ಮದುವೆ ಸುದ್ದಿಯ ನಡುವೆ, ರಶ್ಮಿಕಾ ಮಂದಣ್ಣ ಪ್ರೇಮಿಗಳ ದಿನದಂದು ವಿಕ್ಕಿ ಕೌಶಲ್ ಅವರನ್ನು ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು? ರಾತ್ರಿಯ ವೇಳೆ ಅವರು ಇದನ್ನು ನೆನಪಿಸಿಕೊಂಡದ್ದು ಏಕೆ? ಇಲ್ಲಿದೆ ಡಿಟೇಲ್ಸ್.

ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಮದುವೆಯ ವಿಷಯದಿಂದ ಸದ್ದು ಮಾಡುತ್ತಿದ್ದಾರೆ. ಇವರು ತಮ್ಮ ಮದುವೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ಇದಾಗಲೇ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇದೆ.

ಇಂದು ಪ್ರೇಮಿಗಳ ದಿನವಾಗಿರುವ ಕಾರಣ, ರಶ್ಮಿಕಾ ಸಹಜವಾಗಿ ವಿಜಯ ದೇವರಕೊಂಡ ಅವರ ಜೊತೆ ಕಾಲ ಕಳೆಯಬೇಕಿತ್ತು. ಆದರೆ ಈ ಬಗ್ಗೆ ಅವರು ಯಾವುದೇ ಅಪ್ಡೇಟ್ ಕೊಡದೆ, ರಾತ್ರಿ 10 ಗಂಟೆಗೆ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ನಟ ವಿಕಿ ಕೌಶಲ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಈ ಕುರಿತು ಒಂದು ಭಾವುಕ ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಈ ಪೋಸ್ಟ್ ಮಾಡಲು ಕಾರಣ, ಈ ಜೋಡಿಯ ಸೂಪರ್ ಹಿಟ್ ಬ್ಲಾಕ್‌ಬಸ್ಟರ್ ಛಾವಾ ಚಿತ್ರ ಬಿಡುಗಡೆಗೊಂಡು ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ, ಅದರ ಪೋಸ್ಟರ್ ಅನ್ನು ಅವರು ಶೇರ್ ಮಾಡಿದ್ದಾರೆ. ಇಂದು ನೆನಪಿನ ಹಾದಿಯಲ್ಲಿ ಸಾಗುತ್ತಿದ್ದೇನೆ. ಇದು ಎಂತಹ ವಿಶೇಷ ಚಿತ್ರವಾಗಿತ್ತು. ನಿಜಕ್ಕೂ ನಿಜಕ್ಕೂ ಕೃತಜ್ಞತೆಗಳು ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ, ಛಾವಾ (Chhaava- ಸಿಂಹದ ಮರಿ) ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಸಾಬೀತಾಗಿದೆ. ಐತಿಹಾಸಿಕ ಹಿನ್ನೆಲೆಯಿರುವ ಚಲನಚಿತ್ರಗಳು ಈ ಪರಿಯಲ್ಲಿ ಸೂಪರ್‌ಹಿಟ್ ಆಗುವುದು ಕಡಿಮೆಯೇ. ಆದರೆ ಛಾವಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎನ್ನಿಸಿಕೊಂಡಿದೆ.

ಈ ಚಿತ್ರದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದು, ಮತ್ತೊಮ್ಮೆ ಲಕ್ಕಿ ಸ್ಟಾರ್ ಎಂದು ಸಾಬೀತಾದವರು. ಅನಿಮಲ್’, ‘ಪುಷ್ಪ 2’ ಬಳಿಕ ‘ಛಾವಾ’ ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಕ್ರೌರ್ಯದಿಂದ ತುಂಬಿದ ಅನಿಮಲ್‌ಗಿಂತಲೂ ಭಿನ್ನವಾಗಿ ಛಾವಾದಲ್ಲಿ ಇತಿಹಾಸದ ಸತ್ಯವನ್ನು ತೆರೆದಿಟ್ಟಿರುವ ಪಾತ್ರದಲ್ಲಿ ರಶ್ಮಿಕಾ ನಟಿಸಿರುವುದಕ್ಕೆ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಷ್ಟಕ್ಕೂ ಈ ಚಿತ್ರ ಇನ್ನಷ್ಟು ಎಲ್ಲರ ಗಮನ ಸೆಳೆಯಲು ಕಾರಣವಾದದ್ದು, ಈ ವೀರ ಸಾಂಭಾಜಿ ಕುರಿತು ಚರಿತ್ರೆಯಿಂದಾಗಿ. ತಿರುಚಿದ ಇತಿಹಾಸವನ್ನು ಮಕ್ಕಳ ತಲೆಗೆ ತುಂಬಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಅದನ್ನು ಹೊರತುಪಡಿಸಿ ಇತಿಹಾಸದ ಸತ್ಯವನ್ನು ಈ ಸಿನಿಮಾ ತೋರಿಸುವ ಮೂಲಕ ಸೂಪರ್‌ಹಿಟ್ ಎನ್ನಿಸಿದೆ.

Source link
ಪ್ರೇಮಿಗಳ ದಿನದ ರಾತ್ರಿ ನಟ ವಿಕಿ ಕೌಶಲ್ ನೆನಪಿಸಿಕೊಂಡು Rashmika Mandanna ಭಾವುಕ ಪೋಸ್ಟ್