ಕನ್ನಡದ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಡಿಂಪಲ್ ಕ್ವೀನ್ ಸಿನಿಮಾ ಖ್ಯಾತಿಯ ನಟಿ ರಚಿತಾ ರಾಮ್ ಅವರು ಈ ವರ್ಷ ಮದುವೆ ಆಗ್ತೀನಿ ಎಂದು ಅನೇಕ ಬಾರಿ ಹೇಳಿದ್ದರು. ಈಗ ಐ ಲವ್ ಯು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ರಚಿತಾ ರಾಮ್ ಅವರು ಗೌಡ್ರ ಹುಡುಗನನ್ನು ಮದುವೆ ಆಗ್ತೀನಿ ಎಂದು ಹೇಳಿದ್ದಾರೆ. ಸಾಕಷ್ಟು ಬಾರಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದರು.

ರಚಿತಾ ರಾಮ್ ಅವರು ಮದುವೆ ಬಗ್ಗೆ ಮಾತನಾಡಿದ್ದು, “ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ. ಆದಷ್ಟು ಬೇಗ ಮದುವೆ ಆಗ್ತೀನಿ” ಎಂದು ಹೇಳಿದ್ದಾರೆ.

ಪ್ರೇಮಿಗಳ ದಿನದಂದು ರಚಿತಾ ರಾಮ್ ಅವರು, “ಏನ್ ಗೊತ್ತಾ? ಐ ಲವ್ ಯು, ಅಷ್ಟೇ” ಎಂದು ಹೇಳಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಮದುವೆ ಆಗ್ತೀನಿ ಎಂದಿರುವ ರಚಿತಾ ರಾಮ್ ಅವರು ಹುಡುಗನನ್ನು ಕೂಡ ಹುಡುಕಿಕೊಂಡ್ರಾ ಎಂಬ ಪ್ರಶ್ನೆ ಕೂಡ ಎದ್ದಿದೆ.

ಅಂದಹಾಗೆ ರಚಿತಾ ರಾಮ್ ಪೋಸ್ಟ್ ನೋಡಿ ಅನೇಕರು ಕಾಲೆಳೆದಿದ್ದಾರೆ. “ನಮ್ಮ ಮನೆಯಲ್ಲಿ ಬೈತಾರೆ, ನನ್ನ ಹೆಂಡ್ತಿ ಒಪ್ಪಲ್ಲ, ನಂದು ಮದುವೆ ಆಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

Source link
ಏನ್ ಗೊತ್ತಾ? I LoveYou ಅಷ್ಟೇ…; ನಟಿ ರಚಿತಾ ರಾಮ್ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!