‘ಅದೆಲ್ಲ ಗೊತ್ತಿಲ್ಲ, 20 ಕೋಟಿ ರೂ. ಕೊಡಿ’; ಧನುಶ್ ಹಿಂದೆ ಬಿದ್ದ ನಿರ್ಮಾಪಕ

‘ಅದೆಲ್ಲ ಗೊತ್ತಿಲ್ಲ, 20 ಕೋಟಿ ರೂ. ಕೊಡಿ’; ಧನುಶ್ ಹಿಂದೆ ಬಿದ್ದ ನಿರ್ಮಾಪಕ


ತಮಿಳು ನಟ ಧನುಶ್ (ಧನುಷ್) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇಷ್ಟು ದಿನ ಅವರ ಎರಡನೇ ವಿವಾಹದ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಅವರ ಲೀಗಲ್ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ. ‘ಥೇಂಡಾಲ್’ ಫಿಲ್ಮ್ಸ್’ ಸಂಸ್ಥೆ ನಟನಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಅಷ್ಟೇ ಅಲ್ಲ, 20 ಕೋಟಿ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ಅಷ್ಟಕ್ಕೂ ಏನಿದು ಪ್ರಕರಣ? ಆ ಬಗ್ಗೆ ಇಲ್ಲಿದೆ ವಿವರ.

‘ಥೆಂಡಾಲ್ ಫಿಲ್ಮ್ಸ್’ ಹೆಸರಿನ ಸಂಸ್ಥೆ ಜೊತೆ ಧನುಶ್ ಸಿನಿಮಾ ಒಪ್ಪಿಕೊಂಡಿದ್ದರು. ಈ ಸಿನಿಮಾ ವಿಳಂಬ ಆಗುತ್ತಲೇ ಇದೆ.ಈ ಚಿತ್ರದ ಚಿತ್ರೀಕರಣ ವಿಳಂಬವಾಗುತ್ತಿರುವುದಕ್ಕೆ ಸಂಸ್ಥೆಗೆ ನಷ್ಟವಾಗುತ್ತಿದೆ. ಹೀಗಾಗಿ, 20 ಕೋಟಿ ಪರಿಹಾರ ಎಂಬುದು ತಂಡದ ಬೇಡಿಕೆಯಾಗಿದೆ.

2016ರಲ್ಲಿ ‘ನಾನ್ ರುದ್ರನ್’ ಎಂಬ ಚಿತ್ರಕ್ಕೆ ಧನುಷ್ ಸಹಿ ಹಾಕಿದ್ದರು. ಆದರೆ ಅದರ ಶೂಟಿಂಗ್ ಮಾಡಿಯೇ ಇಲ್ಲ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಆರಂಭದಲ್ಲಿ ಧನುಶ್ ಈ ಯೋಜನೆಯಲ್ಲಿ ನಟಿಸಲು ಮತ್ತು ನಿರ್ದೇಶಿಸಲು ಒಪ್ಪಿಕೊಂಡರು ಎಂದು ನೋಟಿಸ್ ಅಲ್ಲಿ ಆರೋಪಿಸಲಾಗಿದೆ.

ಕಥೆಯಲ್ಲಿ ಧನುಶ್ ಸೂಚಿಸಿದ ಬದಲಾವಣೆಗಳಿಗೆ ನಿರ್ಮಾಣ ಸಂಸ್ಥೆ ಒಪ್ಪಿಗೆ ನೀಡಿದ್ದರೂ, ನಟ ನಂತರ ಸಂಪೂರ್ಣ ಚಿತ್ರಕಥೆಯನ್ನು ಒದಗಿಸಲಾಗಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಯೋಜನೆ ಸೆಟ್ಟೇರಿಲ್ಲ.

ಈ ವಿಳಂಬದಿಂದಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಈ ಯೋಜನೆಯ ಆರಂಭಿಕ ಹಂತಗಳಲ್ಲಿ ಮಾಡಿದ ಹೂಡಿಕೆಗಳನ್ನು ಹಿಂಪಡೆಯಲು ಹಣಕಾಸಿನ ಪರಿಹಾರವನ್ನು ಕೋರಲಾಗಿದೆ. ನಿಗದಿತ ಸಮಯದೊಳಗೆ ಬೇಡಿಕೆಗಳನ್ನು ನಿಗದಿಪಡಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಬ್ಯಾನರ್ ಸೂಚಿಸಿದೆ. ಈವರೆಗೆ ಪ್ರಕರಣದ ಬಗ್ಗೆ ಧನುಷ್ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಧನುಷ್ ಹುಟ್ಟೂರಿನ ವಿಷಯ ಬರುತ್ತಿದ್ದಂತೆ ನಾಚಿ ನೀರಾದ ಮೃಣಾಲ್ ಠಾಕೂರ್

ಧನುಶ್ ತಮ್ಮ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ ‘D55’ ಎಂದು ಹೆಸರು ಇಟ್ಟಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಈ ಚಿತ್ರಕ್ಕೆ ‘ಅಮರನ್’ ಸಿನಿಮಾ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:06 am, ಶನಿ, 14 ಫೆಬ್ರವರಿ 26



Source link

Leave a Reply

Your email address will not be published. Required fields are marked *