ಪ್ರೇಮಿಗಳ ದಿನ ರೊಮ್ಯಾಂಟಿಕ್ ಫೋಟೋ ಹರಿಬಿಟ್ಟ ಪೂನಂ, ಮತ್ತೆ ಕಿಚ್ಚು ಹಚ್ಚಿದ ವಿವಾದಿತ ಮಾಡೆಲ್ , ಪೂನಂ ರೊಮ್ಯಾಂಟಿಂಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಸೈಲೆಂಟ್ ಆಗಿದ್ದ ಪೂನಮ್ ಪಾಂಡೆ ಇದೀಗ ದಿಢೀರ್ ಪ್ರತ್ಯಕ್ಷದ ಹಿಂದಿನ ಕಾರಣವೇನು?

ಗರ್ಭಕಂಠ ಕ್ಯಾನ್ಸರ್ ಪ್ರಚಾರದ ಸ್ಟಂಟ್ ಮಾಡಿ ಕೈಸುಟ್ಟುಕೊಂಡ ಬಳಿಕ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಇದೀಗ ಪ್ರೇಮಿಗಳ ದಿನ ಪ್ರತ್ಯಕ್ಷರಾಗಿದ್ದಾರೆ. ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ. ಇದೀಗ ಪೂನಂ ಪಾಂಡೆ ಮತ್ತೆ ಪ್ರೀತಿಯಲ್ಲಿ ಬಿದ್ರಾ ಅನ್ನೋ ಅನುಮಾನಗಳು ಹೆಚ್ಚಾಗಿದೆ. ಕಾರಣ ರೊಮ್ಯಾಂಟಿಕ್ ಫೋಟೋ ಹಿಂದಿರುವ ವ್ಯಕ್ತಿ.

ಪೂನಂ ಪಾಂಡೆ ಫೋಟೋ ಹಿಂದೆ ಮಿಸ್ಟ್ರಿ ಮ್ಯಾನ್ ಇದ್ದಾರೆ. ಇದು ಯಾರು ಅನ್ನೋ ಸುಳಿವ ಪೂನಂ ಪಾಂಡೆ ನೀಡಿಲ್ಲ. ಪೂನಂ ಪಾಂಡೆ ಬಿಗಿದಪ್ಪಿಕೊಂಡಿರುವ ಫೋಟೋ ಇದಾಗಿದೆ. ಹಲವು ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಎಲ್ಲಾ ಫೋಟೋದಲ್ಲಿ ಬಾಯ್‌ಫ್ರೆಂಡ್ ಎಂಬಂತಿರುವ ವ್ಯಕ್ತಿಯ ಮುಖ ಮರೆಮಾಚಲಾಗಿದೆ.

ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಪೂನಂ ಪಾಂಡೆ ಇದು ನನ್ನ ಸಂತೋಷದ ಸಾಮ್ರಾಜ್ಯ ಎಂದು ಹೇಳಿಕೊಂಡಿದ್ದಾರೆ. ಆದರೆ ಪೂನಂ ಪಾಂಡೆ ತನ್ನ ರಿಲೇಶನ್‌ಶಿಪ್ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅಭಿಮಾನಿಗಳು ಪೂನಂ ಪಾಂಡೆ ಹೊಸ ಪ್ರೀತಿಯಲ್ಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೂನಂ ಪಾಂಡೆ ಪ್ರೀತಿ, ಬಾಯ್‌ಫ್ರೆಂಡ್ ಸೇರಿದಂತೆ ಹಲವು ವಿಚಾರಗಳನ್ನು ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದರು. ಈ ವೇಳೆ ತನ್ನ ಕೆಲ ವಿಡಿಯೋಗಳನ್ನು ಮಾಜಿ ಗಳೆಯ ಲೀಕ್ ಮಾಡಿ ತೀವ್ರ ಸಂಕಷ್ಟ ತಂದಿದ್ದರು ಎಂದು ಬಹಿರಂಗಪಡಿಸಿದ್ದರು. ಇದೇ ವೇಳೆ ರಿಲೇಶನ್‌ಶಿಪ್ ನಂಬಿಕೆ ಕ್ಷೀಣಿಸುತ್ತಿದೆ ಎಂದಿದ್ದರು.

ಪೂನಂ ಪಾಂಡೆ ಪ್ರತಿ ಬಾರಿ ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. 2011ರ ವಿಶ್ವಕಪ್ ಟೂರ್ನಿ ವೇಳೆ ಬೆತ್ತಲೆಯಾಗುವುದಾಗಿ ಹೇಳಿ ಕೋಲಾಹಲ ಸೃಷ್ಟಿಸಿದ್ದ ಪೂನಂ ಪಾಂಡೆ ಪ್ರತಿ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಪ್ರಚಾರದಲ್ಲಿ ಪೂಂ ಪಾಂಡೆ ಮೃತ ಎಂದು ಪ್ರಚಾರ ಮಾಡಿದ ಪರಿಣಮಾ ಪೂನಂ ವಿರುದ್ಧ ದೂರು ದಾಖಲಾಗಿತ್ತು.

ವಿವಾದಗಳಿಂದಲೇ ಸದ್ದು

Source link
ಪ್ರೇಮಿಗಳ ದಿನ ರೊಮ್ಯಾಂಟಿಕ್ ಫೋಟೋ ಹರಿಬಿಟ್ಟ ಪೂನಂ, ಮತ್ತೆ ಕಿಚ್ಚು ಹಚ್ಚಿದ ವಿವಾದಿತ ಮಾಡೆಲ್