Headlines

ಏಕೈಕ ವೇಗಿ, ಮೂವರು ಸ್ಪಿನ್ನರ್​: ಹೀಗಿರಲಿದೆ ಟೀಮ್ ಇಂಡಿಯಾದ ರಣತಂತ್ರ

ಏಕೈಕ ವೇಗಿ, ಮೂವರು ಸ್ಪಿನ್ನರ್​: ಹೀಗಿರಲಿದೆ ಟೀಮ್ ಇಂಡಿಯಾದ ರಣತಂತ್ರ


T20 ವಿಶ್ವಕಪ್ 2026: T20 ನಿಂದ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ನಡೆಯಲಿರುವ ಟಿ20 ನಿಂದ 28ನೇ ಆವೃತ್ತಿಯ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ಮುನ್ಸೂಚನೆ ಸಿಕ್ಕಿದೆ. ಅದರಂತೆ ಭಾರತ ತಂಡ ಆಡುವ ಬಳಗದಲ್ಲಿ 2 ಬದಲಾವಣೆಯಾಗುವುದು ಖಚಿತ.

ಈ ಬದಲಾವಣೆಯ ಸ್ಫೋಟಕ ದಾಂಡಿಗ ಅಭಿಷೇಕ್ ಶರ್ಮಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ನಮೀಬಿಯ ವಿರುದ್ಧ ಪಂದ್ಯದಿಂದ ಹೊರಗುಳಿದಿದ್ದ ಅಭಿಷೇಕ್ ಸಂಪೂರ್ಣ ಚೇತರಿಸಿಕೊಂಡಿದ್ದು, ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ದೃಢಪಡಿಸಿದ್ದಾರೆ.

ಜೊತೆಗೆ ಕುಲ್ದೀಪ್ ಯಾದವ್ ಅವರನ್ನು ಸಹ ಪ್ಲೇಯಿಂಗ್ ಇಲೆವೆನ್ ನಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಚೈನಾಮನ್ ಬೌಲರ್ ಆಗಿರುವ ಕುಲ್ದೀಪ್ ಇಂತಹ ಪಿಚ್‌ಗಳಲ್ಲಿ ಹೆಚ್ಚು ಪರಿಣಾಮಕಾರಿ. ಹೀಗಾಗಿ ಅವರು ಸಹ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಪಾಕ್ ವಿರುದ್ಧ ಕುಲದೀಪ್ ದಾಖಲೆ ಹೇಗಿದೆ?

2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಕುಲ್ದೀಪ್ ಯಾದವ್ ಪಾಕಿಸ್ತಾನ್ ವಿರುದ್ಧ 30 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಜೊತೆಗೆ ಆ ಸಮಯದಲ್ಲಿ ಒಟ್ಟು 17 ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಪಾಕಿಸ್ತಾನ್ ವಿರುದ್ಧ ಈವರೆಗೆ 10 ಪಂದ್ಯಗಳನ್ನಾಡಿರುವ ಕುಲದೀಪ್ ಯಾದವ್ 12.56 ಸರಾಸರಿಯಲ್ಲಿ ಒಟ್ಟು 23 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಕೊಲಂಬೊ ಪಿಚ್‌ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಕುಲದೀಪ್ ಯಾದವ್ ಟ್ರಂಪ್ ಕಾರ್ಡ್ ಆಗಬಹುದು.

ಏಕೈಕ ವೇಗಿ?

ಕುಲ್ದೀಪ್ ಯಾದವ್ ಅವರನ್ನು ಕಣಕ್ಕಿಳಿಸುವುದರಿಂದ ಟೀಮ್ ಇಂಡಿಯಾ ಏಕೈಕ ವೇಗಿಯು ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾ ಪರ ಪ್ರಮುಖ ವೇಗಿಯಾಗಿ ಜಸ್ ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದಾರೆ. ಇನ್ನು ಹೆಚ್ಚುವರಿ ವೇಗದ ಬೌಲರ್‌ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಸಾಥ್ ನೀಡಲಿದ್ದಾರೆ. ಅಂದರೆ ಕುಲದೀಪ್ ಯಾದವ್‌ಗೆ ಅವಕಾಶ ನೀಡಲು ಅರ್ಷದೀಪ್ ಸಿಂಗ್ ಅವರನ್ನು ಕೈ ಬಿಡಬಹುದು.

ಸ್ಪಿನ್ನಿಂಗ್ ತಂತ್ರ:

ಶ್ರೀಲಂಕಾದ ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗದಿದ್ದರೆ, ಭಾರತ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಇಂದಿನ ಪಿಚ್ ಸಾಂಪ್ರದಾಯಿಕವಾಗಿ ಕಪ್ಪು ಮಣ್ಣಿನಿಂದ ಕೂಡಿದ್ದು, ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಾಯಿತು. ಚೆಂಡು ಪಿಚ್‌ನಲ್ಲಿ ಸ್ವಲ್ಪ ಹಿಡಿತ ಪಡೆಯುವುದರಿಂದ ಬ್ಯಾಟರ್‌ಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಸವಾಲಾಗಬಹುದು.

ಇದನ್ನೂ ಓದಿ: ಮೂರೇ 3 ಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಸೌತ್ ಆಫ್ರಿಕಾ

ಇದಾಗ್ಯೂ ಆರಂಭದಲ್ಲಿ ವೇಗಿಗಳು ಹೊಸ ಚೆಂಡಿನಲ್ಲಿ ಸ್ವಲ್ಪ ಸ್ವಿಂಗ್ ಮಾಡಬಲ್ಲರು. ಹೀಗಾಗಿ ಟೀಮ್ ಇಂಡಿಯಾ ಬುಮ್ರಾ ಹಾಗೂ ಹಾರ್ದಿಕ್ ನಿಂದ ಬೌಲಿಂಗ್ ಮಾಡಿಸಿ ಆ ಬಳಿಕ ಸ್ಪಿನ್ನರ್ ಗಳ ಮೂಲಕ ರಣತಂತ್ರ ರೂಪಿಸುವ ಸಾಧ್ಯತೆಯಿದೆ.

5+3+3 ಸಂಯೋಜನೆ:

ಪಾಕಿಸ್ತಾನ್ ವಿರುದ್ಧ ಈ ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ 5+3+3 ಸಂಯೋಜನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಅಂದರೆ ಇಲ್ಲಿ ಐವರು ಬ್ಯಾಟರ್‌ಗಳು + ಮೂವರು ಆಲ್‌ರೌಂಡರ್‌ಗಳು + ಮೂವರು ಬೌಲರ್‌ಗಳು ಇರಲಿದ್ದಾರೆ.

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಕಣಕ್ಕಿಳಿದರೆ, ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಇನ್ನು ಬೌಲರ್‌ಗಳಾಗಿ ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅದರಂತೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿರುತ್ತದೆ…

  • ಅಭಿಷೇಕ್ ಶರ್ಮಾ
  • ಇಶಾನ್ ಕಿಶನ್ (ವಿಕೇಟ್ ಕೀಪರ್)
  • ತಿಲಕ್ ವರ್ಮಾ
  • ಸೂರ್ಯಕುಮಾರ್ ಯಾದವ್ (ನಾಯಕ)
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ರಿಂಕು ಸಿಂಗ್
  • ಅಕ್ಷರ್ ಪಟೇಲ್
  • ವರುಣ್ ಚಕ್ರವರ್ತಿ
  • ಕುಲದೀಪ್ ಯಾದವ್
  • ಜಸ್ಪ್ರೀತ್ ಬುಮ್ರಾ



Source link

Leave a Reply

Your email address will not be published. Required fields are marked *