Headlines

ವ್ಯಾಲೆಂಟೈನ್‌ ಡೇಗೆ ಯಶ್‌ಗೆ (‌yash) ಕ್ಯೂಟ್‌ ಆಗಿ ಹಾರೈಸಿದ ರಾಧಿಕಾ ಪಂಡಿತ್ (radhika pandit)! | Cute Wish Of Radhika Pandit To Ysha For Valentines Day Bni

ವ್ಯಾಲೆಂಟೈನ್‌ ಡೇಗೆ ಯಶ್‌ಗೆ (‌yash) ಕ್ಯೂಟ್‌ ಆಗಿ ಹಾರೈಸಿದ ರಾಧಿಕಾ ಪಂಡಿತ್ (radhika pandit)! | Cute Wish Of Radhika Pandit To Ysha For Valentines Day Bni



ವ್ಯಾಲೆಂಟೈನ್‌ ಡೇಗೆ ಯಶ್‌ಗೆ (‌yash) ಕ್ಯೂಟ್‌ ಆಗಿ ಹಾರೈಸಿದ ರಾಧಿಕಾ ಪಂಡಿತ್ (radhika pandit)! | Cute Wish Of Radhika Pandit To Ysha For Valentines Day Bni

ವ್ಯಾಲೆಂಟೈನ್‌ ಡೇಯಂದು, ನಟಿ ರಾಧಿಕಾ ಪಂಡಿತ್ (radhika pandit) ತಮ್ಮ ಪತಿ ಯಶ್‌ರ (yash) ತ್ಯಾಗ ಮತ್ತು ಶ್ರಮವನ್ನು ಶ್ಲಾಘಿಸಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಪ್ರೇಮಕಥೆಯೂ ಸಕತ್‌ ಕ್ಯೂಟ್‌ ಆಗಿಯೇ ಇದೆ.

ರಾಧಿಕಾ ಪಂಡಿತ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಜೋಡಿ ಸೋಶಿಯಲ್‌ ಮೀಡಿಯಾದಲ್ಲೂ ಜನಪ್ರಿಯ. ಪರಸ್ಪರರ ಹುಟ್ಟುಹಬ್ಬ, ಮ್ಯಾರೇಜ್‌ ಆನಿವರ್ಸರಿ ಇತ್ಯಾದಿಗಳಿಗೆ ಹಾಕಿಕೊಳ್ಳೋ ಪೋಸ್ಟ್‌ಗಳು ವೈರಲ್‌ ಆಗುತ್ತವೆ. ಇದೀಗ ವ್ಯಾಲೆಂಟೈನ್‌ ಡೇ ಸಂದರ್ಭದಲ್ಲಿ ಗಂಡ ಯಶ್‌ಗೆ ನಟಿ ರಾಧಿಕಾ ಪಂಡಿತ್‌ ಹಾರೈಸಿದ ಕ್ಯೂಟ್‌ ಕ್ಯೂಟ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಇದೀಗ ವೈರಲ್‌ ಆಗ್ತಿದೆ. ಅದರ ಜೊತೆಗೆ, ಯಾವುದೋ ಕಡಲ ತೀರದ ರೆಸಾರ್ಟ್‌ನಲ್ಲಿ ಇಬ್ಬರೂ ಕುಳಿತು ಬೀಚ್‌ ನೋಟವನ್ನು ನೋಡುತ್ತಿರುವ ಹಾಗೂ ಪಟಾಕಿಗಳ ಸಂಭ್ರಮ ಎಂಜಾಯ್‌ ಮಾಡುತ್ತಿರುವ ಫೋಟೋ ಕೂಡ ಶೇರ್‌ ಮಾಡಿಕೊಂಡಿದ್ದಾರೆ.

“ಯಾರೂ ನೋಡುತ್ತಿಲ್ಲವೆಂಬಂತೆ ನಾನು ನೃತ್ಯ ಮಾಡಲು ಸಾಧ್ಯವಾಗುವಂತೆ ಮಾಡಿದ ಆ ವ್ಯಕ್ತಿಗೆ… ನಿನ್ನ ಕಣ್ಣುಗಳಲ್ಲಿ ಕಾಣಿಸುವ ದಣಿವು ನನಗೆ ಕಾಣುತ್ತದೆ. ಇನ್ನಾರಿಗೂ ಗೊತ್ತಾಗದ ನಿನ್ನ ತ್ಯಾಗಗಳು ನನಗೆ ತಿಳಿದಿವೆ. ದೂರು ಹೇಳದೆ ನೀನು ಹೊತ್ತುಕೊಂಡು ನಡೆಯುವ ಆ ದೀರ್ಘ ದಿನಗಳ ಭಾರವನ್ನು ನಾನು ಅನುಭವಿಸುತ್ತೇನೆ. ಇದು ನಮಗಾಗಿ ಎನ್ನುವುದು ನನಗೆ ಗೊತ್ತು. ಪ್ರತಿ ದಿನವೂ ನನ್ನನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಧನ್ಯವಾದಗಳು. ಹ್ಯಾಪಿ ವ್ಯಾಲೆಂಟೈನ್ಸ್ ಡೇ, ನನ್ನ ಜೊತೆ ಎಂದೆಂದಿಗೂ ಇರುವವನೇʼʼ ಎಂದು ರಾಧಿಕಾ ಭಾವನಾತ್ಮಕ ಪೋಸ್ಟೊಂದನ್ನು ಹಾಕಿದ್ದಾರೆ.

ಇವರ ಪ್ರೇಮಕತೆಯೂ ಕ್ಯೂಟ್

ಇವರಿಬ್ಬರ ಪ್ರೇಮಕಥೆ ಸಕತ್‌ ಕ್ಯೂಟ್‌ ಆಗಿದೆ. 2004ರಲ್ಲಿ ‘ನಂದಗೋಕುಲ’ ಸೀರಿಯಲ್​ ಸಲುವಾಗಿ ಯಶ್​ ರಾಧಿಕಾ ಭೇಟಿಯಾದರು. ನಂತರ ಡ್ರಾಮಾ ಮತ್ತು ‘ಮೊಗ್ಗಿನ ಮನಸ್ಸು’ ಸಿನಿಮಾಗಳಲ್ಲಿ ತೆರೆಹಂಚಿಕೊಂಡರು. ಈ ಪ್ರಾಜೆಕ್ಟ್​ಗಳಿಗೆ ಯಶ್ ರಾಧಿಕಾ ಮೊದಲ ಆಯ್ಕೆ ಆಗಿರಲಿಲ್ಲ. ಕಾಕತಾಳೀಯವಾಗಿ ಹಲವು ಪ್ರಾಜೆಕ್ಟ್​​ಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂತು. ಇಬ್ಬರ ನಡುವೆ ಉತ್ತಮ ಸ್ನೇಹ ಆಯಿತು. ನಂತರ, ಯಶ್​ ಅವರು ರಾಧಿಕಾ ಅವರಿಗೆ ಫೋನ್​​​ನಲ್ಲೇ ಪ್ರಪೋಸ್ ಮಾಡಿದ್ದರು. ಕೊಂಚ ಸಮಯ ತೆಗೆದುಕೊಂಡ ರಾಧಿಕಾ, ಅಂತಿಮವಾಗಿ ಸಮ್ಮತಿಸಿದರು.

ನಿಜಜೀವನದಲ್ಲಿ ಸಖತ್ ಸಿಂಪಲ್​ ಆಗಿ ಪ್ರಪೋಸ್ ಮಾಡಿದ್ದ ಯಶ್​, ‘ಮಿಸ್ಟರ್ ಆ್ಯಂಡ್​ ಮಿಸಸ್ ರಾಮಾಚಾರಿ’ ಚಿತ್ರದಲ್ಲಿ ಸ್ಪೆಷಲ್​ ಪ್ರಪೋಸಲ್​ ಸೀನ್​ ಇರಿಸಿದ್ದರು. ಈ ವಿಚಾರವನ್ನು ಸ್ವತಃ ಯಶ್ ಅವರೇ ಮಾಧ್ಯಮಗಳೆದುರು ಹೇಳಿಕೊಂಡಿದ್ದರು. ಈ ಸಿನಿಮಾ ಸೀನ್​ ಸಖತ್​ ಸದ್ದು ಮಾಡಿ, ಅಭಿಮಾನಿಗಳ ಪ್ರೀತಿ ಸ್ವೀಕರಿಸಿತ್ತು.

7 ವರ್ಷಗಳ ಪ್ರೀತಿ ಬಳಿಕ ಗೋವಾದ ಕಡಲ ತೀರದಲ್ಲಿ 2016ರಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡರು. 2016ರ ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ರೇಸ್​ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್​ ಹೋಟೆಲ್​ನಲ್ಲಿ ಅರುಣ್​ ಸಾಗರ್ ಕಲ್ಪನೆಯಲ್ಲಿ ರೆಡಿಯಾದ ಅದ್ಭುತ ಮಂಟಪದಲ್ಲಿ ಹಾರ ಬದಲಾಯಿಸಿಕೊಂಡಿದ್ದರು. ಪ್ಯಾಲೆಸ್​​ ಗ್ರೌಂಡ್​ನಲ್ಲಿ ಅತಿ ದೊಡ್ಡ ಸ್ಟೇಜ್​ ನಿರ್ಮಾಣ ಮಾಡಿ ಅಭಿಮಾನಿಗಳನ್ನೂ ಭೇಟಿ ಆಗಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳಿಗೂ ಭರ್ಜರಿ ಭೋಜನದ ವ್ಯವಸ್ಥೆಯಿತ್ತು.

ಮಾದರಿ ದಂಪತಿಗೆ ಐರಾ ಮತ್ತು ಯಥರ್ವ್ ಎಂಬಿಬ್ಬರು ಮುದ್ದಾದ ಮಕ್ಕಳಿದ್ದಾರೆ. ಕಳೆದ ಡಿಸೆಂಬರ್ 9ರಂದು ಜೋಡಿ ತಮ್ಮ 9ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಯಶ್​ ರಾಧಿಕಾ ಫೋಟೋಗಳು ಈಗಾಗಲೇ ಅಭಿಮಾನಿಗಳಿಂದ ಅಪಾರ ಪ್ರೀತಿ ಸ್ವೀಕರಿಸಿದೆ.

ಸದ್ಯ ‘ಟಾಕ್ಸಿಕ್’ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಹಿಟ್ ಆಗಲಿ ಎಂಬುದು ಅಭಿಮಾನಿಗಳ ಕೋರಿಕೆ. ಆ ಬಳಿಕ ‘ರಾಮಾಯಣ’ ಸಿನಿಮಾ ಕೂಡ ರಿಲೀಸ್ ಆಗಲಿದೆ. ಅವರ ಸಿನಿಮಾ ವೃತ್ತಿಜೀವನಕ್ಕೆ ರಾಧಿಕಾ ಬೆಂಬಲವಾಗಿ ನಿಂತಿದ್ದಾರೆ.



Source link

Leave a Reply

Your email address will not be published. Required fields are marked *