Headlines

ಈಗ ಜೈಲಲ್ಲಿರೋ ಜ್ಯೋತಿಷಿ ಸಿನಿಮಾ ಚಾನ್ಸ್ ಹೆಸರಲ್ಲಿ ನನಗೂ ರೂಮಿಗೆ ಕರೆದಿದ್ದ; ಜ್ಯೂಸ್ ಕುಡಿಯದೇ ಪಾರಾದೆ-ಯ್ಯೂಟೂಬರ್! | Social Media Star Jasi Accuses Astrologer Murari Thantri Of Inappropriate Advances Sat

ಈಗ ಜೈಲಲ್ಲಿರೋ ಜ್ಯೋತಿಷಿ ಸಿನಿಮಾ ಚಾನ್ಸ್ ಹೆಸರಲ್ಲಿ ನನಗೂ ರೂಮಿಗೆ ಕರೆದಿದ್ದ; ಜ್ಯೂಸ್ ಕುಡಿಯದೇ ಪಾರಾದೆ-ಯ್ಯೂಟೂಬರ್! | Social Media Star Jasi Accuses Astrologer Murari Thantri Of Inappropriate Advances Sat



ಈಗ ಜೈಲಲ್ಲಿರೋ ಜ್ಯೋತಿಷಿ ಸಿನಿಮಾ ಚಾನ್ಸ್ ಹೆಸರಲ್ಲಿ ನನಗೂ ರೂಮಿಗೆ ಕರೆದಿದ್ದ; ಜ್ಯೂಸ್ ಕುಡಿಯದೇ ಪಾರಾದೆ-ಯ್ಯೂಟೂಬರ್! | Social Media Star Jasi Accuses Astrologer Murari Thantri Of Inappropriate Advances Sat

ಇದೀಗ ಜೈಲು ಸೇರಿರುವ ಖ್ಯಾತ ಜ್ಯೋತಿಷಿ ವಿರುದ್ಧ ಸೋಶಿಯಲ್ ಮೀಡಿಯಾ ಸ್ಟಾರ್ ಜಾಸಿ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾ ಚಾನ್ಸ್ ಆಮಿಷವೊಡ್ಡಿ, ಮನೆಗೆ ಕರೆದು ಜ್ಯೂಸ್ ನೀಡಿ ತನ್ನನ್ನು ಖೆಡ್ಡಾಕ್ಕೆ ಕೆಡವಲು ಆತ ಯತ್ನಿಸಿದ್ದ ಎಂದು ಜಾಸಿ ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಹೇಳುವುದಾಗಿ ನಂಬಿಸಿ ಹಲವು ಹುಡುಗಿಯರು, ಮಹಿಳೆಯರು, ನಟ-ನಟಿಯರು ಹಾಗೂ ಶ್ರೀಮಂತರನ್ನು ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಮಹಿಳೆ ಮತ್ತು ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಜ್ಯೋತಿಷಿಗಳ ಸಂಖ್ಯೆ ಹೆಚ್ಚಾಗಿದ್ದು, ಇದೇ ಕೇಸಿನಲ್ಲಿ ಉತ್ತರ ಕನ್ನಡ ಮೂಲದ ಜ್ಯೋತಿಷಿ ಕಮಲಾಕರ ಭಟ್ ಕೂಡ ಜೈಲು ಸೇರಿದ್ದಾರೆ. ಅದೇ ರೀತಿ ಕೇರಳದಲ್ಲಿ ಜ್ಯೋತಿಷಿ ಮುರಾರಿ ಕೂಡ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡು ಪೊಕ್ಸೋ ಕೇಸಿನಡಿ ಜೈಲಯ ಸೇರಿದ್ದಾನೆ. ಇದೀಗ ಜ್ಯೋತಿಷಿ, ಸಿನಿಮಾ ಚಾನ್ಸ್ ಕೊಡಿಸುವುದಾಗಿ ರೂಮಿಗೆ ಕರೆದು ಜ್ಯೂಸ್ ಕುಡಿಯಲು ಹೇಳಿದ್ದರು. ಆದರೆ, ನಾನು ಜ್ಯೂಸ್ ಕುಡಿಯಲಿಲ್ಲ ಎಂದು ಸೋಶಿಯಲ್ ಮೀಡಿಯಾ ಸ್ಟಾರ್ ಜಾಸಿ ಹೇಳಿದ್ದಾರೆ.

ಜ್ಯೋತಿಷ್ಯದ ಹೆಸರಿನಲ್ಲಿ ಕಾಮಕಾಂಡ ನಡೆಸುತ್ತಿದ್ದ ಎನ್ನಲಾದ ಕೇರಳದ ವಿವಾದಿತ ಜ್ಯೋತಿಷಿ ಮುರಾರಿ ತಂತ್ರಿ ಅಲಿಯಾಸ್ ರಾಜನ್ ಬಾಬು ಅವರ ಅಸಲಿ ಬಣ್ಣ ಈಗ ಬಟಾಬಯಲಾಗುತ್ತಿದೆ. 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ (POCSO) ಕಾಯ್ದೆಯಡಿ ಬಂಧಿತನಾಗಿರುವ ಈ ‘ರೀಲ್ಸ್’ ಸ್ಟಾರ್ ವಿರುದ್ಧ ಇದೀಗ ಸಾಮಾಜಿಕ ಮಾಧ್ಯಮದ ಖ್ಯಾತ ತಾರೆ ಜಾಸಿ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ ಅವಕಾಶದ ಆಮಿಷವೊಡ್ಡಿ ತನ್ನನ್ನೂ ಆತ ಹೇಗೆ ಖೆಡ್ಡಾಕ್ಕೆ ಕೆಡವಲು ಯತ್ನಿಸಿದ್ದ ಎಂಬ ಕಹಾನಿಯನ್ನು ಜಾಸಿ ಬಹಿರಂಗಪಡಿಸಿದ್ದಾರೆ.

ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಜ್ಯೋತಿಷಿ:

ಬಾಧೆ ಬಿಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪ ಮುರಾರಿ ತಂತ್ರಿ ಮೇಲಿದೆ. ಸದಾ ಹಾಡು, ಡ್ಯಾನ್ಸ್ ಮತ್ತು ರೀಲ್ಸ್‌ಗಳಲ್ಲಿ ಮುಳುಗಿರುತ್ತಿದ್ದ ಈತ, ಜ್ಯೋತಿಷ್ಯವನ್ನೇ ಬಂಡವಾಳ ಮಾಡಿಕೊಂಡಿದ್ದ. ಕೇರಳದ ಕೊಲ್ಲಂ ಜಿಲ್ಲೆಯ ವೆಂಡಾರ್‌ನಲ್ಲಿ ಜ್ಯೋತಿಷ್ಯಾಲಯ ನಡೆಸುತ್ತಿದ್ದ ಈತನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಕೊನೆಗೆ ಪೊಲೀಸರು ಭರಣಿಕ್ಕಾವು ಎಂಬಲ್ಲಿನ ಲಾಡ್ಜ್‌ವೊಂದರಲ್ಲಿ ಈತನನ್ನು ಹೆಡೆಮುರಿ ಕಟ್ಟಿದ್ದರು.

ಸಿನಿಮಾ ಚಾನ್ಸ್ ಹೆಸರಲ್ಲಿ ಹನಿಟ್ರ್ಯಾಪ್ ಯತ್ನ:

ಮುರಾರಿ ತಂತ್ರಿಯ ಬಂಧನದ ಬೆನ್ನಲ್ಲೇ ಯೂಟ್ಯೂಬ್ ಮೂಲಕ ಅಳಲು ತೋಡಿಕೊಂಡಿರುವ ಜಾಸಿ, ‘ನನಗೆ ಈತನನ್ನು ದುಬೈನಲ್ಲಿ ನಂದಿನಿ ರೆಡ್ಡಿ ಎಂಬಾಕೆ ಪರಿಚಯಿಸಿದ್ದಳು. ಆತ ದೊಡ್ಡ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನಿನಗೆ ಟ್ರಾನ್ಸ್‌ಜೆಂಡರ್ ಡ್ಯಾನ್ಸರ್ ಪಾತ್ರ ನೀಡುತ್ತೇವೆ ಎಂದು ನಂಬಿಸಿದರು. ಸಿನಿಮಾ ಕನಸು ಕಾಣುತ್ತಿದ್ದ ನಾನು ಅವರ ಮಾತಿಗೆ ಮರುಳಾಗಿ ಫೋನ್ ನಂಬರ್ ನೀಡಿದ್ದೆ’ ಎಂದು ಹೇಳಿದ್ದಾರೆ.

ಜ್ಯೂಸ್ ಕೊಟ್ಟರೂ ಕುಡಿಯಲಿಲ್ಲ!:

‘ಒಂದು ದಿನ ಮುರಾರಿ ತಂತ್ರಿ ನನಗೆ ಕಾಲ್ ಮಾಡಿ ಸಿನಿಮಾ ಕಥೆ ಹೇಳಿದ. ಕಲಿಯಲು ಡೈಲಾಗ್‌ಗಳನ್ನೂ ಕೊಟ್ಟ. ಬಳಿಕ ಒಂದು ದಿನ ಭೇಟಿಯಾಗಲು ಮನೆಗೆ ಕರೆದ. ನಾನು ನನ್ನ ಸ್ನೇಹಿತರಾದ ಆಶಿ ಮತ್ತು ಮತ್ತೊಬ್ಬರ ಜೊತೆ ಆತನ ಮನೆಗೆ ಹೋಗಿದ್ದೆ. ಅಲ್ಲಿ ಆತ ನನಗೆ ಕುಡಿಯಲು ಜ್ಯೂಸ್ ಕೊಟ್ಟಿದ್ದ. ಆದರೆ ನನಗೆ ಆತನ ವರ್ತನೆ ಕಂಡಾಗ ಅನುಮಾನ ಬಂದು ಜ್ಯೂಸ್ ಕುಡಿಯಲಿಲ್ಲ. ಆ ದಿನ ಆತ ನನ್ನ ಮುಂದೆ ಸಿನಿಮಾದ ದೃಶ್ಯಗಳನ್ನು ನಟಿಸಿ ತೋರಿಸಿದ್ದ’ ಎಂದು ಜಾಸಿ ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ಒಂಟಿಯಾಗಿ ಬಾ’ ಎಂದಿದ್ದ ಕಾಮಪಿಶಾಚಿ:

ಜಾಸಿ ಅವರ ಆರೋಪದ ಪ್ರಕಾರ, ಮೊದಲ ಭೇಟಿಯ ನಂತರ ಮುರಾರಿ ತಂತ್ರಿ ಪದೇ ಪದೇ ಕಾಲ್ ಮಾಡಿ ಒಂಟಿಯಾಗಿ ಬರುವಂತೆ ಒತ್ತಾಯಿಸಿದ್ದನಂತೆ. ‘ಮತ್ತೊಂದು ದಿನ ಫೋನ್ ಮಾಡಿ ಡೈಲಾಗ್ ಕಲಿತೆಯಾ? ಎಂದು ವಿಚಾರಿಸಿದ. ನಂತರ ಯಾರನ್ನೂ ಕರೆತರಬೇಡ, ಒಬ್ಬಳೇ ಬಂದು ಭೇಟಿಯಾಗು ಎಂದು ಕೇಳಿಕೊಂಡ. ಆಗ ನನಗೆ ಈತ ಫ್ರಾಡ್ ಎಂಬುದು ಖಚಿತವಾಯಿತು. ಆತ ತೆಗೆದ ವಿಡಿಯೋಗಳನ್ನು ನಂದಿನಿ ರೆಡ್ಡಿಗೆ ಕಳುಹಿಸುತ್ತಿದ್ದ ಎಂಬ ವಿಚಾರವೂ ನನಗೆ ಆಮೇಲೆ ತಿಳಿಯಿತು. ಈ ನಂದಿನಿ ರೆಡ್ಡಿ ಸಹವಾಸವೇ ಇಂತಹ ಕೆಟ್ಟ ಜನರ ಜೊತೆ ಇರುತ್ತದೆ’ ಎಂದು ಜಾಸಿ ಕಿಡಿಕಾರಿದ್ದಾರೆ.

‘ಕರ್ಮ ಎಂಬುದು ಎಲ್ಲರಿಗೂ ಒಂದು ದಿನ ಹಿಂತಿರುಗಿ ಬರುತ್ತದೆ. ಅಂದು ಅದೆಷ್ಟೋ ಹೆಣ್ಣುಮಕ್ಕಳಿಗೆ ಈತ ಮೋಸ ಮಾಡಿರಬಹುದು. ಇಂದು ಆ ಬಾಲಕಿಯ ಮೇಲೆ ಕೈಹಾಕಿ ಅಂದರ್ ಆಗಿದ್ದಾನೆ. ಸಮಾಜ ಇಂತಹ ನಕಲಿ ಜ್ಯೋತಿಷಿಗಳ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಜಾಸಿ ಎಚ್ಚರಿಸಿದ್ದಾರೆ. ಸದ್ಯ ಮುರಾರಿ ತಂತ್ರಿ ಜೈಲು ಪಾಲಾಗಿದ್ದು, ಆತನ ಸಂಪರ್ಕದಲ್ಲಿದ್ದ ಇತರರ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *