Illicit SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಏನೂ ಅರಿಯದ ಗಂಡನ ಕತೆ ಕ್ಲೋಸ್ | Bengal Booth Election Official Kills Lovers Husband After Calling Him Over On Sir Pretext

Illicit SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಏನೂ ಅರಿಯದ ಗಂಡನ ಕತೆ ಕ್ಲೋಸ್ | Bengal Booth Election Official Kills Lovers Husband After Calling Him Over On Sir Pretext



Illicit SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಏನೂ ಅರಿಯದ ಗಂಡನ ಕತೆ ಕ್ಲೋಸ್ | Bengal Booth Election Official Kills Lovers Husband After Calling Him Over On Sir Pretext

SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಮುಂದಿನ ಸಲ್ಲಾಪಕ್ಕೆ ಗಂಡ ಅಡ್ಡಿಯಾಗಬಹುದು ಎಂದು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಕರೆಯಿಸಿ ಹತ್ಯೆ ಮಾಡಿದ ಚುನಾವಣಾಧಿಕಾರಿ ಮಹಾ ಷಡ್ಯಂತ್ರ ಬಯಲಾಗಿದೆ. 

ಕೋಲ್ಕತಾ (ಫೆ.14) ಪತಿಗೆ ಗೊತ್ತಿಲ್ಲದಂತೆ ಬೂತ್ ಲೆವೆಲ್ ಆಫೀಸರ್ ಜೊತೆ ಪತ್ನಿಯ ಕುಚ್ ಕುಚ್ ಶುರುವಾಗಿದೆ. ಇತ್ತ ಚುನಾವಣಾಧಿಕಾರಿ ಮತದಾರ ಪಟ್ಟಿ ತೀವ್ರ ಪರಿಷ್ಕರಣೆ (SIR ) ನೆಪದಲ್ಲಿ ಪದೇ ಪದೇ ಲವರ್ ಮನೆಗೆ ತೆರಳಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾನೆ. ಸರಸದ ನಡುವೆ ಲವರ್‌ನಿಂದ ಪತಿ ಬಂದರೆ, ಪತಿಗೆ ಗೊತ್ತಾದರೆ ಎಂದು ಹಲವು ಬಾರಿ ಹೇಳಿದ್ದಾಳೆ. ಇತ್ತ ಅದೆಲ್ಲಾ ನಾನು ನೋಡಿಕೊಳ್ಳುತ್ತೇನೆ ಎಂದು ಆಟ ಮುಂದುವರಿಸಿದ ಚುನಾವಣಾಧಿಕಾರಿ, ಕೊನೆಗೆ ಲವರ್ ಪತ್ನಿಯನ್ನು ಮತದಾರರ ಪಟ್ಟಿ ಪರಿಷ್ಕರಣೆ ದಾಖಲೆ ನಮೂದಿಸಲು ಕರೆಯಿಸಿ ಹತ್ಯೆ ಮಾಡಿ ಭೀಕರ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. 30 ವರ್ಷದ ನಾಸಿರ್ ಅಲಿ ಶ್ರಮಿಕನಾಗಿದ್ದ. ಮದುವೆಯಾಗಿ ಒಂದು ವರ್ಷಾಗಿದೆ ಅಷ್ಟೆ. ಪ್ರತಿ ದಿನ ಕೆಲಸಕ್ಕೆ ತೆರಳಿ ಸಂಸಾರ ನೋಡಿಕೊಳ್ಳುತ್ತಿದ್ದ. ಆದರೆ ಈ ನಾಸಿರ್ ಆಲಿ ಮದುವೆಯಾದ ಮಹಿಳೆ ಜೊತೆ ಬೂತ್ 24 ನಾರ್ತ್ ಪರಗಣದ ಬೂತ್ ಲೆವೆಲ್ ಆಫೀಸರ್ ರಿಜ್ವಾನ್ ಹಸನ್ ಮೊಂಡಲ್‌ಗೆ ಪ್ರೀತಿ ಇತ್ತು. ಲವರ್ ನಾಸಿರ್ ಆಲಿ ಮದುವೆಯಾದ ಬಳಿಕವೂ ಪ್ರೀತಿ ಇರಲಿಲ್ಲ, ಅಕ್ರಮ ಸಂಬಂಧ ಮುಂದುವರಿದಿತ್ತು. ಈಗ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ತೀವ್ರವಾಗಿ ನಡೆಯುತ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಚುನಾವಣಾಧಿಕಾರಿ ಪದೇ ಪದೇ SIR ನೆಪವೊಡ್ಡಿ ನಾಸಿರ್ ಮನೆಗೆ ತೆರಳುತ್ತಿದ್ದ. ನಾಸಿರ್ ಇಲ್ಲದ ಸಮಯ ನೋಡಿ ಮನೆಗೆ ತೆರಳಿ ಲವರ್ ಜೊತೆ ಕಳ್ಳ ಪೊಲೀಸ್ ಆಟವಾಡುತ್ತಿದ್ದ.

ಸರಸದ ವೇಳೆ ಪತಿಗ್ಗೆ ಪದೇ ಪದೇ ಉಲ್ಲೇಖಿಸಿದ ಲವರ್

ಸರಸದ ನಡುವೆ ಪತಿ ಆಗಮಿಸಿದರೆ,ಪತಿಗೆ ಗೊತ್ತಾದರೆ ಎಂದೆಲ್ಲಾ ಲವರ್ ಹೇಳಿದ್ದಾಳೆ. ಸರಸ ಮುಗಿಸಿ ಮರಳಿದ ಚುನಾವಣಾಧಿಕಾರಿ ಪ್ಲಾನ್ ಮಾಡಿದ್ದಾನೆ. ಲವರ್ ಗಂಡನೇ ಇಲ್ಲದಿದ್ದರೆ ಅಡ್ಡಿಯಾಗುವವರು ಯಾರು ಎಂದು ಯೋಚಿಸಿದ್ದಾನೆ. ಇದಕ್ಕಾಗಿ ತನ್ನ ಸಹಾಯಕ ಸಿಬ್ಬಂದಿ ಸಾಗರ್ ಗ್ಯಾನೆ ನೆರವು ಪಡೆದುಕೊಂಡಿದ್ದಾನೆ.

SIR ಭರ್ತಿ ಮಾಡಲು ಕರೆಯಿಸಿದ ಚುನಾವಣಾಧಿಕಾರಿ

ಲವರ್ ಗಂಡ ನಾಸಿರ್ ಆಲಿಯನ್ನು SIR ಭರ್ತಿ ಮಾಡಲು ಬಾಕಿ ಇದೆ. ಕೆಲ ದಾಖಲೆ ಬಗ್ಗೆ ಅನುಮಾನಗಳಿದೆ ಎಂದು ನಾಸಿರ್ ಆಲಿಗೆ ಕರೆ ಮಾಡಲಾಗಿದೆ. ಬಳಿಕ SIR ಭರ್ತಿ ಮಾಡಲು ಆಗಮಿಸುವಂತೆ ಸೂಚಿಸಲಾಗಿದೆ. ಇದರ ಹಿಂದಿನ ಮರ್ಮ ಅರಿಯದ ನಾಸಿರ್ ಆಲಿ ಚುನಾವಣಾಧಿಕಾರಿ ಬಳಿ ಬಂದಿದ್ದಾರೆ. ಆದರೆ ರಿಜ್ವಾನ್ ಹಸನ್ ಮೊಂಡಲ್ ಮೊದಲೇ ಪ್ಲಾನ್ ಮಾಡಿದ್ದ. ನಾಸಿರ್ ಅಲಿಯನ್ನು ಸಾಗರ್ ಗ್ಯಾನೆ ಸಹಾಯದಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಬಳಿಕ ಇಬ್ಬರು ಸೇರಿ ಹತ್ಯೆ ಮಾಡಿದ್ದಾರೆ. ದೇಹವನ್ನು ನಾಲ್ಕು ಪೀಸ್ ಮಾಡಿ ನಾಲೆಗೆ ಎಸೆದಿದ್ದಾನೆ.

ನಾಸಿರ್ ಅಲಿ ಪತ್ನಿಗೂ ಈ ವಿಚಾರ ಗೊತ್ತೇ ಇಲ್ಲ. ಪತಿ ಕಾಣುತ್ತಿಲ್ಲ ಎಂದು ನಾಸಿರ್ ಆಲಿ ಕುಟುಂಬಸ್ಥರು, ಪತ್ನಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇತ್ತ ನಾಸಿರ್ ಆಲಿ ಫೋನ್ ಟವರ್ ಲೋಕೇಶನ್ ಎಲ್ಲಾ ಪರಿಶೀಲಿಸಿದ್ದಾರೆ. ಕೊನೆಯ ಕರೆ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಚುನಾವಣಾಧಿಕಾರಿ ಮೇಲೆ ಅನುಮಾನ ಮೂಡಿದೆ. ನಾಸಿರ್ ಅಲಿ ಕೊನೆಯದಾಗಿ ಫೋನ್ ಆನ್ ಇದ್ದ ಸ್ಥಳದ ಮಾಹಿತಿ ಪಡೆದು ಪರಿಶೀಲಿಸಿದಾಗ ನಾಲೆಯಲ್ಲಿ ದೇಹದ ಭಾಗಗಳು ಪತ್ತೆಯಾಗಿದೆ. ಇತ್ತ ಇದೇ ಟವರ್ ಲೋಕೇಶನ್‌ನಲ್ಲಿ ಮೊಬೈಲ್ ಪರೀಶೀಲನೆ ನಡೆದಿದೆ. ಈ ವೇಳೆ ರಿಜ್ವಾನ್ ಹಸನ್ ಕುರುಹುಗಳು ಪತ್ತೆಯಾಗಿದೆ. ಪೊಲೀಸರು ನೇರವಾಗಿ ಚುನಾವಣಾಧಿಕಾರಿಗೆ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ. ಬೂತ್ ಲೆವೆಲ್ ಅಫೀಸ್ ರಿಜ್ವಾನ್ ಹಸನ್ ಮೊಂಡಲ್, ಸಹಾಯಕ ಸಿಬ್ಬಂದಿ ಸಾಗರ್ ಗ್ಯಾನೆ ಇಬ್ಬರೂ ಈ ಹತ್ಯೆ ಪ್ರಕರಣ ಸಂಬಂಧ ಅರೆಸ್ಟ್ ಆಗಿದ್ದಾರೆ.



Source link

Leave a Reply

Your email address will not be published. Required fields are marked *