ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಅದು ಸಹ 14 ವಯಸ್ಸಿನೊಳಗೆ 3 ಭರ್ಜರಿ ಟಿ20 ಶತಕ, 4 ಏಕದಿನ ಶತಕ, ಒಂದು ಟೆಸ್ಟ್ ಸೆಂಚುರಿ ಸಿಡಿಸಿದ ಬಳಿಕ ವಿಶೇಷ. ಆದರೆ ಈ ಬಾರಿ ವೈಭವ್ ಶಾಲೆಗೆ ಹೋಗುತ್ತಿರುವುದು ಪರೀಕ್ಷೆ ಬರೆಯಲು.
2026ರ ಐಸಿಸಿ ಅಂಡರ್-19 ಗೆದ್ದು ವಿಶ್ರಾಂತಿಯಲ್ಲಿದ್ದ ವೈಭವ್ ಸೂರ್ಯವಂಶಿ ಈಗ ತಮ್ಮ ಶೈಕ್ಷಣಿಕ ಪರೀಕ್ಷೆಗೆ ಸಜ್ಜಾಗಿದ್ದಾರೆ. ಫೆಬ್ರವರಿ 17, 2026 ರಿಂದ ಪ್ರಾರಂಭವಾಗುವ CBSE 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ವೈಭವ್ ಹಾಲ್ ಟಿಕೆಟ್ ಲಭ್ಯವಿದೆ.
ಬಿಹಾರದ ಸಮಸ್ತಿಪುರದ ಪೋಡಾರ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಯಾಗಿರುವ ವೈಭವ್ ಸೂರ್ಯವಂಶಿ ಫೆಬ್ರವರಿ 17 ರಿಂದ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಅವರು ಹೀರೋ ಆಗಿದ್ದರೂ ಸಹ, ಶಾಲೆಗೆ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡದೆ ಸಾಮಾನ್ಯ ವಿದ್ಯಾರ್ಥಿಯಂತೆಯೇ ಪರೀಕ್ಷೆ ನಡೆಸಲಾಗುವುದು ಎಂದು ಶಾಲಾ ಪ್ರಾಂಶುಪಾಲರು.
ವೈಭವ್ ಸೂರ್ಯವಂಶಿ ಒಟ್ಟು 5 ಪರೀಕ್ಷೆ ಬರೆಯಲಿದ್ದಾರೆ ಎಂದು ವರದಿಯಾಗಿದೆ. ಈ ಪರೀಕ್ಷೆಗಳ ವಿವರಗಳು ಈ ಕೆಳಗಿನಂತಿವೆ…
- ಭಾಷೆ I: ಇಂಗ್ಲಿಷ್ (ಸಂವಹನ ಅಥವಾ ಭಾಷೆ ಮತ್ತು ಸಾಹಿತ್ಯ).
- ಭಾಷೆ II: ಹಿಂದಿ (ಕೋರ್ಸ್ ಎ ಅಥವಾ ಬಿ) ಅಥವಾ ಇನ್ನೊಂದು ಪ್ರಾದೇಶಿಕ/ವಿದೇಶಿ ಭಾಷೆ.
- ಗಣಿತ: (ಸ್ಟ್ಯಾಂಡರ್ಸ್ – ಬೇಸಿಕ್ ಲೆವೆಲ್).
- ವಿಜ್ಞಾನ: (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ).
- ಸಮಾಜ ವಿಜ್ಞಾನ: (ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ).
ಪರೀಕ್ಷೆ ಬಳಿಕ ಐಪಿಎಲ್ ಅಗ್ನಿಪರೀಕ್ಷೆ:
10ನೇ ತರಗತಿ ಪರೀಕ್ಷೆ ಬಳಿಕ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಕೂಟಕ್ಕೆ ಸಜ್ಜಾಗಲಿದ್ದಾರೆ. ಮಾರ್ಚ್ 26 ರಿಂದ ಶುರುವಾಗಲಿರುವ ಐಪಿಎಲ್ ಸೀಸನ್-19 ರಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ.
ಕಳೆದ ಸೀಸನ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿರುವ ಕಾರಣ ಮುಂಬರುವ ಸೀಸನ್ ನಲ್ಲೂ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.
ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಅರ್ಧದಲ್ಲೇ ಚೆಂಡೆಸೆದು ಸಿಕ್ಕಿ ಬಿದ್ದ ಎರಾಸ್ಮಸ್..!
ಅದರಲ್ಲೂ ಐಪಿಎಲ್ 2025 ರಲ್ಲಿ ಸ್ಫೋಟಕ ಸೆಂಚುರಿ ಸಿಡಿಸಿರುವ ಯುವ ದಾಂಡಿಗನ ಕಡೆಯಿಂದ ಈ ಬಾರಿ ಭರ್ಜರಿ ಪ್ರದರ್ಶನದ ನಿರೀಕ್ಷೆಯಿದೆ. ಈ ಭರ್ಜರಿ ಪ್ರದರ್ಶನದ ಮೂಲಕ ವೈಭವ್ ಸೂರ್ಯವಂಶಿ ಭಾರತ ಟಿ20 ತಂಡದ ಕದ ತಟ್ಟಲಿದ್ದಾರೆ.
ರಂದು ಪ್ರಕಟಿಸಲಾಗಿದೆ – 12:00 pm, ಶನಿ, 14 ಫೆಬ್ರವರಿ 26