Zee Kannadaದ ಸೈಕೋ ಜಯಂತ್’ಗೆ ಟಕ್ಕರ್ ಕೊಡೋಕೆ Colorsಗೆ ಬಂದ್ರು ಸೈಕೋ ರಜತ್!

Zee Kannadaದ ಸೈಕೋ ಜಯಂತ್’ಗೆ ಟಕ್ಕರ್ ಕೊಡೋಕೆ Colorsಗೆ ಬಂದ್ರು ಸೈಕೋ ರಜತ್!

Zee Kannadaದ ಸೈಕೋ ಜಯಂತ್’ಗೆ ಟಕ್ಕರ್ ಕೊಡೋಕೆ Colorsಗೆ ಬಂದ್ರು ಸೈಕೋ ರಜತ್!

Zee Kannada ವಾಹಿನಿಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರ ನೋಡಿನೇ ಜನ ಹೆದರಿಕೊಂಡಿದ್ದರು. ಇದೀಗ Colors Kannadaದ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಜಯಂತ್ ಗೆ ಟಕ್ಕರ್ ಕೊಡುವ ಮತ್ತೊಂದು ಪಾತ್ರದ ಎಂಟ್ರಿಯಾಗಿದೆ ಅದು ಸೈಕೋ ರಜತ್.

ಕಲರ್ಸ್ ಕನ್ನಡ ಮತ್ತು ಜೀ ಕನ್ನಡ ಪೈಪೋಟಿಗೆ ಬಿದ್ದಂತೆ ಸೀರಿಯಲ್ ಪ್ರಸಾರ ಮಾಡುತ್ತಿದೆ. ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ತಂಗಿ ಪ್ರೀತಿಸಿದ ಹುಡುಗನನ್ನು ಅಕ್ಕ ಮದುವೆಯಾದರೆ, ಕಲರ್ಸ್ ಕನ್ನಡದ ಹೊಸ ಧಾರಾವಾಹಿ ‘ಪವಿತ್ರ ಬಂಧನ’ದಲ್ಲಿ ತಮ್ಮ ಪ್ರೀತಿಸಿದ ಹುಡುಗನನ್ನು ಅಣ್ಣ ಮದುವೆಯಾಗುವ ಕಥೆ ಇದೆ. ಈಗ ಜಯಂತ್ ಪಾತ್ರಕ್ಕೆ ಪೈಪೋಟಿ ಕೊಡಲು ಮತ್ತೊಂದು ಪಾತ್ರದ ಎಂಟ್ರಿಯಾಗಿದೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಆರಂಭದಲ್ಲಿ ಒಳ್ಳೆಯವನಾಗಿದ್ದು, ಕೊನೆಗೆ ಸೈಕೋ ನಟನೆಯ ಮೂಲಕ ವೀಕ್ಷಕರ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿ, ಜಾನು ಜೀವನ ಅಂದ್ರೆನೆ ಭಯ ಎನ್ನುವಂತೆ ಮಾಡಿದ ಜಯಂತ್. ಅವನ ನಡವಳಿಕೆಯಿಂದಾಗಿಯೇ ಇಂದಿಗೂ ಕೂಡ ಜಾನು ಜಯಂತ್ ಜೊತೆ ಸೇರಿಲ್ಲ.

ಇದೀಗ ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಶುರುವಾದ ಪವಿತ್ರ ಬಂಧನ ಧಾರಾವಾಹಿಯಲ್ಲಿ ಮತ್ತೊಬ್ಬ ಸೈಕೋನ ಎಂಟ್ರಿಯಾಗಿದೆ. ಈತನ ಹೆಸರು ರಜತ್. ಈತ ತನ್ನ ಸೈಕೋ ನಡವಳಿಕೆಯಿಂದ ತನ್ನ ಪತ್ನಿಗೆ ಟಾರ್ಚರ್ ನೀಡುತ್ತಿದ್ದಾರೆ. ಇವನನ್ನು ನೋಡಿ ವೀಕ್ಷಕರು ಸೈಕೋ ಜಯಂತ್ ನೆನಪು ಮಾಡುತ್ತಿದ್ದಾರೆ.

ಇವ್ನು ಲಕ್ಷ್ಮಿ ನಿವಾಸ ಜಯಂತ್ ಅವ್ರು ತಮ್ಮ ಅನ್ಸುತ್ತೆ

ಜಯಂತ ಒಬ್ನೇ ಸೈಕೋ ಅಂತ ತಿಳ್ಕೊಂಡಿದ್ದೆ ಇಲ್ಲಪ್ಪ ಸೈಕೋ ಇದಾನಲ್ಲಪ್ಪ ಇವನ್ಯಾರು

ಜೀ ಕನ್ನಡ ಅವರಿಗಿಂತ ನಾವೇನು ಕಮ್ಮಿ ಇಲ್ಲ ಅಂತ ಇವ್ರು ಸೈಕೋ ನ ಕರಿಸಿದ್ರು, ಆದ್ರೆ ಯಾರೂ ಜಯಂತ್ ನ ಬೀಟ್ ಮಾಡೋದಕ್ಕೆ ಆಗಲ್ಲ.

ಪವಿತ್ರ ಬಂಧನ ಧಾರಾವಾಹಿಯಲ್ಲಿ ದೇವದತ್ ದೇಶಮುಖ್ ಅಣ್ಣನಾಗಿ ದೊಡ್ಡಮ್ಮ ಹೇಳಿದ್ದನ್ನೆಲ್ಲಾ ಮಾಡುತ್ತಾ, ಅವರ ಮುಂದೆ ಒಳ್ಳೆಯವನಂತೆ ನಟಿಸುತ್ತಾ, ಹಿಂದೆ ಹೆಂಡತಿ ಕೈಯಲ್ಲಿ ಕರ್ಪೂರ ಇಟ್ಟು ಹಿಂಸೆ ನೀಡುವಂತಹ ಸೈಕೋ ಗುಣ ರಜತ್ ನದು. ಮುಂದೆ ಏನೇನು ಮಾಡ್ತಾರೆ ಅನ್ನೋದನ್ನು ನೋಡಬೇಕು.

ಅಂದ ಹಾಗೆ ರಜತ್ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ಈ ನಟ ಗೋಕುಲ್ ಅಯ್ಯರ್. ಇವರು ರಂಗಭೂಮಿ ಕಲಾವಿದೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ‘ಅಧೀರ’ ಎನ್ನುವ ಭೂತದ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ರಜತ್ ಸೈಕೋ ಪಾತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಅದ್ಭುತ ನಟ ಎನ್ನುತ್ತಿದ್ದಾರೆ.

Source link

Leave a Reply

Your email address will not be published. Required fields are marked *