Headlines

ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!

ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!


ಪನ್ನೂನ್ ಹತ್ಯೆ ಸಂಚು, ನಿಖಿಲ್ ಗುಪ್ತಾ

ಬೆಂಗಳೂರು,ಫೆ.14: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖಲಿಸ್ತಾನಿ ನಾಯಕ ಗುರುಪತ್‌ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಕೊಲೆ ಸಂಚಿನ ಪ್ರಮುಖ ಆರೋಪಿ ಎನ್ನಲಾದ ಭಾರತೀಯ ಮೂಲದ ನಿಖಿಲ್ ಗುಪ್ತಾ (ನಿಖಿಲ್ ಗುಪ್ತಾ) ಅಮೆರಿಕದ ಮ್ಯಾನ್ಹ್ಯಾಟನ್ ನ್ಯಾಯಾಲಯದಲ್ಲಿ ಹತ್ಯೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ನಾಯಕ ಪನ್ನೂನ್ ಹತ್ಯೆಗೆ ನಿಖಿಲ್ ಗುಪ್ತಾ ಸುಪಾರಿ ನೀಡಿದ್ದ ಎಂಬ ಆರೋಪವಿದೆ. ಸರ್ಕಾರಿ ಅಧಿಕಾರಿಯೊಬ್ಬರ ಸೂಚನೆಯ ನಿಖಿಲ್ ಗುಪ್ತಾ ಈ ಸಂಚು ರೂಪಿಸಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರೋಪಿಸಿದ್ದಾರೆ.

ಪನ್ನೂನ್ ಹತ್ಯೆಗಾಗಿ ನಿಖಿಲ್ ಗುಪ್ತಾ ಹಂತಕನೊಬ್ಬನನ್ನು ಹುಡುಕುತ್ತಿದ್ದಾಗ, ಆತ ಅಮೆರಿಕದ ಗುಪ್ತಚರ ಇಲಾಖೆಯ ರಹಸ್ಯ ಏಜೆಂಟ್ ಅನ್ನು ಸಂಪರ್ಕಿಸಿದ್ದ. ಹತ್ಯೆಗಾಗಿ ಸುಮಾರು 1 ಲಕ್ಷ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಮತ್ತು ಅದರಲ್ಲಿ 15,000 ಡಾಲರ್ ಮುಂಗಡವಾಗಿ ನೀಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾನನ್ನು ಬಂಧಿಸಿ ಅಮೆರಿಕಕ್ಕೆ ಹಸ್ತಾಂತರಿಸಲಾಯಿತು.

ನ್ಯಾಯಾಲಯದಲ್ಲಿ ಏನಾಯಿತು?

ನ್ಯಾಯಾಧೀಶರ ಮುಂದೆ ಹಾಜರಾದ ನಿಖಿಲ್ ಗುಪ್ತಾ, “ಹೌದು, ನಾನು ಈ ಹತ್ಯೆ ಸಂಚಿನಲ್ಲಿ ಭಾಗವಹಿಸಿದ್ದೆ” ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಈ ಹೇಳಿಕೆಯ ಮೂಲಕ ಈ ವಿವಾದಾತ್ಮಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ತಪ್ಪೊಪ್ಪಿಗೆ ಕಾರಣ ನಿಖಿಲ್ ಗುಪ್ತಾಗೆ ಸುಮಾರು 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಆತನ ಹಿಂದೆ ಯಾರಾದರೂ ಇದ್ದರೆ ಎಂಬ ಬಗ್ಗೆಯೂ ತನಿಖೆಯಾಗಬಹುದು ಎಂದು ಹೇಳಲಾಗಿದೆ.

ಭಾರತ ಸರ್ಕಾರದ ನಿಲುವು:

ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಆದರೆ, ಅಮೆರಿಕ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಭಾರತವು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನ್ನದೇ ಆದ ತನಿಖೆ ನಡೆಸುತ್ತಿದೆ.

ವಿಕಾಶ್ ಯಾದವ್ (CC-1) ಯಾರು?

ವಿಕಾಶ್ ಯಾದವ್ ಅವರು ಈ ಹಿಂದೆ ಭಾರತದ ಅತಿದೊಡ್ಡ ಅರೆಸೇನಾ ಪಡೆದ ಸಿಆರ್‌ಪಿಎಫ್ (ಸಿಆರ್‌ಪಿಎಫ್) ನಲ್ಲಿ ಸಹಾಯಕ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಇವರು ಭಾರತದ ಸಂಪುಟ ಸಚಿವಾಲಯದ ಅಡಿಯಲ್ಲಿ ಬರುವ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ (RAW – ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ನಲ್ಲಿ ‘ಸೀನಿಯರ್ ಫೀಲ್ಡ್ ಆಫೀಸರ್’ ಆಗಿ ನಿಯೋಜನೆಗೊಂಡಿದ್ದರು. ಅಮೆರಿಕದ ಚಾರ್ಜ್‌ಶೀಟ್ ಪ್ರಕಾರ, ಯಾದವ್ ಅವರು ‘ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್’ ಮತ್ತು ‘ಇಂಟೆಲಿಜೆನ್ಸ್’ (ಗುಪ್ತಚರ) ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು. ಭಾರತೀಯ ಪ್ರಜೆ ನಿಖಿಲ್ ಗುಪ್ತಾ ತನ್ನ ತಪ್ಪು ಒಪ್ಪಿಕೊಂಡ ಬೆನ್ನಲ್ಲೇ, ಈ ಸಂಚಿನ ಹಿಂದಿದ್ದ ಮಾಸ್ಟರ್ ಮೈಂಡ್ ಎನ್ನಲಾದ ‘CC-1’ ಅಲಿಯಾಸ್ ವಿಕಾಶ್ ಯಾದವ್ ಕುರಿತಾದ ಚರ್ಚೆ ಜೋರಾಗಿದೆ. ಅಮೆರಿಕದ ತನಿಖಾ ಸಂಸ್ಥೆಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರು ಕೂಡ ಇದೆ ಎಂದು ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆ

ಹತ್ಯೆ ಸಂಚಿನಲ್ಲಿ ಇವರ ಪಾತ್ರವೇನು?

ಅಮೆರಿಕ ತನಿಖೆ ಸಂಸ್ಥೆಗಳು ದೋಷಾರೋಪ ಪಟ್ಟಿಯ ಪ್ರಕಾರ, 2023ರ ಮೇ ತಿಂಗಳಿನಲ್ಲಿ ವಿಕಾಶ್ ಯಾದವ್ ಅವರು ನಿಖಿಲ್ ಗುಪ್ತಾನನ್ನು ಸಂಪರ್ಕಿಸಿ, ನ್ಯೂಯಾರ್ಕ್‌ನಲ್ಲಿರುವ ಪನ್ನೂನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇವರು ಪನ್ನೂನ್ನ ಮನೆಯ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಆತನ ದೈನಂದಿನ ಚಟುವಟಿಕೆಗಳ ಮಾಹಿತಿಯನ್ನು ಗುಪ್ತವಾಗಿ ನೀಡಿದ್ದರು. ಹತ್ಯೆಗಾಗಿ 1 ಲಕ್ಷ ಡಾಲರ್ ಸುಪಾರಿ ನಿಗದಿಪಡಿಸಲಾಗಿದೆ ಮತ್ತು 15,00 ಡಾಲರ್ ಮುಂಗಡವಾಗಿ ನೀಡಲು ವ್ಯವಸ್ಥೆ ಮಾಡಲಾಗಿದೆ. “ಅಮಾನತ್” (ಅಮಾನತ್) ಎಂಬ ಗುಪ್ತನಾಮದ ಮೂಲಕ ಇವರು ಸಂವಹನ ನಡೆಸುತ್ತಿದ್ದಾರೆ ಎಂದು ಹೇಳಿದರು.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *