Headlines

ಫೇಸ್‌ಬುಕ್, ಇನ್‌ಸ್ಟಾ ಸೆಟ್ಟಿಂಗ್ಸ್ ಬದಲಿಸಿದ್ರೆ ಮಾತ್ರ ವಿದ್ಯಾರ್ಥಿ, ವಿಸಿಟರ್ ವೀಸಾ; ಅಮೆರಿಕ ಮಾರ್ಗಸೂಚಿ | Us Embassy In India Guidelines Student Visa Applicants Must Set Social Media Accounts To Public

ಫೇಸ್‌ಬುಕ್, ಇನ್‌ಸ್ಟಾ ಸೆಟ್ಟಿಂಗ್ಸ್ ಬದಲಿಸಿದ್ರೆ ಮಾತ್ರ ವಿದ್ಯಾರ್ಥಿ, ವಿಸಿಟರ್ ವೀಸಾ; ಅಮೆರಿಕ ಮಾರ್ಗಸೂಚಿ | Us Embassy In India Guidelines Student Visa Applicants Must Set Social Media Accounts To Public



ವಿದ್ಯಾರ್ಥಿ ವೀಸಾಗೆ ಅರ್ಜಿ ಸಲ್ಲಿಸುವ ಭಾರತೀಯರು ಕಡ್ಡಾಯವಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ (ಟ್ವಿಟರ್) ಖಾತೆಯ ಸೆಟ್ಟಿಂಗ್ಸ್ ‌ನಲ್ಲಿ ಕೆಲ ಬದಲಾವಣೆ ಮಾಡಲು ಅಮರಿಕ ರಾಯಭಾರ ಕಚೇರಿ ಸೂಚಿಸಿದೆ. ವೀಸಾಗೂ, ಸೋಶಿಯಲ್ ಮೀಡಿಯಾ ಖಾತೆಗೂ ಏನು ಸಂಬಂಧ?

ನವದೆಹಲಿ (ಜೂ.24 ) ಭಾರತದಲ್ಲಿರುವ ಅಮೆರಿಕ ಎಂಬಸಿ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು, ವಿಸಿಟಿರ್ ವೀಸಾ ಪಡೆಯಲು ಬಯಸುವ ಭಾರತೀಯರು ಈ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿದರೆ ಮಾತ್ರ ವೀಸಾ ಲಭ್ಯವಾಗಲಿದೆ. ಪ್ರಮುಖವಾಗಿ ವಿದ್ಯಾಭ್ಯಾಸಕ್ಕಾಗಿ ಅಮೆರಿಕಗೆ ತೆರಳಲು ಬಯಸುತ್ತಿರುವ ವಿದ್ಯಾರ್ಥಿಗಳು, ವಿಸಿಟರ್ ವೀಸಾ ಎಕ್ಸ್‌ಚೇಂಜ್ ಬಯಸುತ್ತಿರುವ ಭಾರತೀಯರು ಅರ್ಜಿ ಸಲ್ಲಿಸುವಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ (ಟ್ವಿಟರ್) ಸೇರಿದಂತೆ ಇತರ ಖಾತೆಗಳ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಬೇಕು. ಇಲ್ಲಿದಿದ್ದರೆ, ವೀಸಾ ನಿರಾಕರಿಸಲಾಗುತ್ತದೆ.

ಸೋಶಿಯಲ್ ಮೀಡಿಯಾ ಸೆಟ್ಟಿಂಗ್ಸ್‌ನಲ್ಲಿ ಏನು ಮಾಡಬೇಕು?

ಎಫ್, ಎಂ ಹಾಗೂ ಜೆ ನಾನ್ ಇಮಿಗ್ರೆಂಟ್ ವೀಸಾಗೆ ಅರ್ಜಿ ಸಲ್ಲಿಸುವವರು ಸೋಶಿಯಲ್ ಮೀಡಿಯಾ ಸೆಟ್ಟಿಂಗ್ಸ್ ಬದಲಿಸಬೇಕು. ಅರ್ಜಿ ಸಲ್ಲಿಸುವವರು ತಮ್ಮ ಸೋಶಿಯಲ್ ಖಾತೆಯಲ್ಲಿ ಸೆಟ್ಟಿಂಗ್ಸ್‌ನಲ್ಲಿ ಖಾತೆ ಪ್ರೈವೇಟ್ ಎಂದಿದ್ದರೆ, ಅದನ್ನು ಪಬ್ಲಿಕ್ ಮಾಡಬೇಕು. ವೀಸಾಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಸೋಶಿಯಲ್ ಮೀಡಿಯಾ ಖಾತೆ ಮಾಹಿತಿ ನಮೂದಿಸಬೇಕು. ಆದರೆ ಈ ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳು ಪಬ್ಲಿಕ್ ಆಗಿರಬೇಕು.

ವೀಸಾಗೂ ವೈಯುಕ್ತಿಕ ಸೋಶಿಯಲ್ ಮೀಡಿಯಾಗೂ ಏನು ಸಂಬಂಧ?

ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಯಲ್ಲಿ ಇದರ ಕಾರಣವನ್ನು ಹೇಳಿದ್ದಾರೆ. ಅಮೆರಿಕ ಅಧಿಕಾರಿಗಳು ಅರ್ಜಿದಾರರ ಸಕ್ಯೂರಿಟಿ ಸ್ಕ್ರೀನಿಂಗ್ ನಡೆಯಲಿದೆ. ಅಧಿಕಾರಿಗಳು ಅರ್ಜಿದಾರರ ಗುರುತು, ವೀಸಾ ಅರ್ಹತೆ, ಭದ್ರತಾ ವಿಚಾರಕ್ಕೆ ಸಂಬಂಧಿಸಿ ಈ ಸೋಶಿಯಲ್ ಮೀಡಿಯಾ ಖಾತೆಗಳು ಮುಖ್ಯ ಎಂದಿದೆ. ಹೀಗಾಗಿ ಅಧಿಕಾರಿಗಳು ಪ್ರತಿ ಅರ್ಜಿದಾರರ ಸೋಶಿಯಲ್ ಮೀಡಿಯಾ ಪರೀಶೀಲನೆ ನಡೆಯಲಿದೆ. ಇದಕ್ಕಾಗಿ ಸೋಶಿಯಲ್ ಮೀಡಿಯಾ ಖಾತೆಯನ್ನು ಪಬ್ಲಿಕ್ ಮಾಡಿರುವುದು ಅತೀ ಅಗತ್ಯ ಎಂದಿದೆ.

ಅಮೆರಿಕಾ ನಿಯಮದ ಪ್ರಕಾರ ಅಧಿಕಾರಿಗಳು ಅರ್ಜಿದಾರರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕು. ಈ ಪೈಕಿ ಐಡೆಂಟಿ ವಿಚಾರಿಂದ ಅತೀ ಮುಖ್ಯವಾಗಿದೆ. ಅರ್ಜಿ ಸಲ್ಲಿಸುವ ಮೊದಲೇ ಸೋಶಿಯಲ್ ಮೀಡಿಯಾ ಖಾತೆಗಳನ್ನು ಪಬ್ಲಿಕ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ತಕ್ಷಣದಿಂದಲೇ ನಿಯಮ ಜಾರಿ

ಅಮೆರಿಕ ರಾಯಭಾರ ಕಚೇರಿ ಹೊರಡಿಸುವ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿದವರು ಮಾತ್ರ ವೀಸಾ ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಪರಿಶೀಲಿಸಿ ಅರ್ಹರಿಗೆ ವೀಸಾ ನೀಡಲಾಗುತ್ತದೆ. ಈ ನಿಯಮ ಈ ತಕ್ಷಣದಿಂದಲೇ ಜಾರಿಯಾಗಿದೆ. ಹೀಗಾಗಿ ಅಮೆರಿಕದ ಎಫ್, ಎಂ ಹಾಗೂ ಜೆ ವೀಸಾ ಬಯಸುವವರು ಸೋಶಿಯಲ್ ಮೀಡಿಯಾ ಖಾತೆ ಪಬ್ಲಿಕ್ ಮಾಡುವುದು ಅನಿವಾರ್ಯವಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ವಿವರ ದಾಖಲಿಸಬೇಕಿತ್ತು. ಆನ್‌ಲೈನ್ ಅರ್ಜಿಯಲ್ಲಿ ಖಾತೆ ಮಾಹಿತಿ, ಲಿಂಕ್ ಅಥವಾ ಹ್ಯಾಂಡಲ್ ಹಾಕಬೇಕಿತ್ತು. ಈ ವರ್ಷದಿಂದ ಈ ನಿಯಮ ಮತ್ತಷ್ಟು ಕಠಿಣಗೊಂಡಿದೆ.

 



Source link

Leave a Reply

Your email address will not be published. Required fields are marked *