ಸುದೀಪ್ ಗೂಳಿ ಸಿನಿಮಾ ಹೀರೋಯಿನ್‌ಗೆ ಹಾರ್ಟ್ ಬ್ರೇಕ್: ಎಂಗೇಜ್ಮೆಂಟ್ ಆದವನೊಂದಿಗೆ ಅದೆಲ್ಲಾ ಮಾಡ್ಬಿಟ್ಟೆ-ನಟಿ ಮಮತಾ!

ಸುದೀಪ್ ಗೂಳಿ ಸಿನಿಮಾ ಹೀರೋಯಿನ್‌ಗೆ ಹಾರ್ಟ್ ಬ್ರೇಕ್: ಎಂಗೇಜ್ಮೆಂಟ್ ಆದವನೊಂದಿಗೆ ಅದೆಲ್ಲಾ ಮಾಡ್ಬಿಟ್ಟೆ-ನಟಿ ಮಮತಾ!

ಸುದೀಪ್ ಗೂಳಿ ಸಿನಿಮಾ ಹೀರೋಯಿನ್‌ಗೆ ಹಾರ್ಟ್ ಬ್ರೇಕ್: ಎಂಗೇಜ್ಮೆಂಟ್ ಆದವನೊಂದಿಗೆ ಅದೆಲ್ಲಾ ಮಾಡ್ಬಿಟ್ಟೆ-ನಟಿ ಮಮತಾ!

ಬಹುಭಾಷಾ ನಟಿ ಮಮತಾ ಮೋಹನ್‌ದಾಸ್ ತಮ್ಮ ನೋವಿನ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖರಾದ ನಂತರ, ಅವರು ಚಿತ್ರರಂಗದ ನಟನೊಬ್ಬನೊಂದಿಗೆ ಡೇಟಿಂಗ್ ಮಾಡಿದ್ದರು, ಆದರೆ ಆತ ತನ್ನ ನಿಶ್ಚಿತಾರ್ಥವನ್ನು ಮುಚ್ಚಿಟ್ಟು ನಂಬಿಕೆ ದ್ರೋಹ ಮಾಡಿದ್ದನು ಎಂದು ಬಹಿರಂಗಪಡಿಸಿದ್ದಾರೆ.

ಸಿನಿಮಾ ರಂಗದ ಗ್ಲಾಮರ್ ಪ್ರಪಂಚದ ಹಿಂದೆ ಎಷ್ಟೋ ನೋವುಗಳು ಅಡಗಿರುತ್ತವೆ. ಅದರಲ್ಲೂ ನಟಿಯರ ವೈಯಕ್ತಿಕ ಜೀವನದ ಏರಿಳಿತಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಬಹುಭಾಷಾ ನಟಿ ಮಮತಾ ಮೋಹನ್‌ದಾಸ್ ತಮ್ಮ ಜೀವನದ ಅತ್ಯಂತ ನೋವಿನ ಮತ್ತು ಕಹಿ ಡೇಟಿಂಗ್ ಅನುಭವವೊಂದನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದ ಹೊಸ ಭರವಸೆಯಲ್ಲಿ ಪ್ರೀತಿಯ ಹುಡುಕಾಟಕ್ಕೆ ಹೊರಟಿದ್ದ ನಟಿಗೆ ಎದುರಾಗಿದ್ದು ಮಾತ್ರ ನಂಬಿಕೆ ದ್ರೋಹದ ಆಘಾತ!

’ಮಯೂಖಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಮಮತಾ ಮೋಹನ್‌ದಾಸ್, ಮಲಯಾಳಂ ಮಾತ್ರವಲ್ಲದೆ ಕನ್ನಡದ ‘ಗೂಳಿ’ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಆದರೆ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅಂದರೆ 24ನೇ ವಯಸ್ಸಿನಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬಂದ ಮಮತಾ, ಗುಣಮುಖರಾದ ಬಳಿಕ ತಮ್ಮ ಬದುಕಿನಲ್ಲಿ ಒಬ್ಬ ಸಂಗಾತಿ ಬೇಕೆಂದು ಬಯಸಿದ್ದರು. ಆದರೆ, ಸಿನಿಮಾ ರಂಗದ ವ್ಯಕ್ತಿಯೊಬ್ಬರ ಜೊತೆಗಿನ ಅವರ ಮೊದಲ ಡೇಟಿಂಗ್ ಅನುಭವವೇ ಅವರಿಗೆ ದೊಡ್ಡ ಆಘಾತ ನೀಡಿತ್ತು.

ಇತ್ತೀಚೆಗೆ ನಡೆದ ‘ಜೋಸ್ ಆಲುಕ್ಕಾಸ್ ಪಾಡ್‌ಕ್ಯಾಸ್ಟ್’ನಲ್ಲಿ ಮಾತನಾಡಿದ ಮಮತಾ, ‘ಕ್ಯಾನ್ಸರ್‌ನಿಂದ ಗುಣಮುಖಳಾದ ಮೇಲೆ ನಾನು ಸಿನಿಮಾ ಇಂಡಸ್ಟ್ರಿಯ ಒಬ್ಬ ವ್ಯಕ್ತಿಯ ಜೊತೆ ಡೇಟಿಂಗ್ ಮಾಡಿದ್ದೆ. ಸಿನಿಮಾ ರಂಗದಲ್ಲಿ ನಾನು ಡೇಟ್ ಮಾಡಿದ್ದು ಅವನೊಬ್ಬನ ಜೊತೆ ಮಾತ್ರ. ಅವನು ನನ್ನನ್ನು ಡೇಟಿಂಗ್‌ಗೆ ಕರೆದಾಗ ನಾನು ತುಂಬಾ ಖುಷಿಯಾಗಿದ್ದೆ. ನಮ್ಮ ಅಮ್ಮನ ಬಳಿ ಅನುಮತಿ ಪಡೆದು ಮೊದಲ ಬಾರಿಗೆ ಒಬ್ಬ ಹುಡುಗನ ಜೊತೆ ಡೇಟ್‌ಗೆ ಹೋಗಿದ್ದೆ. ಆದರೆ, ಆಮೇಲೆ ಗೊತ್ತಾಯಿತು ಆ ನಟನಿಗೆ ಆಗಲೇ ಎಂಗೇಜ್‌ಮೆಂಟ್ ಆಗಿತ್ತು ಎಂದು! ಈ ವಿಷಯ ನನಗೆ ಅವನ ಸಹೋದರನ ಮೂಲಕ ತಿಳಿಯಿತು’ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

’ಈ ಸತ್ಯ ತಿಳಿದಾಗ ನನ್ನ ಹೃದಯವೇ ಒಡೆದುಹೋಯಿತು. ನಿನಗೆ ಆಗಲೇ ಮದುವೆ ನಿಶ್ಚಯವಾಗಿದ್ದರೆ ನನ್ನನ್ನು ಯಾಕೆ ಡೇಟ್‌ಗೆ ಕರೆದೆ ಎಂದು ಅವನನ್ನು ಪ್ರಶ್ನಿಸಿದೆ. ಸಮಾಜದಲ್ಲಿ ದೊಡ್ಡ ಹೆಸರು ಮಾಡಿರುವ ವ್ಯಕ್ತಿಗಳು ಹೀಗೆ ಮಾಡುತ್ತಾರೆ ಎಂದು ನಾನು ಊಹಿಸಿರಲಿಲ್ಲ’ ಎಂದು ಮಮತಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಇನ್ನು ಮತ್ತೊಬ್ಬ ವ್ಯಕ್ತಿಯನ್ನು ಭೇಟಿಯಾದರಾದರೂ, ಅವನ ವರ್ತನೆಯಿಂದಾಗಿ ಆ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ ಎಂದು ವಿವರಿಸಿದರು.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಮಮತಾ, ಕಾಲೇಜಿನ ಫೈನಲ್ ಇಯರ್‌ನಲ್ಲಿದ್ದಾಗ ಒಬ್ಬರ ಜೊತೆ ಡೇಟ್ ಮಾಡಿದ್ದರಂತೆ. ಆದರೆ, ಆತ ಅಕಾಲಿಕವಾಗಿ ಮರಣ ಹೊಂದಿದ್ದು ತಮಗೆ ದೊಡ್ಡ ಆಘಾತ ನೀಡಿತ್ತು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕ್ಯಾನ್ಸರ್ ಎಂಬ ರೋಗವನ್ನು ಧೈರ್ಯದಿಂದ ಎದುರಿಸಿ ಗೆದ್ದ ಮಮತಾ ಮೋಹನ್‌ದಾಸ್, ಪ್ರೀತಿ ಮತ್ತು ವಿಶ್ವಾಸದ ವಿಷಯದಲ್ಲಿ ಸತತವಾಗಿ ಹಿನ್ನಡೆ ಅನುಭವಿಸಿದ್ದಾರೆ. ಅವರ ಈ ಹೊಸ ಹೇಳಿಕೆಗಳು ಈಗ ಸಿನಿಮಾ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಆ ‘ಅನಾಮಧೇಯ’ ನಟ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Source link

Leave a Reply

Your email address will not be published. Required fields are marked *