ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ Aase Serial ಮೀನಾ… ಜೀವನದ ಹೊಸ ಅಧ್ಯಾಯ ಶುರು!

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ Aase Serial ಮೀನಾ… ಜೀವನದ ಹೊಸ ಅಧ್ಯಾಯ ಶುರು!

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ Aase Serial ಮೀನಾ… ಜೀವನದ ಹೊಸ ಅಧ್ಯಾಯ ಶುರು!

Aase serial Actress: ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ‘ಆಸೆ’ ಧಾರಾವಾಹಿಯಲ್ಲಿ ನಾಯಕಿ ಮೀನಾ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಡಿಎಸ್ ಇದೀಗ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಡಿಎಸ್. ಇವರು ‘ಪುಣ್ಯವತಿ’ ಮೂಲಕ ಎಂಟ್ರಿ ಕೊಟ್ಟು ಇದೀಗ ‘ಆಸೆ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಧಾರಾವಾಹಿಯಲ್ಲಿ ಹೂ ಮಾರುವ ಹುಡುಗಿ, ಸೂರ್ಯನ ಹೆಂಡ್ತಿ ಮೀನಾ ಆಗಿ ಪ್ರಿಯಾಂಕಾ ಜನಪ್ರಿಯತೆ ಪಡೆದಿದ್ದಾರೆ. ಮೀನಾ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

ಇದೀಗ ಮೀನಾ ಪಾತ್ರಧಾರಿ ಪ್ರಿಯಾಂಕಾ ಹೊಸ ಉದ್ಯಮವನ್ನು ಶುರು ಮಾಡಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ತಿಳಿಸಿದ್ದಾರೆ. ಅಷ್ಟಕ್ಕೂ ನಟಿ ಇದೀಗ ಆರಂಭಿಸಿದ ಉದ್ಯಮ ಯಾವುದು ಗೊತ್ತಾ? ಈ ಕುರಿತು ನಟಿ ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ.

ನಮಸ್ಕಾರ ಎಲ್ಲರಿಗೂ ನಿಮಗೆಲ್ಲರಿಗೂ ನಾನು ಗುಡ್ ನ್ಯೂಸ್ ಹೇಳಲು ಬಂದಿದ್ದೀನಿ. ಎಲ್ಲರಿಗೂ ಥ್ಯಾಂಕ್ಯೂ ಸೋ ಮಚ್. ಇಲ್ಲಿವರೆಗೂ ನೀವು ಕೊಟ್ಟಿರುವ ಆಶೀರ್ವಾದ ಪ್ರೀತಿಯಿಂದಲೇ ನಾನು ಇಲ್ಲಿವರೆಗೂ ಬಂದಿರೋದು. ನೀವೆಲ್ಲರೂ ನನ್ನ ಜೊತೆ ಇದ್ದೀರಿ ಎನ್ನುವ ಭರವಸೆಯಿಂದ, ನಾನು ಹೊಸ ಹೆಜ್ಜೆ ಇಡ್ತಾ ಇದ್ದೀನಿ, ಹೊಸ ಅಧ್ಯಾಯಕ್ಕೆ ಹೋಗ್ತಾ ಇದ್ದೀನಿ.

ಇದೆಲ್ಲಾ ನಿಮಗೆ ಚಿಕ್ಕದು ಅನಿಸಬಹುದು, ಆದರೆ ನನಗೆ ಇದು ತುಂಬಾ ಭಾವನಾತ್ಮಕವಾಗಿದೆ. ಎಲ್ಲಾ ಹುಡುಗಿಯರಿಗೂ ತಮ್ಮದೇ ಆದ ಬ್ಯುಸಿನೆಸ್ ಮಾಡಬೇಕು ಎಂದು ಹಂಬಲ ಇದೆ. ನಾನು ನನ್ನ ಕನಸು ನನಸು ಮಾಡಲು ಹೊರಟಿದ್ದೀನಿ, ಅದನ್ನು ಇವತ್ತು ನಿಮ್ಮ ಜೊತೆ ಶೇರ್ ಮಾಡ್ತೀನಿ.ಎನ್ನುತ್ತಾ ತಾವು ಸೀರೆ ಬ್ಯುಸಿನೆಸ್ ಶುರು ಮಾಡುವುದಾಗಿ ತಿಳಿಸಿದ್ದಾರೆ.

ನಟಿ ಪ್ರಿಯಾರ ಎನ್ನುವ ಹೆಸರಿನಲ್ಲಿ ಆನ್ ಲೈನ್ ಸೀರೆ ಬ್ಯುಸಿನೆಸ್ ಶುರು ಮಾಡಿದ್ದು, ಈ ಕುರಿತು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಜೊತೆಗೆ ಎಲ್ಲಾ ವೀಕ್ಷಕರ, ಅಭಿಮಾನಿಗಳ ಸಹಕಾರ ಬೇಕು, ಮ್ಮೆಲರ ಆಶ್ರೀವಾದದ ಜೊತೆ ಹೊಸ ಅಧ್ಯಾಯ. ನಿಮ್ಮ ಪ್ರೀತಿ ಸದಾಕಾಲ ನನ್ನ ಮೇಲೆ ಹೀಗೆ ಇರಲಿ ಎಂದು ಭಾವಿಸುತ್ತಿನಿ ಎಂದು ಹೇಳಿದ್ದಾರೆ ಪ್ರಿಯಾಂಕ.

ಇನ್’ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡುತ್ತಾ ಜನಪ್ರಿಯತೆ ಪಡೆದ ಪ್ರಿಯಾಂಕಾ, ತಮ್ಮ ಕರಿಯರ್ ಆರಂಭಿಸಿದ್ದು, ಕಲರ್ಸ್ ಕನ್ನಡದ ‘ಪುಣ್ಯವತಿ’ ಧಾರಾವಾಹಿ ಮೂಲಕ, ಆದರೆ ಆ ಸೀರಿಯಲ್ ಹೆಚ್ಚು ಸಮಯ ಓಡಲಿಲ್ಲ. ನಂತರ ‘ಆಸೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಹ ಪಡೆದಿದ್ದಾರೆ ಪ್ರಿಯಾಂಕಾ.

Source link

Leave a Reply

Your email address will not be published. Required fields are marked *