What Happens When You Drink Turmeric Milk for 20 Days in your body health. ಅರಿಶಿನದಲ್ಲಿ ಆರೋಗ್ಯಕ್ಕೆ ಬೇಕಾದ ಅನೇಕ ಔಷಧೀಯ ಗುಣಗಳಿವೆ. 0 ದಿನಗಳ ಕಾಲ ಅರಿಶಿನ ಹಾಲು ಕುಡಿದರೆ ಕುಡಿದರೆ, ನೆಗಡಿಯಿಂದ ಹಿಡಿದು ನಿದ್ದೆಯವರೆಗಿನ ಹಲವು ಸಮಸ್ಯೆಗಳು ದೂರವಾಗುತ್ತವೆ.

ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಅರಿಶಿನದ ಹಾಲಿಗೆ ವಿಶೇಷ ಸ್ಥಾನವಿದೆ. ಇದನ್ನು 20 ದಿನಗಳ ಕಾಲ ತಪ್ಪದೇ ಕುಡಿದರೆ ಹಲವು ಲಾಭಗಳಿವೆ ಎನ್ನುತ್ತಾರೆ ತಜ್ಞರು. ಅರಿಶಿನದಲ್ಲಿರುವ ‘ಕರ್ಕ್ಯುಮಿನ್’ ಎಂಬ ಅಂಶವು ಶಕ್ತಿಯುತವಾದ ಆ್ಯಂಟಿ-ಇನ್‌ಫ್ಲಮೇಟರಿ ಮತ್ತು ಆ್ಯಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಹಾಲಿನೊಂದಿಗೆ ಅರಿಶಿನ ಸೇರಿಸಿದಾಗ, ಕರ್ಕ್ಯುಮಿನ್ ದೇಹಕ್ಕೆ ಚೆನ್ನಾಗಿ ಸೇರುತ್ತದೆ. 20 ದಿನಗಳ ಕಾಲ ಅರಿಶಿನ ಹಾಲು ಕುಡಿಯುವುದರಿಂದ ನೆಗಡಿ, ಕೆಮ್ಮು ಮತ್ತು ಇತರ ಸೋಂಕುಗಳಿಂದ ರಕ್ಷಣೆ ಸಿಗುತ್ತದೆ. ಅದರಲ್ಲೂ ವಾತಾವರಣ ಬದಲಾದಾಗ ಇದು ಔಷಧಿಯಂತೆ ಕೆಲಸ ಮಾಡುತ್ತದೆ.

ತಜ್ಞರ ಪ್ರಕಾರ, ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸುತ್ತವೆ. ಇದರ ಜೊತೆಗೆ, ಅರಿಶಿನದಲ್ಲಿರುವ ಆ್ಯಂಟಿ-ಇನ್‌ಫ್ಲಮೇಟರಿ ಗುಣಗಳು ಸ್ನಾಯು ನೋವು ಮತ್ತು ಕೀಲುಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ದಿನವಿಡೀ ಕೆಲಸ ಮಾಡಿ ಸುಸ್ತಾದವರು ಅಥವಾ ಕೀಲು ನೋವಿನಿಂದ ಬಳಲುವವರು, 20 ದಿನಗಳ ಕಾಲ ರಾತ್ರಿ ಮಲಗುವ ಮುನ್ನ ಅರಿಶಿನ ಹಾಲು ಕುಡಿದರೆ ಕ್ರಮೇಣ ಪರಿಹಾರ ಸಿಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಅರಿಶಿನವು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದು ಯಕೃತ್ತಿನ (ಲಿವರ್) ಕಾರ್ಯವನ್ನು ಸುಧಾರಿಸಿ, ಜೀರ್ಣರಸಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಲು ಹೊಟ್ಟೆಯಲ್ಲಿ ತಂಪು ನೀಡುವ ಗುಣವನ್ನು ಹೊಂದಿರುವುದರಿಂದ, ಅಸಿಡಿಟಿ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತವೆ. 20 ದಿನಗಳ ಕಾಲ ಅರಿಶಿನ ಹಾಲು ಕುಡಿದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗಿ, ಹೊಟ್ಟೆ ಹಗುರವಾದಂತೆ ಭಾಸವಾಗುತ್ತದೆ.

ಹಾಲಿನಲ್ಲಿರುವ ‘ಟ್ರಿಪ್ಟೋಫಾನ್’ ಎಂಬ ಅಮೈನೋ ಆಸಿಡ್, ಮೆದುಳಿನಲ್ಲಿ ಸಿರೊಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಅರಿಶಿನ ಹಾಲು ಕುಡಿದರೆ ಒತ್ತಡ ಕಡಿಮೆಯಾಗಿ, ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ. 20 ದಿನಗಳ ಕಾಲ ಈ ಅಭ್ಯಾಸವನ್ನು ಮುಂದುವರಿಸಿದರೆ ನಿದ್ರಾಹೀನತೆ ಮತ್ತು ಟೆನ್ಷನ್‌ನಂತಹ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ

ತಜ್ಞರ ಪ್ರಕಾರ, ಅರಿಶಿನವು ನೈಸರ್ಗಿಕ ಆ್ಯಂಟಿಸೆಪ್ಟಿಕ್ ಆಗಿ ಕೆಲಸ ಮಾಡುತ್ತದೆ. ಸಣ್ಣಪುಟ್ಟ ಗಾಯಗಳು, ಸ್ನಾಯುಗಳ ಗಾಯಗಳು ಮತ್ತು ಆಂತರಿಕ ಊತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಕ್ರೀಡಾಪಟುಗಳು ಅಥವಾ ಹೆಚ್ಚು ದೈಹಿಕ ಶ್ರಮ ಮಾಡುವವರು 20 ದಿನಗಳ ಕಾಲ ಅರಿಶಿನ ಹಾಲು ಕುಡಿದರೆ, ಚೇತರಿಕೆ ವೇಗವಾಗಿ ಆಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಆದರೆ, ಮಧುಮೇಹ, ಹಾಲಿನ ಅಲರ್ಜಿ, ಮತ್ತು ಪಿತ್ತಕೋಶದ (ಗಾಲ್ ಬ್ಲಾಡರ್) ಸಮಸ್ಯೆಗಳಿರುವವರು ಅರಿಶಿನ ಹಾಲು ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.

Source link
Turmeric Milk: ನಿಮ್ಮ ಮನೆಯಲ್ಲಿಯೇ ಈ 'ಅಮೃತದ ಹಾಲು' ರೆಡಿ ಮಾಡಬಹುದು, ಯಾಕೆ ಇನ್ನೂ ಈ ಬಗ್ಗೆ ತಿಳ್ಕೊಂಡಿಲ್ಲ?