Headlines

Bengaluru: ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು

Bengaluru: ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು

Bengaluru: ಡಿವೈಡರ್ ಹಾರಿ ಎದುರು ಬರ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರ್; ಐವರು ವಿದ್ಯಾರ್ಥಿಗಳ ಸಾವು
ಬೆಂಗಳೂರಿನ ಹೊರವಲಯದ ತುಮಕೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗದಿಂದ ಬಂದ ಕಾರು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಇಬ್ಬರನ್ನು ಲಲಿತ್ ಮತ್ತು ಹರ್ಷಿತ್ ಎಂದು ಗುರುತಿಸಲಾಗಿದೆ.
ಬೆಂಗಳೂರು: ಹೊಸಕೋಟೆ ದುರಂತ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದು, ಐವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತುಮಕೂರು ರಸ್ತೆಯ ನವಯುಗ ಟೋಲ್ ಸಮೀಪದ ಜಿಂದಾಲ್ ಆಸ್ಪತ್ರೆ ಯ ಫ್ಲೈ ಓವರ್ ಮೇಲೆ ಅಪಘಾತ ಸಂಭವಿಸಿದೆ.

ಬೆಂಗಳೂರಿನ ನೆಲಮಂಗಲ ಟೋಲ್ ಬಳಿ TATA INDICA ಕಾರ್ ಅಪಘಾತಕ್ಕೊಳಗಾಗಿದೆ. ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರ್‌ನಲ್ಲಿದ್ದವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತುಮಕೂರು ಡಿಪೋಗೆ ಸೇರಿದ್ದ ಸಾರಿಗೆ ಬಸ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿತ್ತು. ಅಪಘಾತದ ಬಳಿಕ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಕಳುಹಿಸಿ ಕೊಡಲಾಗಿದೆ. ಬಸ್ ಮುಂಭಾಗದ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಾರಿನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಡಿಕ್ಕಿ ರಭಸಕ್ಕೆ ಕಾರ್‌ನಲ್ಲಿಯೇ ಶವಗಳು ಅಪ್ಪಚ್ಚಿಯಾಗಿ ಸಿಲುಕಿಕೊಂಡಿವೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ಮೃತ ಐವರಲ್ಲಿ ಇಬ್ಬರ ಹೆಸರು ಮಾತ್ರ ತಿಳಿದು ಬಂದಿದೆ. ಆ ಇಬ್ಬರನ್ನು ಲಲಿತ್ ಮತ್ತು ಹರ್ಷಿತ್ ಎಂದು ಗುರುತಿಸಲಾಗಿದೆ. ಮೃತ ಐವರು ವಿದ್ಯಾರ್ಥಿಗಳಾಗಿದ್ದರು. ಲಲಿತ್ ದೊಡ್ಡಬಳ್ಳಾಪುರದ ನಿವಾಸಿಯಾಗಿದ್ದು, ಬೆಂಗಳೂರಿನ ರಾಜನಕುಂಟೆಯ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದನು.

ಶನಿವಾರ ರಾತ್ರಿ ಸುಮಾರು 8ಕ್ಕೆ ಲಲಿತ್ ಮನೆಗೆ ಬಂದಿದ್ದನು. ಸ್ನೇಹಿತನ ಮನೆಗೆ ಹೋಗುತ್ತಿರೋದಾಗಿ ತಾಯಿ ಬಳಿ ಹೇಳಿದ್ದನು. ರಾತ್ರಿ ಹೋಗಿದ್ದ ಮಗ ಈಗ ಶವವಾಗಿರೋದನ್ನು ಕಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಗಳೇ ಪ್ರಪಂಚ ಅಂದುಕೊಂಡಿದ್ದ ತಾಯಿಗೆ ಸಿಕ್ಕಿದ್ದು ಘೋರ ಸಾವು; ನಿದ್ರೆಯಲ್ಲೇ ಹೆತ್ತವಳನ್ನು ಚಿತೆಗೇರಿಸಿದ ಪಾಪಿ ಮಗಳು!

ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .

ಇದನ್ನೂ ಓದಿ: ಹೊಸಕೋಟೆ ಭೀಕರ ಅಪಘಾತದ ಇಂಪ್ಯಾಕ್ಟ್, PWD-ನ್ಯಾಷನಲ್ ಹೈವೆ ಅಥಾರಿಟಿ-ಪೊಲೀಸರಿಂದ ಜಂಟಿ ಸರ್ವೆ

Source link

Leave a Reply

Your email address will not be published. Required fields are marked *