ಬೆಂಗಳೂರು ಬೇಕರಿಯ ದುರಹಂಕಾರ: 2 ಸಾವಿರ ಟೇಬಲ್‌ ಚಾರ್ಜ್‌ ಪ್ರಶ್ನಿಸಿದ ಗ್ರಾಹಕನಿಗೆ ‘ಬಡವ’ ಎಂದು ನಿಂದಿಸಿದ ಸಿಬ್ಬಂದಿ! | Bask Bakery Koramangala Controversy Customer Poor Remark Table Charge Viral San

ಬೆಂಗಳೂರು ಬೇಕರಿಯ ದುರಹಂಕಾರ: 2 ಸಾವಿರ ಟೇಬಲ್‌ ಚಾರ್ಜ್‌ ಪ್ರಶ್ನಿಸಿದ ಗ್ರಾಹಕನಿಗೆ ‘ಬಡವ’ ಎಂದು ನಿಂದಿಸಿದ ಸಿಬ್ಬಂದಿ! | Bask Bakery Koramangala Controversy Customer Poor Remark Table Charge Viral San



ಬೆಂಗಳೂರು ಬೇಕರಿಯ ದುರಹಂಕಾರ: 2 ಸಾವಿರ ಟೇಬಲ್‌ ಚಾರ್ಜ್‌ ಪ್ರಶ್ನಿಸಿದ ಗ್ರಾಹಕನಿಗೆ ‘ಬಡವ’ ಎಂದು ನಿಂದಿಸಿದ ಸಿಬ್ಬಂದಿ! | Bask Bakery Koramangala Controversy Customer Poor Remark Table Charge Viral San

Bask Bakery Koramangala Row: Customer Called ‘Poor’ Over Table Fee Query ಬೇಕರಿಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಗ್ರಾಹಕರೊಬ್ಬರು ಕಾಮೆಂಟ್‌ ಮಾಡಿ ಅಲ್ಲಿನ ಅನುಭವವನ್ನು ಟೀಕಿಸಿದ್ದರು. ಅಲ್ಲಿನ 2 ಸಾವಿರ ರೂಪಾಯಿ ಟೇಬಲ್‌ ಶುಲ್ಕವನ್ನು ಅವರು ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರು (ಫೆ.14): ಉದ್ಯಾನನಗರಿಯ ಕೋರಮಂಗಲದಲ್ಲಿರುವ ಪ್ರಮುಖ ಪಾಯಿಂಟ್‌ಗಳಲ್ಲಿ ಒಂದಾದ ಬಾಸ್ಕ್‌ ಬೇಕರಿ, ತನ್ನ ಹೈ-ಟೀ ಸರ್ವೀಸ್‌ ಹಾಗೂ ಅತಿಯಾದ ಬೆಲೆಯ ಕಾರಣದಿಂದಾಗಿಸ ಸೋಶಿಯಲ್‌ ಮೀಡಿಯಾ ವೇದಿಕೆಯಲ್ಲಿ ಗ್ರಾಹಕರೊಂದಿಗೆ ನಡೆದ ವಾಗ್ವಾದದ ಬಳಿಕ ನೆಟ್ಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ. ಬೇಕರಿಯ ಗ್ರಾಹಕರೊಬ್ಬರು ಬಾಸ್ಕ್‌ ಬೇಕರಿಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಮಾಡಿದ ಕಾಮೆಂಟ್‌ ಒಂದರಿಂದ ಈ ವಿವಾದ ಆರಂಭವಾಗಿದೆ. ಬೇಕರಿಯಲ್ಲಿನ ಅನುಭವನ್ನು ಟೀಕಿಸಿದ ಗ್ರಾಹಕ, 2 ಸಾವಿರ ರೂಪಾಯಿ ಟೇಬಲ್‌ ಚಾರ್ಜ್‌ಅನ್ನೂ ಪ್ರಶ್ನೆ ಮಾಡಿದ್ದಾರೆ ‘ಎಂಥಾ ಕೆಟ್ಟ ಅನುಭವ ಎಂದರೆ, ಒಂದು ಟೇಬಲ್‌ಗಾಗಿ ಇಲ್ಲಿ 2 ಸಾವಿರ ರೂಪಾಯಿ ಪಾವತಿ ಮಾಡಬೇಕು? ಇದು ಓವರ್‌ಹೈಪ್‌’ ಎಂದು ಗ್ರಾಹಕ ಕಾಮೆಂಟ್‌ ಮಾಡಿದ್ದ.

ಇದಕ್ಕೆ ಕಾಮೆಂಟ್‌ ಮಾಡಿದ್ದ ಬಾಸ್ಕ್‌ ಬೇಕರಿಯ ಟೀಮ್‌, ‘ಇಲ್ಲಿನ ಅನುಭವವೇ 16 ಸಾವಿರ ರೂಪಾಯಿ ಮೌಲ್ಯದ್ದು, ಆದರೆ, ನಮಗಂತೂ ಗೊತ್ತಿದೆ ಇದನ್ನು ಭರಿಸುವ ಶಕ್ತಿ ನಿಮ್ಮಲ್ಲಿಲ್ಲ. ಇಲ್ಲಿನ ಅನುಭವ ಎಷ್ಟು ಐಷಾರಾಮಿ ಅನ್ನೋದನ್ನು ಒಬ್ಬ ಬಡ ವ್ಯಕ್ತಿ ಅನುಭವಿಸಲಾರ ಅನ್ನೋದು ನಮಗೆ ಗೊತ್ತಿದೆ. ಭಾರೀ ಜನಸಮೂಹಕ್ಕಾಗಿ ಇರುವ ವ್ಯವಸ್ಥೆ ಇದಲ್ಲ ಗಣ್ಯರಾಗಿ ಇರುವಂಥದ್ದು’ ಎಂದು ಬರೆದುಕೊಂಡಿತ್ತು.

ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ಗ್ರಾಹಕ, ನೀವು ಹೇಳುತ್ತಿರುವ ‘NICHE’ 300 ಚದರ ಅಡಿ ವಿಸ್ತೀರ್ಣದ ಬೇಕರಿಯ ಕೆಳಗಡೆ ಇದೆ. ನೀವು 2000 ಪಾವತಿಸದ ಹೊರತು ಅದು ನಿಮ್ಮನ್ನು ಒಳಗೆ ಬಿಡುವುದಿಲ್ಲ, ಮುರಿದ ಲಿಫ್ಟ್ ಮತ್ತು ದುರಹಂಕಾರಿ ಸಿಬ್ಬಂದಿಯನ್ನು ಹೊಂದಿರುವ ಒಂದು ಕಳಪೆ ಕಟ್ಟಡದಲ್ಲಿ ನಿಮ್ಮ ಬೇಕರಿ ಇದೆ. ಬಹುಶಃ ಗಣ್ಯರು ಕೂಡ ಈ ಅನುಭವ ಮೆಚ್ಚುತ್ತಾರಾ? ಅನ್ನೋ ವಿಚಾರದ ಬಗ್ಗೆ ನಾನು ಬಾಬಿ ಕಟ್ಟುತ್ತೇನೆ. ಯಾಕೆಂದರೆ, ಇದು ಅಷ್ಟೊಂದು ಅಸುರಕ್ಷಿತ..’ ಎಂದು ಕಾಮೆಂಟ್‌ ಮಾಡಿದ್ದಾರೆ.

ಇನ್ನುಗ್ರಾಹಕ ಹಾಗೂ ಬೇಕರಿ ನಡುವಿನ ಚರ್ಚೆಗಳ ಸ್ಕ್ರೀನ್‌ಶಾಟ್‌ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಬಾಸ್ಕ್‌ ಬೇಕರಿಯ ಸೋಶಿಯಲ್‌ ಮೀಡಿಯಾ ಅಕೌಂಟ್‌ ನಿಭಾಯಿಸುವ ವ್ಯಕ್ತಿಯ ದುರಂಹಕಾರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆತನ ಟೋನ್‌ ತಿರಸ್ಕಾರ ಹಾಗೂ ಅಸಭ್ಯ ಎಂದು ಹೇಳಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಬೆಲೆ ಮತ್ತು ಆಹಾರದ ಗುಣಮಟ್ಟದ ಕುರಿತಾದ ಪ್ರಶ್ನೆಗಳಿಗೆ ಬೇಕರಿಯ ಪ್ರತಿಕ್ರಿಯೆಗಳು ಅತ್ಯಂತ ವ್ಯಂಗ್ಯವಾಗಿಯೇ ಇರುತ್ತದೆ ಎಂದು ಯೂಸರ್‌ ಒಬ್ಬರು ಆರೋಪಿಸಿದ್ದಾರೆ.

ಸ್ಪಷ್ಟೀಕರಣ ನೀಡಿದ ಬಾಸ್ಕ್‌ ಬೇಕರಿ

ಹೆಚ್ಚುತ್ತಿರುವ ಟೀಕೆಗಳ ನಂತರ, ಬಾಸ್ಕ್ ಬೇಕರಿ ಈ ವಿಷಯವನ್ನು ಉಲ್ಲೇಖಿಸಿ Instagram ನಲ್ಲಿ ಹೇಳಿಕೆ ನೀಡಿದೆ. ಪೋಸ್ಟ್‌ನಲ್ಲಿ, ವ್ಯವಹಾರವು ತನ್ನ ಪ್ರತಿಕ್ರಿಯೆಗಳು ದೃಢನಿಶ್ಚಯದಿಂದ ಕೂಡಿವೆ ಎಂದು ಒಪ್ಪಿಕೊಂಡಿತು ಆದರೆ ಅದರ ಕಡೆಗೆ ನಿರ್ದೇಶಿಸಲಾದ ಕೆಲವು ಕಾಮೆಂಟ್‌ಗಳು ಅಗೌರವ ಮತ್ತು ಅನ್ಯಾಯದಿಂದ ಕೂಡಿವೆ ಎಂದು ನಂಬುವುದಾಗಿ ಹೇಳಿದೆ.ಬೇಕರಿಯು ವ್ಯವಹಾರದ ಮೂಲವನ್ನು ಕೂಡ ವಿವರಿಸಿದೆ, ಅದರ ಆರಂಭಿಕ ಹಂತಗಳಲ್ಲಿ ಸಂಸ್ಥಾಪಕರು ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಪ್ರತಿಯೊಂದು ವಸ್ತುವನ್ನು ಸ್ವತಃ ತಯಾರಿಸುತ್ತಿದ್ದರು ಎಂದು ವಿವರಿಸಿದರು. ನಮ್ಮ ಬೇಕರಿಯ ಅತ್ಯಂತ ಸ್ಪೆಷಲ್‌ ಆದ ಚೀಸ್‌ಕೇಕ್‌ಅನ್ನು ಮಾಡಲು ಹಲವಾರು ಹುಡುಕಾಟ ಹಾಗೂ ಪಾಕ ವಿಧಾನಗಳನ್ನು ಸಂಸ್ಕರಿಸಲು ದೊಡ್ಡ ಪ್ರಮಾಣದ ಸಮಯ ಮೀಸಲಿಟ್ಟಿದ್ದೆವು ಎಂದು ಹೇಳಿದೆ.



Source link

Leave a Reply

Your email address will not be published. Required fields are marked *