ಮಾತ್ರ ಸಿಗಬೇಕು, ಇದು ಸ್ವಾರ್ಥವಲ್ಲ ನಿನ್ನ ಮೇಲೆ ನನಗಿರುವ ಬೆಟ್ಟದಷ್ಟು ಪ್ರೀತಿ… ಹ್ಯಾಪಿ ವ್ಯಾಲೆಂಟೈನ್ಸ್ ಡೇ.
  • ಬರೀ ನೋವೇ ತುಂಬಿದ್ದ ಈ ಜೀವನದಲ್ಲಿ ಖುಷಿ, ಪ್ರೀತಿಯೆಂಬ ಹೂವಿನ ಮಳೆ ಸುರಿಸಿದ ನನ್ನ ಮನದರಸಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ಏಳೇಳು ಜನ್ಮಕ್ಕೂ ನಮ್ಮ ಈ ಸುಂದರ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ, ಹ್ಯಾಪಿ ವ್ಯಾಲೆಂಟೈನ್ಸ್ ಡೇ.
  • ಬದುಕಿನಿಂದ ನೆರಳಂತೆ ನಿನ್ನ ಜೊತೆಯಿರುವ, ನನ್ನಾಯುಷ್ಯವೆಲ್ಲಾ ನಿನಗೆ ಧಾರೆಯೆರೆವೆ, ಇರಲಿ ಸಾವಿರ ನೋವು ನನಗೆ… ಜಗದ ಖುಷಿಯೆಲ್ಲಾ ಇರಲಿ… ನನ್ನ ಬಾಳ ಸಂಗಾತಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ಜೊತೆಯಾಗಿ ನಡೆಯೆ ನಾ ಮಳೆಯಲೂ ಬಿಡದಂತೆ ಹಿಡಿವೇ ಈ ಕೈಯನೂ… ನನ್ನ ಜೀವನದ ಸ್ಪೆಷಲ್‌ ವ್ಯಕ್ತಿಗೆ ಹ್ಯಾಪಿ ವ್ಯಾಲೆಂಟೈನ್ಸ್‌ ಡೇ
  • ನಿನ್ನ ಜೊತೆಗಿನ ಪ್ರತಿ ಕ್ಷಣವೂ ವಿಶೇಷವೆನಿಸುತ್ತದೆ, ನೀನಿಲ್ಲದೆ ಎಲ್ಲ ಸಂತೋಷವೂ ಅಪೂರ್ಣವೆನಿಸುತ್ತದೆ… ನನ್ನ ಜೀವನದ ವಿಶೇಷ ವ್ಯಕ್ತಿಗಳ ಪ್ರೇಮಿಗಳ ದಿನದ ಶುಭಾಶಯಗಳು.
  • ನನ್ನ ಜೀವ ನೀನು… ನನ್ನ ಬಾಳ ಜ್ಯೋತಿ ನೀನು… ನನ್ನ ಪ್ರೀತಿಯ ದೇವತೆಗಳ ಪ್ರೇಮಿಗಳ ದಿನದ ಪ್ರೀತಿಪೂರ್ವಕ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *