ಮೃಣಾಲ್ ಠಾಕೂರ್ (ಮೃಣಾಲ್ ಠಾಕೂರ್ ) ಹಾಗೂ ಧನುಷ್ ಮದುವೆ ಆಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಇಂದೇ (ಫೆಬ್ರವರಿ 14) ಇವರ ವಿವಾಹ ಯಾವುದು ಎಂದು ವರದಿಯಾಗಿದೆ. ಆದರೆ, ಇದನ್ನು ಅವರು ಒಪ್ಪಲಿಲ್ಲ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ವದಂತಿ ಹಬ್ಬಲು ಮುಖ್ಯ ಕಾರಣ. ಈ ವಿಷಯವಾಗಿ ಮೃಣಾಲ್ ಕಡೆಯಿಂದ ಈಗ ಸ್ಪಷ್ಟನೆ ಸಿಕ್ಕಿದೆ. ಫನ್ ಆಗಿ ಇದಕ್ಕೆ ಅವರು ಉತ್ತರ ನೀಡಿದ್ದಾರೆ.
‘ಗಲಾಟಾ ಇಂಡಿಯಾ’ಗೆ ಮೃಣಾಲ್ ಸಂದರ್ಶನ. ಈ ವೇಳೆ ಹಲವು ವಿಷಯಗಳ ಬಗ್ಗೆ ತೆರೆದುಕೊಂಡಿದೆ. ‘ಫೆಬ್ರವರಿ 14ರಂದು ನಿಮ್ಮ ಮದುವೆ ಎಂಬ ಸುದ್ದಿ ಹರಿದಾಡಿದೆಯಲ್ಲ’ ಎಂದು ಕೇಳಲಾಯಿತು. ‘ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಅಲ್ಲ. ನನ್ನ ಮದುವೆ ನಡೆಯೋದು ಏಪ್ರಿಲ್ 1 ರಂದು. ಏಕೆಂದರೆ ಅದು ಮೂರ್ಖರ ದಿನ’ ಎಂದು ಅವರು ಉತ್ತರಿಸಿದರು.
‘ಹೌದು, ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಸರಿಯಾದ ದಿನ, ಸರಿಯಾದ ಸಮಯ ಮತ್ತು ಸರಿಯಾದ ವ್ಯಕ್ತಿ ನನ್ನ ಜೀವನದಲ್ಲಿ ಬಂದಾಗ, ನನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅದನ್ನು ಮೊದಲು ಹೇಳುವುದು ನಾನೇ’ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 20 ರಂದು ಮೃಣಾಲ್ ಠಾಕೂರ್ ನಟನೆಯ ‘ದೋ ದೀವಾನೆ ಶೆಹರ್ ಮೇ’ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಸಿದ್ಧಾಂತ ಚತುರ್ವೇದಿ ಹೀರೋ. ಸಿನಿಮಾ ರಿಲೀಸ್ ಇಟ್ಟುಕೊಂಡು ಯಾರೂ ವಿವಾಹ ಆಗೋ ಪ್ಲ್ಯಾನ್ ಮಾಡೋದಿಲ್ಲ.
ಇದನ್ನೂ ಓದಿ: ಸಿದ್ಧಾಂತ್ ಚತುರ್ವೇಧಿ-ಮೃಣಾಲ್ ಠಾಕೂರ್ ರೊಮ್ಯಾಂಟಿಕ್ ಮೂಮೆಂಟ್ ವಿಡಿಯೋ
ಮೃಣಾಲ್ ಹಾಗೂ ಧನುಶ್ ವಿವಾಹ ಆಗುತ್ತಿರುವ ರೀತಿಯಲ್ಲಿ ‘ಎಐ’ ಫೋಟೋಗಳನ್ನು ಹರಿಬಿಡಲಾಗಿದೆ. ಇದನ್ನು ಅನೇಕರು ನಿಜವಾದ ಫೋಟೋ ಎಂದು ನಂಬಿದ್ದರು. ಇವರ ಮದುವೆ ಸುದ್ದಿ ಹಬ್ಬಲು ಇದು ಮುಖ್ಯ ಕಾರಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.