ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 15ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 15ರ ದಿನಭವಿಷ್ಯ


ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ, ಶೈಕ್ಷಣಿಕವಾಗಿ ಬಹಳ ಮುಖ್ಯವಾದ ಪರೀಕ್ಷೆಗಳನ್ನು ಇನ್ನೇನು ಎದುರಿಸಲು ಎಂದಾದಲ್ಲಿ ಗ್ರೀನ್ ಅವೆಂಚೂರಿಯನ್ ಸ್ಟೋನ್ ಬಳಸಿ. ಇನ್ನು ನಿಮ್ಮಲ್ಲಿ ಯಾರ ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುವಿರಿ ಅಂಥವರಿಗೆ ಈ ಸ್ಟೋನ್ ಸೂಕ್ತ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾರ ಹಳೇ ನಾಣ್ಯ, ಅಂಚೆ ಚೀಟಿ ಅಥವಾ ಪುರಾತನ ವಸ್ತುಗಳ ಖರೀದಿ ಹಾಗೂ ಮಾರಾಟವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುತ್ತೀರೋ ಅಂಥವರಿಗೆ ಆದಾಯದಲ್ಲಿ ಹೆಚ್ಚು ಆಗುವ ಸಾಧ್ಯತೆ ಇದೆ. ಕ್ಯಾಟರಿಂಗ್ ಮಾಡುತ್ತಿರುವವರು ದಿಢೀರನೆ ನಾನಾ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲಸಕ್ಕೆ ಬರುವುದಾಗಿ ಮಾತು ನೀಡಿದ್ದಂಥ ವ್ಯಕ್ತಿಗಳು ಏಕಾಏಕಿ ತಮ್ಮಿಂದ ಬರುವುದಕ್ಕೆ ಸಾಧ್ಯವಿಲ್ಲ ಎಂದು ಬಿಡಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ಈ ದಿನ ಸಾಧ್ಯವಾದಷ್ಟೂ ದೂರದಲ್ಲಿ ಇರುವುದು ಕ್ಷೇಮ. ಬಾಯಿ ರುಚಿಗೆ ಬಿದ್ದ ಹೊಟ್ಟೆ ನೋವು, ಹೊಟ್ಟೆಯುಬ್ಬರ ಅಥವಾ ಹೊಟ್ಟೆಯುರಿ ಇಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುವಂತೆ ಆಗಲಿದೆ. ಈ ಹಿಂದೆ ಬಹಳ ಹಣ ಖರ್ಚು ಮಾಡಿ, ಖರೀದಿಸಿ ತಂದಂತಹ ಸಲಕರಣೆ ಅಥವಾ ಉಪಕರಣಗಳು ಏನಾದರೊಂದು ಸಮಸ್ಯೆ ತರಬಹುದು. ತಕ್ಷಣಕ್ಕೆ ಏನು ಪರಿಹಾರ ಎಂಬುದು ತಿಳಿಯದೆ ಬೇಸರ ಪಡುವಂತೆ ಆಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಏಕ ಕಾಲಕ್ಕೆ ಹಲವು ಕೆಲಸಗಳನ್ನು ನಿಗಾ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಇದು ಒತ್ತಡವಾಗಿ ಮಾರ್ಪಡಲಿದೆ. ಇನ್ನು ಮಕ್ಕಳಿರುವವರಿಗೆ ಅವರ ಆರೋಗ್ಯ ಸ್ಥಿತಿಯು ಏಕಾಗ್ರತೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದಂಥ ಸ್ಥಿತಿಯನ್ನು ಸೃಷ್ಟಿ ಮಾಡಲಿವೆ. ನೀವು ಬಹಳ ಆಸ್ಥೆ ವಹಿಸಿ, ಶ್ರಮ ಪಟ್ಟು ಮಾಡಿದ ಪ್ರಾಜೆಕ್ಟ್- ಕಾರ್ಯಗಳ ಬಗ್ಗೆ ಸಾಕಷ್ಟು ಉದಾಸೀನ- ಉಡಾಫೆಯಿಂದ ಇರುವುದು ಸಿಟ್ಟಿಗೆ ಕಾರಣ.

ಲೇಖನ- ಸ್ವಾತಿ ಎನ್.ಕೆ.

ರಂದು ಪ್ರಕಟಿಸಲಾಗಿದೆ – 12:15 am, ಭಾನುವಾರ, 15 ಫೆಬ್ರವರಿ 26



Source link

Leave a Reply

Your email address will not be published. Required fields are marked *